Advertisement

ರಾಜಕಾರಣಿಗಳ ಭಾಷಾ ಕಲಿಕೆ ಉತ್ತಮ ಪಡಿಸುವ ಕೃತಿಗಳು ಹೊರಬರಲಿ

08:55 AM Dec 01, 2019 | Team Udayavani |

ಬೆಂಗಳೂರು: ಉಪ ಚುನಾವಣೆ ಪ್ರಚಾರದಲ್ಲಿ ಜನಪ್ರತಿನಿಧಿಗಳು ನಾಲಗೆ ಹರಿಯ ಬಿಡುತ್ತಿದ್ದು, ಇವರ ಭಾಷಾ ಕಲಿಕೆಯನ್ನು ಉತ್ತಮ ಪಡಿಸುವಂಥ ಕೃತಿಗಳು ಹೊರತರಬೇಕಾದ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಸಪ್ನ ಬುಕ್‌ಹೌಸ್‌ ಶನಿವಾರ ಗಾಂಧಿ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ 50 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಪರಸ್ಪರ ಟೀಕೆ ಮಾಡುವ ಬರದಲ್ಲಿ ಕೆಟ್ಟ ಪದಗಳನ್ನು ಬಳಸುತ್ತಿದ್ದು, ಇಂಥ ಪರಿಸ್ಥಿತಿ ಬದಲಾಗಬೇಕಾಗಿದೆ. ಅದಕ್ಕಾಗಿ ಉತ್ತಮ ಪುಸ್ತಕಗಳನ್ನು ಓದುವಂಥ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಲೇಖಕರು, ರಾಜಕಾರಣಿಗಳು ಓದುವಂಥ ಪುಸ್ತಕ ಹೊರತರಬೇಕು ಎಂದು ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಓದಬೇಕು ಎಂದು ಸಿಕ್ಕ ಸಿಕ್ಕ ಪುಸ್ತಕವನ್ನು ಓದಬಾರದು. ಅಧ್ಯಯನಕ್ಕೆ ಯೋಗ್ಯವಾದ ಪುಸ್ತಕ ಆಯ್ಕೆ ಮಾಡಿಕೊಂಡು ಓದಬೇಕು. ಪುಸ್ತಕ ವ್ಯಕ್ತಿಯ ಬದುಕನ್ನೇ ಬದಲಿಸುತ್ತದೆ ಎಂಬುದಕ್ಕೆ ಐನ್‌ಸ್ಟಿàನ್‌ ಸ್ಪಷ್ಟ ನಿದರ್ಶನರಾಗಿದ್ದಾರೆ. ಆದ್ದರಿಂದ ಹೆಚ್ಚಾಗಿ ಪುಸ್ತಕ ಓದಬೇಕು. ಪುಸ್ತಕ ರಚಿಸುವ ಮೂಲಕ ಲೇಖಕರು ಸಮಾಜ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ ಎಂದರು.

ಆಧುನೀಕರಣಕ್ಕೆ ಸಿಲುಕಿರುವ ನಮ್ಮ ಯುವಜನರು ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇನ್ನು ಪುಸ್ತಕ ಓದುವುದು ದೂರದ ಮಾತಾಗಿದೆ. ಇದರಿಂದ ಭಾಷಾ ಸಂಪತ್ತು ಕಡಿವೆ‌ುಯಾಗಿ ಸಂವಹನ ಕೌಶಲ ಕುಂಠಿತವಾಗಿದೆ. ಇದು ಬದಲಾಗಬೇಕಾದ ಅಗತ್ಯತೆಯಿದೆ. ಕನ್ನಡ ನಶಿಸುತ್ತಿದೆ ಎಂದು ಕೊರಗುವುದನ್ನು ಬಿಟ್ಟು ಭಾಷೆಯ ಬಗೆಗೆ ನಮ್ಮ ಪಾತ್ರ ಏನು ಎಂಬುದನ್ನು ನಾವೇ ಪ್ರಶ್ನೆ ಹಾಕಿಕೊಳ್ಳಬೇಕು.
– ಎಸ್‌. ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next