ನವದೆಹಲಿ: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ನ್ನು ದುರಸ್ತಿಗೊಳಿಸುವ ಮತ್ತು ಚತುಷ್ಪಥ ಕಾಮಗಾರಿಗಳನ್ನು ಕ್ಷಿಪ್ರವಾಗಿ ಮುಕ್ತಾಯಗೊಳಿಸುವಂತೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಒತ್ತಾಯಿಸಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಸಕಲೇಶಪುರದಿಂದ ಮಾರೇನಹಳ್ಳಿ, ದೋಣಿಗಲ್‌ನಿಂದ ಮಾರೇನಹಳ್ಳಿ ನಡುವಿನ ಹೆದ್ದಾರಿ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಹೀಗಾಗಿ, ಎರಡೂ ನಗರಗಳ ನಡುವೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದರು.
ರಾಜ್ಯದ ಏಕೈಕ ಬಂದರು ಮಂಗಳೂರಿಗೆ ಹೆದ್ದಾರಿಯ ಮೂಲಕ ಸರಕುಗಳ ಸಾಗಣೆಗೂ ಸಮಸ್ಯೆಯಾಗಿದೆ. ಹೀಗಾಗಿ, ಕಾಮಗಾರಿಯನ್ನು ಕ್ಷಿಪ್ರವಾಗಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಜಗ್ಗೇಶ್ ಒತ್ತಾಯಿಸಿದರು.
ಕರ್ನಾಟಕದ ಇತರ ಭಾಗಗಳಲ್ಲಿನ ಹೆದ್ದಾರಿ ಕಾಮಗಾರಿಗಳಿಗೆ ಹೋಲಿಕೆ ಮಾಡಿದರೆ ರಾ.ಹೆ.75ರ ದುರಸ್ತಿ ಹಾಗೂ ಚತುಷ್ಪಥ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರು. ಸಕಲೇಶಪುರದಿಂದ ಮಾರೇನಹಳ್ಳಿ ನಡುವಿನ ರಸ್ತೆಯ ಹದಗೆಟ್ಟಿದೆ ಎಂದರು. ಅಲ್ಲಿ ಪ್ರಯಾಣ ಮಾಡುವುದು ತೀರಾ ದುಸ್ತರವಾಗಿದೆ ಎಂದರು.
ಶಿರಾಡಿಯಿಂದ ದೋಣಿಗಲ್ ಮೂಲಕ ಮಾರೇನಹಳ್ಳಿ ನಡುವಿನ 16 ಕಿಮೀ ರಸ್ತೆ ಕೂಡ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ, ಮಂಗಳೂರು ಮತ್ತು ಬೆಂಗಳೂರು ನಡುವಿನ ಸಂಚಾರಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯಿಕ ಚಟುವಟಿಕೆಗಳಿಗೂ ಸಮಸ್ಯೆಯಾಗಿದೆ ಜಗ್ಗೇಶ್ ಹೇಳಿದರು.
ಬಿ.ಸಿ.ರೋಡ್‌ನಿಂದ ಗುಂಡ್ಯ, ಸಕಲೇಶಪುರದಿಂದ ಹಾಸನ ನಡುವಿನ ರಸ್ತೆ ಕಾಮಗಾರಿ ಕೂಡ ನಿಧಾನವಾಗಿಯೇ ಮುಂದುವರಿದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಕೂಡ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಮಳೆಗಾಲದ ಅವಧಿಯಲ್ಲಿ ಶಿರಾಡಿ ಪ್ರದೇಶದಲ್ಲಿ ಸಂಚಾರ ಕೂಡ ಅಪಾಯಕಾರಿಯಾಗಿಯೇ ಇದೆ ಎಂದು ಸಂಸದ ಜಗ್ಗೇಶ್ ಆತಂಕ ವ್ಯಕ್ತಪಡಿಸಿದರು. ಜ