ಚಿಕ್ಕೋಡಿ: ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿ ಬೆಳೆದಾಗ ಕಲಾವಿದರಿಗೊಂದು ಅವಕಾಶ ದೊರೆಯುತ್ತಿದೆ ಎಂದು ಚಿತ್ರರಂಗದ ತಾರೆ ರಾಗಿಣಿ ದ್ವಿವೇದಿ ಹೇಳಿದರು. ಪಟ್ಟಣದ ಬಿ.ಕೆ. ಕಾಲೇಜು ಹತ್ತಿರ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಹಾಗೂ ಶೌರ್ಯ ಎಂಟರಟೈನಮೆಂಟ್ಸ್ ಸಹಯೋಗದಲ್ಲಿ ನಡೆದ ಚಿಕ್ಕೋಡಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಚಿಕ್ಕೋಡಿ ಜನತೆ ಭಾಷ್ಯಾ ಬಾಂಧವ್ಯಕ್ಕೆ ಗಟ್ಟಿ ಧ್ವನಿಯಾಗಿ ಗಡಿ ಭಾಗದಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.
ಪುರಸಭೆ ಸದಸ್ಯ ಜಗದೀಶ ಕವಟಗಿಮಠ ಮಾತನಾಡಿ, ಚಿಕ್ಕೋಡಿ ಗಡಿ ಭಾಗದಲ್ಲಿದ್ದರು ಕೂಡಾ ಕನ್ನಡ ಸಾಹಿತ್ಯ ಗಟ್ಟಿಯಾಗಿ ನೆಲೆಯೂರಿದೆ. ಗಡಿ ಭಾಗದಲ್ಲಿ ಕನ್ನಡ-ಮರಾಠಿ ಭಾಷೆಕರು ಸಹೋದರಂತೆ ಜೀವನ ಸಾಗಿಸುತ್ತಿದ್ದು, ಇಂದಿನ ಯುವಕರು ಶಿಸ್ತುನ್ನು ಅಳವಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡುವ ಛಲ ಹೊಂದಬೇಕು ಎಂದರು.
ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎನ್.ಎ. ಮಗದುಮ್ ಮಾತನಾಡಿ, ನಾಲ್ಕು ದಿನಗಳವರೆಗೆ ನಡೆಯುವ ಚಿಕ್ಕೋಡಿ ಮಹೋತ್ಸವದಲ್ಲಿ 26 ರಂದು ಡಿ.ಜೆ. ಮಹೋತ್ಸವ, 27ರಂದು ಮರಾಠಿ ಚಲನಚಿತ್ರದ ಪ್ರಖ್ಯಾತಿ ಸೊನಾಲಿ ಕುಲಕರ್ಣಿ ಅವರಿಂದ ಲಾವಣಿ ಮಹೋತ್ಸವ, 28ರಂದು ಹಿನ್ನೆಲೆ ಸಂಗೀತ ಗಾಯಕ ರಾಜೇಶ ಕೃಷ್ಣನ ಅವರಿಂದ ಕರುನಾಡು ಮಹೋತ್ಸವ ನಡೆಯಲಿದೆ ಎಂದರು.
ಯೋಗ ಗುರು ಚನ್ನಬಸವ ಗೂರುಜಿ ಮಾತನಾಡಿದರು. ಈ ವೇಳೆ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎನ್.ಎ. ಮಗದುಮ್, ರಾವಸಾಹೇಬ ಹವಲೆ, ಮಹೇಶ ಜಗದಾಳೆ, ಸಾಹಿತಿ ಎಸ್.ವೈ. ಹಂಜಿ, ಎಸ್.ಆರ್. ಡೊಂಗರೆ ಸೇರಿದಂತೆರ ಇತರರು ಇದ್ದರು. ಸಿದ್ದು ಪಾಟೀಲ ಸ್ವಾಗತಿಸಿದರು. ಸಾಹಿತಿ ಪಿ.ಜಿ. ಕೆಂಪನ್ನವರ ನಿರೂಪಿಸಿದರು.