Advertisement

ಊರಿನ ಸೊಗಡಿನಲ್ಲೊಂದು ಕಥೆ ಪಡಿ ಮೂಡಲಿ: ರಿಷಭ್‌ ಶೆಟ್ಟಿ

12:06 AM Feb 20, 2023 | Team Udayavani |

ಮಂಗಳೂರು: ಕುವೆಂಪು, ಶಿವರಾಮ ಕಾರಂತರು ನನ್ನ ಊರಿನ ಸೊಗಡಿಗೆ ಬರಹದ ರೂಪ ಕೊಟ್ಟಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲ ಪ್ರದೇಶಗಳಲ್ಲಿಯೂ ಆಯಾಯ ಊರಿನ, ನೆಲದ ಸೊಗಡು ಬಿಂಬಿಸುವ ಕಥೆಗಾರರು ಮೂಡಿಬರಬೇಕು ಎಂದು “ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಹೇಳಿದರು.

Advertisement

ಮಂಗಳೂರು ಸಾಹಿತ್ಯ ಉತ್ಸವ ದಲ್ಲಿ ರವಿವಾರ ಮಾತನಾಡಿದ ಅವರು, ಕಾಂತಾರ ದೈವರಾಧನೆಯ ಸಿನೆಮಾವಲ್ಲ. ಅಲ್ಲಿ ಹಿಂದುಳಿದ ವರ್ಗದ ಧ್ವನಿ, ಕಾಡಂಚಿನ ಮಕ್ಕಳ ಕಥೆಯಿದೆ. ಕಾಂತಾರದ ಗೆಲುವು ನಿರೀಕ್ಷೆ ಮಾಡಿರಲಿಲ್ಲ. ರೀಜನಲ್‌ ವಿಚಾರದಿಂದ ಗ್ಲೋಬಲ್‌ ಮಟ್ಟದಲ್ಲಿ ಕನೆಕ್ಟ್ ಆಗಿದ್ದೇವೆ ಎನ್ನುವುದಕ್ಕೆ ಈ ಸಿನೆಮಾ ಉದಾಹರಣೆ ಎಂದರು.

ಮಂಗಳೂರು ಕನ್ನಡ ಭಾಷೆಯನ್ನು ಈ ಹಿಂದೆ ಸಿನೆಮಾದ ಹಾಸ್ಯದ ವಿಚಾರದಲ್ಲಿ ಮಾತ್ರ ಬಳಸಲಾಗುತ್ತಿತ್ತು. ಆದರೆ ನನ್ನ ಸಿನೆಮಾದಲ್ಲಿ ಕಾಸರಗೋಡಿನಿಂದ ಕುಂದಾಪುರದ ತನಕದ ಕನ್ನಡವನ್ನು ಬಳಕೆ ಮಾಡಿದ್ದೇನೆ. ಅದು ಮಣ್ಣಿನ ಸೊಗಡನ್ನು ಹೊಂದಿದೆ ಎಂದರು.

ಬರಲಿದೆ ಕಾಂತಾರ 1
ಈಗ ಬಂದಿರುವುದು ಕಾಂತಾರ-2. ಇನ್ನು ಬರಬೇಕಾಗಿರುವುದು ಕಾಂತಾರ-1. ಇದಕ್ಕಾಗಿ ಸಂಶೋಧನೆ ಸಾಗುತ್ತಿದೆ. ದೊಡ್ಡ ಬಜೆಟ್‌ ಸಿನೆಮಾ, ಕಥೆ ಕೂಡ ಅಷ್ಟೇ ಅದ್ಭುತವಾಗಿರಲಿದೆ ಎಂದರು ರಿಷಭ್‌.

ಕಾಂತಾರ ಮೈಕ್ರೋ
ಲೋಕಲ್‌ ಫಿಲ್ಮ್
ಚಿತ್ರ ನಟ ಪ್ರಕಾಶ್‌ ಬೆಳವಾಡಿ ಮಾತನಾಡಿ, ಈ ಹಿಂದೆ ಕಲಾತ್ಮಕ ಸಿನೆಮಾ ಮಾಡಿ ಫೆಸ್ಟಿವಲ್‌ಗ‌ಳ ಮೂಲಕ ಗ್ಲೋಬಲ್‌ ಮಟ್ಟದಲ್ಲಿ ಪ್ರಶಸ್ತಿಗಳ ಮೂಲಕ ಗುರುತಿಸಲಾಗು ತ್ತದೆ. ಆದರೆ ಈಗ ಹಾಗಿಲ್ಲ. ಕಾಂತಾರದ ಮೂಲಕ ಮೈಕ್ರೋ ಲೋಕಲ್‌ ಸಿನೆಮಾ ಗ್ಲೋಬಲ್‌ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದರು.

Advertisement

ನಿರ್ದೇಶಕಿ ಅಶ್ವಿ‌ನಿ ಅಯ್ಯರ್‌ ತಿವಾರಿ ಮಾತನಾಡಿದರು. ನಟಿ ಮಾಳವಿಕಾ ಅವಿನಾಶ್‌ ಸಂವಾದ ನಡೆಸಿದರು.

ಸಾಹಿತ್ಯ ಉತ್ಸವ ಸಮಾಪನ
ಭಾರತ್‌ ಫೌಂಡೇಶನ್‌ ವತಿಯಿಂದ ಎರಡು ದಿನ ಟಿಎಂಎ ಪೈ ಸಭಾಭವನದಲ್ಲಿ ಆಯೋಜಿಸಲಾದ “ಮಂಗಳೂರು ಸಾಹಿತ್ಯ ಉತ್ಸವ’ದ 5ನೇ ಆವೃತ್ತಿ ರವಿವಾರ ಸಮಾರೋಪ ಗೊಂಡಿತು. ರವಿವಾರ 8 ವಿಚಾರ ಸಂಕಿರಣ ಸೇರಿದಂತೆ ಎರಡೂ ದಿನಗಳಲ್ಲಿ ಒಟ್ಟು 25 ಕಲಾಪಗಳು ನಡೆದವು. ರವಿವಾರ ಶಾಸಕ ವೇದವ್ಯಾಸ ಕಾಮತ್‌, ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್‌, ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next