Advertisement

ವರ್ಗ ಭೇದವಿಲ್ಲದೆ ಲಸಿಕೆ ವಿತರಣೆಯಾಗಲಿ

01:53 PM Jan 17, 2021 | Team Udayavani |

ಚಳ್ಳಕೆರೆ: ಕೋವಿಡ್‌ ವೈರಾಣು ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ಹಂತದಲ್ಲಿ ಕೋವಿಡ್ ವಾರಿಯರ್ ವೈದ್ಯರು, ಶುಶ್ರೂಷಕಿಯರು, ಡಿ. ದರ್ಜೆ ನೌಕರರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ರಾಷ್ಟ್ರದ ಸಮಸ್ತ 130 ಕೋಟಿ ಜನರಿಗೆ ಯಾವುದೇ ವರ್ಗ ಭೇದವಿಲ್ಲದೆ ಉಚಿತವಾಗಿ ಈ ಲಸಿಕೆ ವಿತರಣೆ ಆಗಬೇಕು ಎಂದು ಶಾಸಕ ಟಿ.

Advertisement

ರಘುಮೂರ್ತಿ ಹೇಳಿದರು.  ಇಲ್ಲಿನ ಸರ್ಕಾರಿ ಆಸ್ಪತ್ರೆಯ ಕೋವಿಡ್‌ ಕೇಂದ್ರದಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾರಂಭದ ಹಂತದಲ್ಲಿ ಸರ್ಕಾರಿ ಆಸ್ಪತ್ರೆಯ 96 ಸಿಬ್ಬಂದಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ನಂತರ ಸಾರ್ವಜನಿಕರಿಗೂ ಲಸಿಕೆ ವಿತರಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೋವಿಡ್ ನಿಯಂತ್ರಣ ಲಸಿಕೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಮೂಲಕ ಕೋವಿಡ್ ವೈರಾಣುನ ಸಂಪೂರ್ಣ ನಿರ್ಮೂಲನೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ತಾಲೂಕು ಆರೋಗಾಧಿಕಾರಿ ಡಾ| ಎನ್‌. ಪ್ರೇಮಸುಧಾ ಮಾತನಾಡಿ, ಲಸಿಕೆ ವಿತರಣಾ ಕಾರ್ಯ ಸಕಾರಿ ಆಸ್ಪತ್ರೆಯಿಂದ ಪ್ರಾರಂಭವಾಗಿದೆ. ಮುಂದಿನ ಹಂತದಲ್ಲಿ ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿತರಣೆ ಮಾಡಲಾಗುವುದು. ಕೋವಿಡ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಈ ಲಸಿಕೆ ನೀಡಲಾಗುವುದು.

ಇದನ್ನೂ ಓದಿ:ಮಾಸ್ತಮ್ಮ ದೇವಿಗೆ ಧನುರ್ಮಾಸ ವಿಶೇಷ ಪೂಜೆ

ಸಾರ್ವಜನಿಕರು ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬೇಕು ಎಂದರು. ಆಡಳಿತಾಧಿಕಾರಿ ಡಾ| ವೆಂಕಟೇಶ್‌ ಮಾತನಾಡಿ, ಸರ್ಕಾರಿ ಆಸ್ಪತ್ರೆ ವೈದ್ಯರು, ಶುಶ್ರೂಷಕಿಯರು, ಡಿ. ದರ್ಜೆ ನೌಕರರು ಲಸಿಕೆ ಸ್ವೀಕರಿಸಿದ್ದಾರೆ. ಯಾರಿಗೂ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗಿಲ್ಲ. ಲಸಿಕೆ ಸ್ವೀಕರಿಸಿ ಕೇವಲ 30 ನಿಮಿಷದಲ್ಲಿ ಎಲ್ಲರೂ ಲವಲವಿಕೆಯಿಂದಲೇ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ| ಜಯಲಕ್ಷ್ಮೀ, ಡಾ| ಸತೀಶ್‌ ಆದಿಮನಿ, ಡಾ| ಪ್ರಜ್ವಲ್‌ಧನ್ಯ, ಡಾ| ತಿಪ್ಪೇಸ್ವಾಮಿ, ಡಾ| ಅಮಿತ್‌ಗುಪ್ತ, ಡಾ| ಶಮಾ ಪರ್ವಿನ್‌, ಡಾ| ಲಾವಣ್ಯ, ಡಾ| ಮಂಜಪ್ಪ, ಶುಶ್ರೂಷಕಿಯರಾದ ನಿರ್ಮಲಾ, ಎಂ.ಎಸ್‌. ಪೂರ್ಣಿಮಾ, ನಾಗರತ್ನಮ್ಮ ಮುಂತಾದವರು ಲಸಿಕೆ ಸ್ವೀಕರಿಸಿದರು.

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ತಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಕೃಷ್ಣಮೂರ್ತಿ, ಜಿಪಂ ಸದಸ್ಯ ಪ್ರಕಾಶ್‌ಮೂರ್ತಿ, ತಾಪಂ ಸದಸ್ಯ ವೀರೇಶ್‌, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ. ರಮೇಶ್‌ ಗೌಡ, ಸದಸ್ಯರಾದ ಚಳ್ಳಕೆರೆಯಪ್ಪ, ವೈ. ಪ್ರಕಾಶ್‌, ಮಲ್ಲಿಕಾರ್ಜುನ್‌ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next