Advertisement

ರಾಜ್ಯಗಳೂ ವ್ಯಾಟ್‌ ಇಳಿಕೆ ಮಾಡಿ ನಿರಾಳತೆ ನೀಡಲಿ

11:34 PM May 22, 2022 | Team Udayavani |

ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಣ ಮಾಡಿ ಜನಸಾಮಾನ್ಯರಿಗೆ ನಿರಾಳತೆ ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಶನಿವಾರ, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿರುವುದು ಉತ್ತಮ ಬೆಳವಣಿಗೆ. ತೈಲೋತ್ಪನ್ನ ವಸ್ತುಗಳ ಜತೆಗೆ ದೇಶದ ಆರ್ಥಿಕತೆ ಸಮ್ಮಿಳನಗೊಂಡಿರುವುದರಿಂದಲೇ ಈ ವಸ್ತುಗಳ ಬೆಲೆ ಏರಿದ ತತ್‌ಕ್ಷಣ ಜನಸಾಮಾನ್ಯರ ಮೇಲೆ ನಾನಾ ರೀತಿಯಲ್ಲಿ ಅಡ್ಡಪರಿಣಾಮಗಳು ಶುರುವಾಗುತ್ತವೆ. ಅಂದರೆ ಸಾರಿಗೆಯಿಂದ ಹಿಡಿದು, ಮನೆಗೆ ಬರುವ ದಿನಸಿ ವಸ್ತುಗಳ ಬೆಲೆಯೂ ಗಗನಮುಖೀಯಾಗುವ ಆತಂಕ ಈ ತೈಲ ಬೆಲೆ ಹೆಚ್ಚಳದ ಹಿಂದಿದೆ. ಹೀಗಾಗಿಯೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಏರುಮುಖಿಯಾದೊಡನೆ ಶ್ರೀಸಾಮಾನ್ಯ ಆತಂಕಕ್ಕೆ ಬೀಳುತ್ತಾನೆ. ಆತನ ಕಿಸೆಯಿಂದಲೂ ಹೆಚ್ಚಿನ ಹಣ ವೆಚ್ಚವಾಗುತ್ತದೆ.

Advertisement

ಇದಷ್ಟೇ ಅಲ್ಲ, ಅತ್ತ ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಮರವೂ ಜಾಗತಿಕ ಅರ್ಥವ್ಯವಸ್ಥೆಯನ್ನು ಹಾಳು ಮಾಡಿದೆ. ವಿಚಿತ್ರವೆಂದರೆ, ಉಭಯ ದೇಶಗಳ ನಡುವಿನ ಸಮರದಿಂದಾಗಿ ಕಪ್ಪು ಸಮುದ್ರದ ಸರಕು ಸಾಗಣೆ ಮಾರ್ಗವೇ ಮುಚ್ಚಿದ್ದು, ಜಾಗತಿಕ ಪೂರೈಕೆ

ಸರಪಳಿಯೂ ಕಡಿತಗೊಂಡಿದೆ. ಹೀಗಾಗಿಯೇ ಅಗತ್ಯ ವಸ್ತುಗಳ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ.

