Advertisement

ಜನಪ್ರತಿನಿಧಿಗಳು ಪ್ರಗತಿ ಕನಸು ಕಾಣಲಿ

07:53 PM Mar 23, 2020 | Suhan S |

ಪಾಲಭಾವಿ: ಸರ್ಕಾರದ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಚುನಾಯಿತ ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿಯ ಕನಸು ಕಾಣಬೇಕು ಎಂದು ರಾಯಬಾಗ ತಾಪಂ ಅಧ್ಯಕ್ಷೆ ಸುಜಾತಾ ಪಾಟೀಲ ಹೇಳಿದರು.

Advertisement

ಪಾಲಭಾವಿ ಗ್ರಾಪಂ ಕಾರ್ಯಾಲಯದ ಹತ್ತಿರ ನರೇಗಾ ಯೋಜನೆಯಡಿ 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಾಜೀವ್‌ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಮೂಲಭೂತ ಅವಶ್ಯಕತೆಗಳಾದ ಗಟಾರು, ಶೌಚಾಲಯ, ರಸ್ತೆಗಳು, ಕುಡಿಯುವ ನೀರು, ವಿದ್ಯುತ್‌, ಶಿಕ್ಷಣ ಸೌಲಭ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಸರ್ಕಾರದ ಅನುದಾನ ಸದ್ವಿನಿಯೋಗ ಮಾಡಿಕೊಂಡು ಗ್ರಾಮವನ್ನು ನಂದನವನವನ್ನಾಗಿ ಮಾಡಬೇಕು ಎಂದರು.

ಅಥಣಿ ತಾಪಂ ಎಡಿ ಅರುಣ ಮಾಚಕನೂರ, ನಿವೃತ್ತ ಶಿಕ್ಷಕ ಚಂದ್ರಯ್ಯ ಹಿರೇಮಠ, ಮಲ್ಲಿಕಾರ್ಜುನ ತೇಲಿ ಮಾತನಾಡಿದರು. ಪಾಲಭಾವಿ ಸಿದ್ಧಾರೂಢ ಮಠದ ಪೀಠಾಧಿಪತಿ ಲೀಲಾವಧೂತ ಶಿವಾನಂದ ಸ್ವಾಮೀಜಿ, ಇಂಚಗೇರಿ ಮಠದ ಪ್ರದೀಪಕುಮಾರ ಘಂಟಿ ಮಹಾರಾಜರು ಸಾನ್ನಿಧ್ಯ, ಗ್ರಾಪಂ ಅಧ್ಯಕ್ಷೆ ಅರುಣಾ ಕರೋಶಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಗಂಗಪ್ಪ ಕುರನಿಂಗ, ಗ್ರಾಪಂ ಉಪಾಧ್ಯಕ್ಷ ಸದಾಶಿವ ಭಂಡಾರಿ, ಭೂದಾನಿ ಅಣ್ಣಾಸಾಬಗೌಡ ಪಾಟೀಲ, ಗ್ರಾಪಂ ಸದಸ್ಯ ಪರಪ್ಪ ಗೊಡಿ, ಫಾರೂಕ್‌ ಮಿರ್ಜಿ, ಚನ್ನಪ್ಪ ಬಳಗಾರ, ಶಿರಿಯಾಳ ಮಾದರ, ದಾವಲ ಮೂಡಲಗಿ, ಶಿವಾನಂದ ಕಾಡಶೆಟ್ಟಿ, ಮಹಾಲಿಂಗಯ್ಯ ಮಠಪತಿ, ಗೋಮಟೇಶ ಪಾಟೀಲ, ಸಂಗಪ್ಪ ತುಪ್ಪದ, ಉಮೇಶ ನಿಂಗನೂರ, ಎಸ್‌.ಬಿ. ನಂದಗಾವಿ, ಶಿವಾಜಿ ಮೇತ್ರಿ, ವಿಠಲ ಕಲಾಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next