Advertisement

ಹೆಸರು ಶಾಶ್ವತವಾಗಿ ಉಳಿಯುವಂತೆ ಕೆಲಸ ನಡೆಯಲಿ: ದೇವದಾಸ್‌ ಕುಲಾಲ್‌

12:48 PM May 06, 2021 | Team Udayavani |

ಮುಂಬಯಿ: ನಾಡಬೆಟ್ಟು ಕುಲಾಲ ಪಂಚದೈವ ಸೇವಾ ಟ್ರಸ್ಟ್‌ ಕುಳಾಯಿ ಇದರ ವತಿಯಿಂದ ಕುಟುಂಬದ ಹಿರಿಯರಾದ ದಿ| ವಾಮನ ಮೂಲ್ಯ ಅವರ ಸವಿನೆನಪಿನಲ್ಲಿ ವಾಮನ ಮೂಲ್ಯ ಕಲಾ ವೇದಿಕೆಯ ಉದ್ಘಾಟನ ಕಾರ್ಯಕ್ರಮವು ಮೇ 2ರಂದು ಸರಳ ರೀತಿಯಲ್ಲಿ ನಡೆಯಿತು.

Advertisement

ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಕುಲಾಲ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಟುಂಬದ ಹಿರಿಯರನ್ನು ನೆನಪಿಸಿ ಅವರನ್ನು ಗೌರವಿಸುವ ಕೆಲಸ ಅಗತ್ಯ. ಅವರ ಸೇವಾ ಕಾರ್ಯಗಳು ಯುವಪೀಳಿಗೆಗೆ ತಿಳಿಯುವಂತಾಗಲು ಅವರ ನೆನಪಿನಲ್ಲಿ ಸೇವಾ ಕಾರ್ಯಗಳು ನಡೆಯುತ್ತಿರಬೇಕು. ಕುಲಾಲ ಸಮಾಜದ ಈ ಮೂಲ ಸ್ಥಾನದವರಂತೆ ಎಲ್ಲರೂ ಕೂಡ ಟ್ರಸ್ಟ್‌ ಅನ್ನು ಮಾಡಿ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಸಾಕಾರ ಆಗುವ ಕೆಲಸ ನಡೆಸಿದರೆ ಉತ್ತಮ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಉದ್ಘಾಟಿಸಿ ಶುಭ ಹಾರೈಸಿ, ವಿಶ್ವವನ್ನು ವ್ಯಾಪಿಸಿರುವ ಕೊರೊನಾ ಮಹಾಮಾರಿಯ ಈ ಕಠಿನ ಪರಿಸ್ಥಿತಿ ಯಲ್ಲಿ ಸಮಾಜದ ಮೂಲ ಬೇರನ್ನು ನೆನಪಿಸುವ ಈ ಕಾರ್ಯ ಅಭಿನಂದನೀಯ ಎಂದರು.

ಕುಲಾಲ ಸಂಘ ಕುಳಾಯಿ ಇದರ ಅಧ್ಯಕ್ಷ ಗಂಗಾಧರ ಕೆ., ಕಾರ್ಯದರ್ಶಿ ಗಂಗಾಧರ ಬಂಜನ್‌, ನಾಡಬೆಟ್ಟು ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ್‌ ಕುಲಾಲ್‌, ಟ್ರಸ್ಟ್‌ನ ಹಿರಿಯರಾದ ಚೆನ್ನಪ್ಪ ಕುಲಾಲ…, ಶಂಕರ್‌ ಕುಲಾಲ್‌, ವಸಂತ್‌ ಕುಲಾಲ್‌, ಗುರುಪ್ರಸಾದ್‌ ಕುಲಾಲ್‌, ಹಿರಿಯರಾದ ತಿಮ್ಮಯ್ಯ ಮೂಲ್ಯ ಜೋಕಟ್ಟೆ, ಕುಟುಂಬದ ಟ್ರಸ್ಟ್‌ನ ರೂವಾರಿ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಾಗೇಶ್‌ ಕುಲಾಲ…, ಉಮೇಶ್‌ ಕುಲಾಲ್‌ ಹಾಗೂ ಟ್ರಸ್ಟ್‌ನ ಹಿರಿಯರು ಮತ್ತು ಕಿರಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಕೋವಿಡ್‌ ನಿಯಮಾನುಸಾರ ಸರಳ ರೀತಿಯಲ್ಲಿ ಜರಗಿತು. ಟ್ರಸ್ಟ್‌ನ ಸದಸ್ಯ ಧನಂಜಯ ಸ್ವಾಗತಿಸಿ ಸಚಿನ್‌ ವಂದಿಸಿದರು. ನಾಗೇಶ್‌ ಕುಲಾಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next