Advertisement

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

06:11 PM Nov 18, 2021 | Team Udayavani |

ಸಿರವಾರ: ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ನಾಯಕತ್ವ ಗುಣ ಅಳವಡಿಸಿಕೊಂಡಾಗ ಮಾತ್ರ ಸಮರ್ಥ ವ್ಯಕ್ತಿಯಾಗಿ ನಿರ್ಮಾಣವಾಗಲು ಸಾಧ್ಯ ಎಂದು ಉಪನ್ಯಾಸಕ ಡಾ| ಅಜೀತ್‌ ಸಬನೀಸ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಕಾಲೇಜಿನಲ್ಲಿ ಶ್ರೀ ಅರವಿಂದ ಸೊಸೈಟಿ ಆಲ್ಕೋಡ್‌, ಬಸವೇಶ್ವರ ಪದವಿ ಮಹಾವಿದ್ಯಾಲಯ, ಕಲ್ಪವೃಕ್ಷ ಯುವ ಸಾಂಸ್ಕೃತಿಕ ಮಹಿಳಾ ಮತ್ತು ಮಕ್ಕಳ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಯುವ ಬ್ರಿಗೇಡ್‌ ಆಶ್ರಯದಲ್ಲಿ ಅರವಿಂದರ 150ನೇ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ, ಸಮಗ್ರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ವ್ಯಾಸಂಗದ ಜತೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಿಗೂ ಗಮನ ನೀಡಬೇಕು. ಶಿಕ್ಷಣದೊಂದಿಗೆ ಉತ್ತಮ ಸಾಧನೆ ಮಾಡಲು ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ಸಾಧಿ ಸಲು ಸಾಧ್ಯ. ಅದಕ್ಕಾಗಿ ಶೈಕ್ಷಣಿಕ ಕಾಲಘಟ್ಟದಲ್ಲಿ ಪಠ್ಯದ ಜತೆಗೆ ಇತರೆ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿಸುವ ಬಗ್ಗೆ ಚಿಂತನೆ ನಡೆಸಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿದ್ದಲ್ಲಿ ಸಮರ್ಥ ವ್ಯಕ್ತಿಯಾಗಲು ಸಾಧ್ಯ ಎಂದರು. ಡಾ| ಬಿ.ಆರ್‌. ಬೀಡ್‌ ಪ್ರಾಸ್ತವಿಕ ಮಾತನಾಡಿದರು.

ಈ ವೇಳೆ ಚುಕ್ಕಿ ಸೂಗಪ್ಪ ಸಾಹುಕಾರ, ಅರಕೇರಿ ಮಲ್ಲಪ್ಪ ಸಾಹುಕಾರ, ಆದನಗೌಡ ಆಲ್ಕೋಡ್‌, ಕಾಲೇಜು ಅಧ್ಯಕ್ಷ ನರಸಿಂಹರಾವ್‌ ಕುಲಕರ್ಣಿ, ಪಿ. ಕೃಷ್ಣ, ಮಹಾಂತೇಶ ಸ್ವಾಮಿ, ಸಂತೋಷ ತಾತ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next