ಮಹಾಲಿಂಗಪುರ: ದೇಶಭಕ್ತರನ್ನು ಟಾರ್ಗೆಟ್ ಮಾಡಿ ದೇಶದಲ್ಲಿ ಭಯದ ವಾತಾವರಣ ಹುಟ್ಟಿಸುವ ಕೆಟ್ಟ ಪ್ರಯತ್ನ ಮಾಡುತ್ತಿರುವ ಮತಾಂಧರಿಗೆ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ, ಮುಂಬರುವ ಸವಾಲಿನ ದಿನಗಳನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ ಹೇಳಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಹಾಗೂ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬನಹಟ್ಟಿಯ ಹಿಂದೂ ಸಂಘಟನೆಗಳ ಮುಖಂಡ ನಂದು ಗಾಯಕವಾಡ ಮಾತನಾಡಿ, ಕನ್ಹಯ್ಯಲಾಲ್ ಹತ್ಯೆ ಮಾಡಿದ ಮತಾಂಧರಿಗೆ ಉಗ್ರ ಶಿಕ್ಷೆ ನೀಡಬೇಕು. ನಮ್ಮ ಯುವಕರು ದುಶ್ಚಟಗಳನ್ನು ಬಿಟ್ಟು, ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶ ಮತ್ತು ಧರ್ಮ ರಕ್ಷಣೆಯಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸಲು ಸದಾ ಸಿದ್ಧರಿರಬೇಕು ಎಂದರು.
ಅನ್ಯ ಧರ್ಮಗಳನ್ನು ಗೌರವಿಸೋಣ, ನಮ್ಮ ಧರ್ಮವನ್ನು ಪಾಲಿಸೋಣ ಎಂದರು. ಹಿಂದೂ ಯುವಕರು ಸ್ಥಳೀಯ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಕೆಲಕಾಲ ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ, ಜ್ಯೋತಿ ಬೆಳಗಿಸಿ ಮೌನಾಚರ ಣೆಯೊಂದಿಗೆ ಕನ್ಹಯ್ಯಲಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಹಿಂದೂ ಸಂಘಟನೆಗಳ ಮುಖಂಡ ರವಿ ಜವಳಗಿ, ಬಸವರಾಜ ಮನ್ಮಮಿ, ಸಿದ್ದುಗೌಡ ಪಾಟೀಲ, ಬಸವರಾಜ ಹಿಟ್ಟಿನಮಠ, ಮನೋಹರ ಶಿರೋಳ, ಮಹಾಲಿಂಗ ಮುದ್ದಾಪುರ, ಚೆನ್ನಪ್ಪ ರಾಮೋಜಿ, ಶಂಕರಗೌಡ ಪಾಟೀಲ, ಸಚಿನ್ ಕಲ್ಮಡಿ, ಸಂಗಮೇಶ ಅಂಬಲ್ಯಾಳ, ಭೈರೇಶ ಆದೆಪ್ಪನವರ, ಶೇಖರ ಮುಗುದುಮ್ಮ, ಪ್ರವೀಣ ಕಟ್ಟಿ, ಮಂಜು ಸಿಂಪಿ, ಅರ್ಜುನ ಪವಾರ, ಹನುಮಂತ ನಾವಿ, ದತ್ತಾ ಯರಗಟ್ಟಿಕರ, ಶಿವಾನಂದ ನೇಗಿನಾಳ, ವಿಜಯಕುಮಾರ ಸಬಕಾಳೆ, ಮಹಾಲಿಂಗ ಕಲಾಲ, ಸಂತೋಷ ಹಜಾರೆ, ಅಭಿಷೇಕ್ ತಾವರಗೆರೆ, ಕೃಷ್ಣ ಕಳ್ಳಿಮನಿ, ಯಲ್ಲಪ್ಪ ಬನ್ನೆನವರ ಸೇರಿದಂತೆ ಇತರರು ಇದ್ದರು.