ಬೆಂಗಳೂರು: ಜಾಗತಿಕವಾಗಿ ಭಾರತ ಹೆಚ್ಚು ಯುವ ಸಮುದಾಯವನ್ನು ಹೊಂದಿದೆ. ಇಲ್ಲಿ ಸಮಸ್ಯೆ ಆಧಾರಿತ ಚರ್ಚೆ ಹಾಗೂ ವಾದಗಳು ಮಂಡನೆಯಾಗಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಯು.ಟಿ. ಖಾದರ್,U.T. Khader
ರಾಜಸ್ಥಾನದ ಜೈಪುರದಲ್ಲಿ ನಡೆದ ಇಂಡಿಯನ್ ಯೂತ್ ಪಾರ್ಲಿಮೆಂಟ್‌ನ 27ನೇ ರಾಷ್ಟ್ರೀಯ ಅಧಿವೇಶನದ ಉದ್ಘಾಟ್ಜಚಿ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತಿಕ ಅಂಕಿ ಅಂಶಗಳ ಪ್ರಕಾರ ಭಾರತ 356
ಮಿಲಿಯ ಯುವಶಕ್ತಿ ಹೊಂದಿದೆ.
ಹಾಗಾಗಿ ದೇಶವನ್ನು ಯಂಗ್ ಇಂಡಿಯಾ ಎಂದು ಕರೆಯ ಲಾಗುತ್ತಿದೆ. ಇಲ್ಲಿ ಹೆಚ್ಚಾಗಿ ಸಮಸ್ಯೆ ಆಧಾರಿತ ಚರ್ಚೆಗಳು ನಡೆಯಬೇಕಿದೆ ಎಂದರು.
ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ ಪಾತ್ರ ಮಹತ್ವದ್ದು, ಆ ನಿಟ್ಟಿನಲ್ಲಿ ಸಂಸತ್ತು ಮತ್ತು ರಾಜ್ಯಗಳಲ್ಲಿರುವ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಾರ್ಯ ಚಟುವಟಿಕೆ ತಿಳಿದುಕೊಳ್ಳುವ ಅತ್ಯಗತ್ಯವಿದೆ. ಇಂಡಿಯನ್ ಯೂತ್ ಪಾರ್ಲಿಮೆಂಟ್ ಇವುಗಳನ್ನು ಅರಿಯಲು ಉತ್ತಮವಾದ ಮಾದರಿ ವೇದಿಕೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಹರಿಬಾವು ಕಿಶಾನರಾವ್ ಬಾಗೆª ಸಹಿತ ಗಣ್ಯರು ಉಪಸ್ಥಿತರಿದ್ದರು.