Advertisement
ಹೌದು ಇಂದು ದೇಶದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಶೌಚಗೃಹಗಳ ಕೊರತೆ ಎದ್ದು ಕಾಣುವುದರಿಂದ ಮತ್ತು ಅಗತ್ಯ ಸಮಯದಲ್ಲಿ ದೊರಕದೇ ಇರುವುದರಿಂದ ನಗರಕ್ಕೆ ಬೇರೆ ಊರಿನಿಂದ ತಾತ್ಕಾಲಿಕ ಅಥವಾ ಇತರ ಕೆಲಸಕ್ಕಾಗಿ ಬರುವ ಗ್ರಾಮೀಣ ಪ್ರದೇಶದ ಜನರು ಮತ್ತು ಯಾತ್ರಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ. ನಗರದಲ್ಲಿ ಸುತ್ತಾಡುವಾಗ ಅಚಾನಕ್ಕಾಗಿ ಮಲಮೂತ್ರ ಅಥವಾ ಮೂತ್ರ ವಿಸರ್ಜನೆ ಮಾಡಬೇಕಾದರೆ ಸಾರ್ವಜನಿಕ ಶೌಚಗೃಹಗಳನ್ನು ಹುಡುಕಲು ಅಲೆಯಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ನಗರಗಳಲ್ಲಿ ಸರಕಾರ ಅಥವಾ ಅಲ್ಲಿನ ಸ್ಥಳೀಯಾಡಳಿತದಿಂದ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸದೆ ಇರುವುದರಿಂದ ನಗರದ ನೈರ್ಮಲ್ಯಕ್ಕೆ ತೊಂದರೆಯಾಗುತ್ತದೆ.
Related Articles
ಅಮೆರಿಕದಲ್ಲಿ ಈಗಾಗಲೇ ನಿರ್ಮಿಸಿರುವ ಹಾಗೆ ಸ್ಟೀಲ್‌ನಿಂದ ತಯಾರಿಸಿದ ಶೌಚಗೃಹಗಳು ನಿರ್ಮಿಸುವುದು ಸೂಕ್ತ. ಇವು ಕಡಿಮೆ ತೂಕ ಹೊಂದಿರುವುದರಿಂದ ತಯಾರಿಸಿ ನಗರದ ವಿವಿಧ ಸ್ಥಳಗಳಿಗೆ ತಲುಪಿಸಬಹದು.
ಸ್ಟೀಲ್‌ನಿಂದ ತಯಾರಿಸುವುದರಿಂದ ಇದು ಸುದೀರ್ಘ ಬಾಳಿಕೆ ಬರುತ್ತವೆ. ಅಲ್ಲದೆ ಇದು ಸರಕಾರದ ವೆಚ್ಚವನ್ನೂ ಕಡಿಮೆಮಾಡುತ್ತದೆ ಮತ್ತು ಬೇಗನೆ ನಿರ್ಮಿಸಲು ಸಾಧ್ಯವಾಗುತ್ತದೆ.
Advertisement
ಸುಲಭವಾಗಿ ಸಿಗುವಂತಿರಲಿನಗರದಲ್ಲಿ ಹೆಚ್ಚು ಜನರ ಓಡಾಟ ಇರುವಂತಹ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ಸ್ಥಾಪಿಸಬೇಕು. ಅವು ಜನರನ್ನು ಹೆಚ್ಚು ಹುಡುಕಾಡಿಸದೆ ಬೇಗನೆ ಸಿಗುವಂತ ಸ್ಥಳಗಳಲ್ಲಿ ಇರಬೇಕು ಮತ್ತು ಅವುಗಳ ಸರಿಯಾದ ನಿರ್ವಹಣೆ ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವು ಸ್ಮಾರ್ಟ್ ಸಿಟಿಯ ಆದ್ಯತೆಯಾಗಲಿ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರವೂ ಕೂಡ ಅಮೆರಿಕದಲ್ಲಿ ಆರಂಭಿಸಲಾಗಿರುವ ಸಾರ್ವಜನಿಕ ಶೌಚಾಲಯದ ಮಾದರಿಯಲ್ಲಿ ಅಳವಡಿಸಿಕೊಳ್ಳುವುದು ಕೂಡ ಉತ್ತಮ ವಾದುದು. ಇದಕ್ಕೆ ಆಡಳಿತ ವ್ಯವಸ್ಥೆ ಮನಸ್ಸು ಮಾಡಲಿ. ಸ್ವಚ್ಛತೆಗೆ ಆದ್ಯತೆ
ಈಗಾಗಲೇ ಕೇಂದ್ರ ಸರಕಾರ ಸ್ವಚ್ಛ ಭಾರತ ಕನಸನ್ನು ಸಾಕಾರಗೊಳಿಸುವಲ್ಲಿ ಹಲವಾರು ಪ್ರಯತ್ನ ಮಾಡುತ್ತಿದೆ. ಇದು ಕೂಡ ಅದಕ್ಕೆ ಸಹಕಾರಿಯಾಗಿದೆ. ಇಂದು ದೊಡ್ಡ ನಗರಗಳು ನೀರಿನ ಅಭಾವವನ್ನು ಎದುರಿಸುತ್ತಿವೆ. ಆದರೆ ಈ ಆಧುನಿಕ ಮಾದರಿಯ ಶೌಚಗೃಹಗಳು ನೀರನ್ನು ಉಳಿಸುವಲ್ಲಿ ಹೆಚ್ಚು ಉಪಯುಕ್ತವಾಗಿವೆ. ಸ್ಟೀಲ್‌ನಿಂದ ಮಾಡಿದ ಕಾರಣ ಇತರ ಶೌಚಾಗೃಹಗಳಿಗಿಂತ ಇವುಗಳನ್ನು ಕಡಿಮೆ ನೀರಿನಿಂದ ಮತ್ತು ಬೇಗನೆ ಸ್ವಚ್ಛಗೊಳಿಸಬಹುದು. ಅಲ್ಲದೆ ಹೊರಗಿನಿಂದ ಬಂದ ಯಾತ್ರಿಕರು, ಜನರು ಶೌಚಗೃಹ ಸಿಗದೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದನ್ನು ತಪ್ಪಿಸಬಹುದು. – ಶಿವಾನಂದ ಎಚ್.