Advertisement

ವಿದ್ಯಾಗಮ ಸಮರ್ಪಕ ಅನುಷ್ಠಾನವಾಗಲಿ

07:22 PM Oct 09, 2020 | Suhan S |

ಚಿಕ್ಕಮಗಳೂರು: ವಿದ್ಯಾಗಮ ಕಾರ್ಯಕ್ರಮವನ್ನು ಶಿಕ್ಷಕರು ಮತ್ತು ಅನುಷ್ಠಾನ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಹ ನಿರ್ದೇಶಕರು ಹಾಗೂ ವಿದ್ಯಾಗಮ ಕಾರ್ಯಕ್ರಮದ ಜಿಲ್ಲಾ ನೋಡೆಲ್‌ ಅ ಧಿಕಾರಿ ಕೆಂಚೇಗೌಡ ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿದ್ಯಾಗಮ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿಅವರು ಮಾತನಾಡಿದರು.

ಕೋವಿಡ್‌-19ರ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಮಕ್ಕಳ ಔಪಚಾರಿಕ ಕಲಿಕೆಗೆ ಹಿನ್ನೆಡೆ ಉಂಟಾಗಿದೆ. ಈ ಸನ್ನಿವೇಶವುಮಕ್ಕಳ ಮುಂದಿನ ಕಲಿಕಾ ನಿರಂತರತೆಗೆ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಲಾಖೆ ಔಪಚಾರಿಕ ಶಿಕ್ಷಣಕ್ಕೆಪರ್ಯಾಯವಾಗಿ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇಟ್ಟುಕೊಳ್ಳುವ ಹಾಗೂ ಅವರಲ್ಲಿ ನಿರಂತರ ಕಲಿಕೆಯನ್ನು ಸ್ವಯಂ ಕಲಿಕಾ ವಿಧಾನಗಳ ಮೂಲಕ ಕಲಿಕಾ ಪ್ರಕ್ರಿಯೆಯನ್ನು ಮುಂದುವರಿಸಲು ವಿದ್ಯಾಗಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಶಾಲಾ ಶಿಕ್ಷಕರ ಸಮುದಾಯವು ಗ್ರಾಮ,ಸಮುದಾಯ, ಜನವಸತಿ ಕೇಂದ್ರಗಳಿಗೆ ತೆರಳಿ ತಾತ್ಕಾಲಿಕವಾಗಿ ರೂಪುಗೊಂಡ ಕಲಿಕಾಕೇಂದ್ರದಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಕ್ರಿಯಾಶೀಲಗೊಳಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದು, ಎಲ್ಲಾ ಶಿಕ್ಷಕರು, ಮತ್ತು ಜಿಲ್ಲೆಯ ಎಲ್ಲಾ ಅನುಷ್ಠಾನ ಅಧಿಕಾರಿಗಳು ಜವಾಬ್ದಾರಿವಹಿಸಿ ವಿದ್ಯಾಗಮಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.ಜೊತೆಗೆ ಇಲಾಖೆಯಿಂದ ಈಗಾಗಲೇ ಪ್ರಕಟಿಸಿರುವ ಸೇತುಬಂಧ ಸಾಹಿತ್ಯ, ಸುತ್ತೋಲೆ, ಮಾರ್ಗಸೂಚಿ,ಮಾಹೆವಾರು ಪಠ್ಯಸೂಚಿ, ಸಾಮರ್ಥ್ಯಗಳು, ಚಟುವಟಿಕೆಗಳು, ಕಲಿಕಾ ಫಲಕಗಳನ್ನು ಅನುಸರಿಸುವಂತೆ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಅಧಿಕಾರಿಗಳನ್ನು 2 ಜನರಂತೆ ಸುಮಾರು 16 ತಂಡಗಳನ್ನು ರಚಿಸಿ ಚಿಕ್ಕಮಗಳೂರು ತಾಲೂಕಿನ ವಿವಿಧ ಶಾಲೆಗಳಿಗೆ ವಿದ್ಯಾಗಮ ಪ್ರಗತಿ ಪರಿಶೀಲನೆಗೆ ಕಳುಹಿಸಿಕೊಟ್ಟರು. ಈ ಅ ಧಿಕಾರಿಗಳ ತಂಡ ಸ.ಪ್ರೌಢಶಾಲೆಯ ಮೂಗ್ತಿಹಳ್ಳಿ, ಎಲ್‌.ಬಿ.ಎಚ್‌.ಎಸ್‌. ಪ್ರೌಢಶಾಲೆ, ಅಲ್ಲಂಪುರ, ಹಿರೇಗೌಜ, ಕುರುವಂಗಿ, ಅಂಬಳೆ,ಗೌಡನಹಳ್ಳಿ, ಕೈಮರ, ಉದ್ದೇಬೋರನಹಳ್ಳಿ, ಲಕ್ಯಾ, ಆದಿಶಕ್ತಿನಗರ, ಕಣಿವೆ ದಾಸರಹಳ್ಳಿ ಇತ್ಯಾದಿಶಾಲೆಗಳಿಗೆ ತಂಡಗಳು ಭೇಟಿ ನೀಡಿದವು.ಸಭೆಯಲ್ಲಿ ಶಿಕ್ಷಣಾ ಧಿಕಾರಿಗಳು, ಉಪನಿರ್ದೇಶಕರು (ಆಡಳಿತ) ಶಿಕ್ಷಣಾ ಧಿಕಾರಿಗಳು(ಅಕ್ಷರ ದಾಸೋಹ) ಉಪ ಯೋಜನಾ ಸಮನ್ವಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್‌ನ ಹಿರಿಯ ಮತ್ತು ಕಿರಿಯ ಉಪನ್ಯಾಸಕರು, ಕ್ಷೇತ್ರ ಸಮನ್ವಯಾಧಿಕಾರಿಗಳು, ವಿಷಯ ಪರಿವೀಕ್ಷಕರು, ವಿದ್ಯಾಗಮ ಕಾರ್ಯಕ್ರಮದ ತಾಲೂಕು ನೋಡಲ್‌ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next