ಹಣದುಬ್ಬರ ನಿಯಂತ್ರಣದ ಕಾರಣದಿಂದಾಗಿ ಈ ಮಾಸಾಂತ್ಯದ ಆರಂಭದಲ್ಲಿ ಆರ್‌ಬಿಐ ರೆಪೋ ಬೆಲೆ ಏರಿಕೆ ಮಾಡಿತ್ತು. ಈ ಮೂಲಕ ಜನರ ಖರೀದಿ ಸಾಮರ್ಥ್ಯವನ್ನು ಕೊಂಚ ಇಳಿಸುವ ಪ್ರಯತ್ನ ಮಾಡಿತ್ತು. ಅಂದರೆ ರೆಪೋ ಬೆಲೆ ಏರಿದ ಕೂಡಲೇ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ಏರಿಸುತ್ತವೆ. ಹಾಗೆಯೇ ಠೇವಣಿ ಬಡ್ಡಿ ಬೆಲೆವೂ ಹೆಚ್ಚುವುದರಿಂದ ಜನ ಉಳಿತಾಯದತ್ತ ಹೆಚ್ಚು ಗಮನಕೊಡುತ್ತಾರೆ ಎಂಬ ಆಶಯ ಇಲ್ಲಿದೆ. ಇನ್ನು ಹಣದುಬ್ಬರವನ್ನು ಮತ್ತಷ್ಟು ಇಳಿಕೆ ಮಾಡುವ ಸಂಬಂಧ ಕೇಂದ್ರ ಸರಕಾರ, 2ನೇ ಶಮನಕಾರಿ ಮಾರ್ಗವನ್ನು ಹಿಡಿದಿದೆ. ಅದೆಂದರೆ ತೈಲೋತ್ಪನ್ನಗಳ ಬೆಲೆ ಇಳಿಕೆ ಮಾಡುವುದು. ಶನಿವಾರ ಸಂಜೆ ಪ್ರತೀ ಲೀ. ಪೆಟ್ರೋಲ್‌ ಮೇಲೆ 9.50 ರೂ. ಮತ್ತು ಡೀಸೆಲ್‌ ಮೇಲೆ 7 ರೂ. ಇಳಿಕೆ ಮಾಡಲಾಗಿದೆ. ಜತೆಗೆ ರೈತರಿಗೆ ನೀಡಲಾಗುವ ರಸಗೊಬ್ಬರದ ಮೇಲಿನ ಸಬ್ಸಿಡಿ ಅನುದಾನ ದುಪ್ಪಟ್ಟು ಏರಿಕೆ, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‌ ಮೇಲಿನ ಕಸ್ಟಮ್‌ ಸುಂಕವನ್ನು ಇಳಿಸಿದೆ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಹಣದುಬ್ಬರ ಪ್ರಮಾಣ ಇಳಿಕೆಯಾಗಬಹುದು ಎಂದೇ ನಿರೀಕ್ಷಿಸಲಾಗಿದೆ.

ಈಗ ಕೇಂದ್ರ ಸರಕಾರವೇನೋ ತನ್ನ ಕೈಲಾದ ಪ್ರಯತ್ನ ಮಾಡಿದೆ. ಇದರ ಜತೆಗೆ ರಾಜ್ಯಗಳೂ ತಮ್ಮ ಪಾಲಿನ ವ್ಯಾಟ್‌ ಇಳಿಕೆ ಮಾಡುವತ್ತ ಗಮನ ಹರಿಸಬೇಕು. ಈಗಾಗಲೇ ಕೇರಳ, ರಾಜಸ್ಥಾನ, ಒಡಿಶಾ,

Advertisement

ಮಹಾರಾಷ್ಟ್ರ ರಾಜ್ಯಗಳು ಒಂದಷ್ಟು ವ್ಯಾಟ್‌ ಇಳಿಕೆ ಮಾಡಿವೆ. ಇದರಲ್ಲಿ ಕೆಲವು ರಾಜ್ಯಗಳು ನವೆಂಬರ್‌ನಲ್ಲಿ ಅಬಕಾರಿ ಸುಂಕ ಇಳಿಸಿದಾಗ ತೈಲ ಬೆಲೆ ಕಡಿತ ಮಾಡಿರಲಿಲ್ಲ. ಈಗ ಈ ರಾಜ್ಯಗಳೇ ಎಚ್ಚೆತ್ತುಕೊಂಡು

ಮೊದಲಿಗೆ ಕಡಿತ ಮಾಡಿವೆ. ಹಾಗೆಯೇ ಇವೆಲ್ಲವೂ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳು.

ಹಾಗೆಯೇ, ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳೂ ಈಗ ವ್ಯಾಟ್‌ ಕಡಿತ ಮಾಡಬೇಕು. ತೈಲ ಬೆಲೆ ಇಳಿಕೆ

ಯಾದರೆ, ಇತರೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಈ ಕಡೆ ರಾಜ್ಯ ಸರಕಾರ ಗಮನ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next