Advertisement
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುವ ಆಸಕ್ತಿಯಿಲ್ಲ. ರೈತರ ವಿಷಯದಲ್ಲಿ ರಾಜಕಾರಣ ಮಾಡುವುದರಲ್ಲೇ ಅವರಿಗೆ ಆಸಕ್ತಿ. ಕೇಂದ್ರ ಈಗ ಬಿಡುಗಡೆ ಮಾಡಿರುವ ಹಣವನ್ನಾದರೂ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಲಿ ಎಂದರು.
Related Articles
Advertisement
ಇಲ್ಲಿನ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ಕೊಟ್ಟು ತಕ್ಷಣ ಕೇಂದ್ರದ ಆರು ಸಾವಿರ ಹಾಗೂ ರಾಜ್ಯ ಸರ್ಕಾರ ಆರು ಸಾವಿರ ಸೇರಿಸಿ ಹನ್ನೆರೆಡು ಸಾವಿರ ನೀಡಿ. ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಜಾಹೀರಾತು ಕೊಡುವ ಹಣದ ಅರ್ಧದಲ್ಲಿ ಹಾಲು ಉತ್ಪಾದಕರ ಸಬ್ಸಿಡಿ ಕೊಡಬಹುದಿತ್ತು. ನಿಮಗೆ ಜಾಹೀರಾತು ನೀಡುವುದಕ್ಕೆ ಹಣವಿದೆ. ಸಬ್ಸಿಡಿ ಹಣ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಗಣಿ ಬಾಚಿ ಕಷ್ಟಪಡುವ ಮಹಿಳೆಯರಿಗೆ ಸಬ್ಸಿಡಿ ಕೊಡದಿರುವುದು ದುರಾದೃಷ್ಟಕರ ಎಂದರು.
ರೈತ ವಿದ್ಯಾನಿಧಿ ಸ್ಥಗಿತಗೊಳಿಸಿದ್ದು ಯಾವ ನ್ಯಾಯ, ನೀವು ನ್ಯಾಯದ ಬಗ್ಗೆ ಮಾತನಾಡುತ್ತೀರಿ, ಹಾಗಿದ್ದರೇ ರೈತ ವಿದ್ಯಾ ನಿಧಿ ಸ್ಥಗಿತಗೊಳಿಸಿರುವುದು ರೈತರ ಮಕ್ಕಳಿಗೆ ಮಾಡಿರುವ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾಷಣದ ವೇಳೆ ಭಾವುಕರಾಗಿದ್ದಕ್ಕೆ ಪ್ರತಿಕ್ರಿಯಿಸಿ, ಖರ್ಗೆ ಅವರು ಅಳಿಯನನ್ನು ಗೆಲ್ಲಿಸಲು ಎಮೋಷನಲ್ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅಳಿಯ ಸೋಲುತ್ತಾನೆಂಬ ಗುಪ್ತಚರ ವರದಿ ಹೋಗಿರುವ ಕಾರಣ ಏನಾದರೂ ಮಾಡಿ ಅಳಿಯನನ್ನು ಗೆಲ್ಲಿಸಬೇಕೆಂಬ ಹತಾಶೆಯಲ್ಲಿ ಇದ್ದಾರೆ ಎಂದರು.
ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಆಡಳಿತ ವೈಖರಿ ನೋಡಿ ಜನ ಮಾತ್ರವಲ್ಲ ಕಾಂಗ್ರೆಸ್‌ನವರು ಬೇಸರಗೊಂಡಿದ್ದಾರೆ. ಅಳಿಯ ಸೋಲಬೇಕೆಂಬ ಚಿಂತನೆಯಲ್ಲಿ ಕಾಂಗ್ರೆಸ್‌ನವರು ಇರುವುದರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರವಿದು. ಅವರೇನಾದರೂ ದೇಶ ಹಿತದ ಬಗ್ಗೆ ಮಾತನಾಡಿದ್ದಾರಾ, ಎಲ್ಲೂ ದೇಶದ ಹಿತದ ಬಗ್ಗೆ ಮಾತನಾಡಿಲ್ಲ. ಏನಾದರೂ ಮಾಡಿ ಅನುಕಂಪ ಗಿಟ್ಟಿಸಿಕೊಂಡು ಅಳಿಯನನ್ನು ಗೆಲ್ಲಿಸಬೇಕೆಂಬುದು ಮಾತ್ರ ಕಾಣುತ್ತಿದೆ ಎಂದು ಟೀಕಿಸಿದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿ, ಓಲೈಕೆ ರಾಜನೀತಿಯಿಂದ ಭಯೋತ್ಪಾದನೆ ಬೆಳೆಯಿತು. ಭಯೋತ್ಪಾದನೆಯಿಂದ ಸೈನಿಕರು ಬಲಿಯಾಗಬೇಕಾಯಿತು. ಭಯೊತ್ಪಾದಕರನ್ನು ಮಟ್ಟಹಾಕಲು ಸರ್ಜಿಕಲ್ ಸ್ಟ್ರೈಕ್ ಜೀರೋ ಟ್ರಾಲರೆನ್ಸ್ ಬೇಕು, ಕಾಂಗ್ರೆಸ್ ಜೀರೋ ಟ್ರಾಲರೆನ್ಸ್ ಎಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಶ್ನಿಸಿದ ಅವರು ಇಷ್ಟರ ಮೇಲಾದರೂ ರೈತರು, ಸೈನಿಕರನ್ನು ಅಪಮಾನ ಮಾಡುವುದನ್ನು ಕಾಂಗ್ರೆಸ್‌ನವರು ಬಿಡಬೇಕು ಎಂದು ಹೇಳಿದರು.