Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಆರೆಸ್ಸೆಸ್ ರಾಜ್ಯದಲ್ಲಿ ಏಷ್ಟು ಗಲಭೆ ಮಾಡಿದೆ? ಅವರ ಮೇಲೆ ಎಷ್ಟು ಕೇಸ್‌ಗಳಿವೆ? ಗಲಭೆ ಮಾಡುವ ಎಲ್ಲ ಸಂಘಟನೆಗಳನ್ನು ಸರಕಾರ ನಿಷೇಧಿಸಲಿ ಎಂದು ಅವರು ಹೇಳಿದರು. ಬೆಂಗಳೂರಿನ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನೊಂದಿದ್ದಾರೆ. ಅವರು ನನ್ನ ಬಂಧು, ನಾನೂ ಅಲ್ಲಿಗೆ ಹೋಗಿ ಬಂದಿದ್ದೇನೆ. ಸರಕಾರ ಎರಡು ಸಂಘಟನೆಗಳನ್ನು ನಿಷೇಧ ಮಾಡಲು ಹೊರಟಿದೆ. ಗಲಭೆಯಲ್ಲಿ ಭಾಗಿಯಾದ ಎಲ್ಲ ಸಂಘಟನೆಗಳನ್ನು ನಿಷೇಧಿಸಲಿ. ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರೆ ಅವರಿಗೂ ಶಿಕ್ಷೆಯಾಗಲಿ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಜಿಲ್ಲೆಗೆ ಬಂದು ಸೂಟ್‌ಕೇಸ್ ಹೆಗಲಿಗೆ ಹಾಕಿಕೊಂಡು ಹೋಗುತ್ತಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು. ಜಿಲ್ಲಾ ಸಚಿವರು ಇಲ್ಲಿನ ಅ ಧಿಕಾರಿಗಳನ್ನು ಬೆಂಗಳೂರಿಗೆ ಕರೆದು ಸಭೆ ಮಾಡುತ್ತಾರೆ. ಜನರು ಕೊರೊನಾಗೆ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಆದರೂ ಸಚಿವರು ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ ಎಂದರು.