Advertisement

Bangladesh ಬೆಳವಣಿಗೆ ಲಾಭ ಜವಳಿ ಉದ್ದಿಮೆ ಪಡೆಯಲಿ: ಸಚಿವ ಪಾಟೀಲ್‌

01:21 AM Aug 08, 2024 | Team Udayavani |

ಬೆಂಗಳೂರು: ಬಾಂಗ್ಲಾದೇಶ ಜವಳಿ ಉದ್ದಿಮೆಯಲ್ಲಿ ಶೇ. 30 ಪಾಲು ಹೊಂದಿದೆ. ಅಲ್ಲಿ ಕಳೆದ ಎರಡ್ಮೂ ರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಪರಿಣಾಮ ಭಾರತದ ಜವಳಿ ಉದ್ಯಮದ ಮೇಲಾಗಲಿದೆ. ಇದರ ಪ್ರಯೋಜನ ಪಡೆಯಲು ರಾಜ್ಯದ ಜವಳಿ ಉದ್ಯಮ ಸಜ್ಜಾಗಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಸಾಂಪ್ರದಾಯಿಕ ನೇಕಾರಿಕೆ ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ನೇಕಾರಿಕೆಗೆ ತಾಂತ್ರಿ ಕ ಸ್ಪರ್ಶ ಸಿಗದಿದ್ದರೆ ಈ ಉದ್ಯಮ ಉಳಿಯಲು ಸಾಧ್ಯವಿಲ್ಲ. ರಾಜ್ಯದಲ್ಲಿ 54 ಸಾವಿರ ನೇಕಾರಿಕೆಯನ್ನು ನಂಬಿಕೊಂಡ ಕುಟುಂಬಗಳಿದ್ದವು. ಇಂದು 29 ಸಾವಿರ ಕುಟುಂಬಗಳು ಮಾತ್ರ ನೇಕಾರಿಕೆಯನ್ನು ನೆಚ್ಚಿಕೊಂಡಿವೆ ಎಂದರು.

ರಾಜ್ಯದ ಬಜೆಟ್‌ನಲ್ಲಿ ಜವಳಿ ಪಾರ್ಕ್‌ ಸ್ಥಾಪನೆ ಬಗ್ಗೆ ಪ್ರಸ್ತಾವಿಸಲಾಗಿದೆ. ರಾಜ್ಯದಲ್ಲಿ 20-25 ಸಣ್ಣ ಜವಳಿ ಪಾರ್ಕ್‌ ಸ್ಥಾಪಿಸಲಾಗುವುದು. ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಪಿಎಂ ಮಿತ್ರ ಪಾರ್ಕ್‌ ಜಮೀನು ಗುರುತಿಸಲಾಗಿದೆ. ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ, ವಿದ್ಯುತ್‌ ಸಬ್ಸಿಡಿ, ಪರಿಶಿಷ್ಟರಿಗೆ ಜವಳಿ ಘಟಕ ಸ್ಥಾಪಿಸಲು ಹಣ ಹೀಗೆ ಹಲವು ಸೌಲಭ್ಯ ನೀಡಲಾಗಿದೆ. ನೇಕಾರಿಕೆ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ಕೈಮಗ್ಗ ಕ್ಷೇತ್ರದ ಪ್ರಥಮ ಪ್ರಶಸ್ತಿಯನ್ನು ಬೆಂಗಳೂರಿನ ಆರ್‌. ಮಂಜುನಾಥ್‌, ದ್ವಿತೀಯ ಬಹುಮಾನ ಚಿಕ್ಕಬಳ್ಳಾಪುರದ ರಮೇಶ್‌, ಹತ್ತಿ ಬಟ್ಟೆ ವಿಭಾಗದಲ್ಲಿ ಬಳ್ಳಾರಿಯ ಹನುಮಂತಮ್ಮ ಬಾಣದ, ದಾವಣಗೆರೆಯ ತುಕರಾಮ ಹನುಮಂತಪ್ಪ ವದ್ಧಿ, ಉಣ್ಣೆ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಬಳ್ಳಾರಿಯ ತಿಪ್ಪೇಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next