Advertisement

ಶಿಕ್ಷಕರು ಅಧ್ಯಯನಶೀಲರಾಗಲಿ

09:11 PM Apr 12, 2019 | Team Udayavani |

ದೊಡ್ಡಬಳ್ಳಾಪುರ: ಇಂದಿನ ಜಾಗತಿಕ ಬದಲಾವಣೆಗೆ ಪೂರಕವಾಗಿ ಶಿಕ್ಷಕ ಸಮುದಾಯ ಅಧ್ಯಯನ ಶೀಲರಾಗಬೇಕಾಗಿದೆ ಎಂದು ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಅಶ್ವತ್ಥಯ್ಯ ಹೇಳಿದರು.

Advertisement

ಇಲ್ಲಿನ ಕೊಂಗಾಡಿಯಪ್ಪ ಶಿಕ್ಷಕರ ತರಬೇತಿ ಮಹಾವಿದ್ಯಾಲಯದಲ್ಲಿ ಅಂತಿಮ ಬಿ.ಇಡಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದ ಅವರು, ಜಾಗತಿಕ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.

ಬಿ.ಇಡಿ ಪದವಿ ಪಡೆಯುವ ಪ್ರಶಿಕ್ಷಣಾರ್ಥಿಗಳು ಹಲವು ಶಾಲಾ, ಕಾಲೇಜುಗಳಲ್ಲಿ ಬೋಧಕ ವೃತ್ತಿ ಪಡೆಯುವ ಕನಸು ಹೊಂದಿರುತ್ತಾರೆ. ಕೆಲವೊಮ್ಮೆ ಅವರ ಪ್ರತಿಭೆಗೆ ಪೂರಕವಾದ ಅವಕಾಶಗಳು ದೊರೆಯುವುದಿಲ್ಲ.

ಹೀಗಾಗಿ, ಸ್ಥಳೀಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ಅನೇಕ ಖಾಸಗಿ ಶಾಲಾ, ಕಾಲೇಜುಗಳನ್ನು ಸಂಪರ್ಕಿಸಿ, ಅರ್ಹ ಪ್ರಶಿಕ್ಷಣಾರ್ಥಿಗಳನ್ನು ಉದ್ಯೋಗಕ್ಕೆ ಪರಿಗಣಿಸುವಂತೆ ಕೋರಲಾಗಿತ್ತು.

ಅದಕ್ಕೆ ಪೂರಕವಾಗಿ ಹಲವು ವಿದ್ಯಾ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. ಉದ್ಯೋಗ ಮೇಳದಲ್ಲಿ 70 ಅರ್ಹ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. 18 ಶಾಲೆಗಳು ಹಾಗೂ 3 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ ಖಜಾಂಚಿ ಡಿ.ಪ್ರಭುದೇವಯ್ಯ, ನಿರ್ದೇಶಕರಾದ ವಿ.ತಿಮ್ಮಶೆಟ್ಟಪ್ಪ, ಕೆ.ಎಂ.ಕೃಷ್ಣಮೂರ್ತಿ, ಪಿ.ವಿ.ಶ್ರೀನಿವಾಸಮೂರ್ತಿ, ಎಸ್‌.ರಾಜಲಕ್ಷ್ಮೀ, ಲಲಿತಮ್ಮ, ಜಗದೀಶ್‌ಬಾಬು, ಜೆ.ಬಿ.ಮಹೇಶ್‌, ಪ್ರಾಂಶುಪಾಲ ಬಿ.ಕೆ.ಮಂಜುನಾಥ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next