Advertisement

ಸಂವಿಧಾನದ ಶಕ್ತಿ ಬಳಕೆಯಾಗಲಿ: ಪಾಟೀಲ

05:53 PM Apr 15, 2021 | Team Udayavani |

ಅಫಜಲಪುರ: ಜಗತ್ತಿನ ಬಹು ದೊಡ್ಡ ರಾಷ್ಟ್ರವಾದ ಭಾರತ ದೇಶಕ್ಕೆ ಸರ್ವರಿಗೂ ಸಮಪಾಲು ಎಂಬಂತೆ ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಶ್ರೇಷ್ಠವಾದ ಸಂವಿಧಾನ ರಚಿಸಿದ್ದು, ಆಳುವ ಸರ್ಕಾರಗಳು ಸಂವಿಧಾನದ ಆಶಯವನ್ನು ಯಥಾವತ್ತಾಗಿ ಜಾರಿಗೆ ತಂದರೆ ಸಾಮಾಜಿಕ ನ್ಯಾಯ ಸಿಗುವುದರಲ್ಲಿ ಸಂದೇಹವೇ ಇಲ್ಲ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

Advertisement

ಪಟ್ಟಣದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್‌ 130ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನ ಇತಿಹಾಸದಲ್ಲಿ ಡಾ| ಅಂಬೇಡ್ಕರ್‌ ವಿಶ್ವದ ಬಹುತೇಕ ರಾಷ್ಟ್ರದ ಕಾನೂನುಗಳನ್ನು ಅಧ್ಯಯನ ಮಾಡಿ, ದೇಶದ ಜನತೆಗೆ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಸಂವಿಧಾನ ರಚನೆ ಮಾಡಿದ್ದಾರೆ. ಈಗಿನ ಯುವ ಪೀಳಿಗೆ ಅವರಂತಹ ಮಹಾನ್‌ ದಾರ್ಶನಿಕರ ತತ್ವಾದರ್ಶ ಮೈಗೂಡಿಸಿಕೊಂಡು, ಅವರ ಕನಸು ನನಸಾಗಿಸಬೇಕು ಎಂದರು.

ತಹಶೀಲ್ದಾರ್‌ ನಾಗಮ್ಮ ಕೆ., ಸಮಾಜ ಕಲ್ಯಾಣ ಅಧಿಕಾರಿ ಚೇತನ ಗುರಿಕಾರ, ಬಿಸಿಎಂ ಅಧಿಕಾರಿ ಕರಬಸಮ್ಮ ಮಾತನಾಡಿ, ದೇಶದ ಜನತೆ ಮೀಸಲಾತಿಯಡಿ ಸವಲತ್ತು ಪಡೆದುಕೊಂಡು ಮಾದರಿ ಜೀವನ ನಡೆಸಬೇಕು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವರಾಜ ಚಾಂದಕವಟೆ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಆರೇಕರ್‌, ಡಾ| ಶಾಂತಲಿಂಗಪ್ಪ, ಮುಖಂಡರಾದ ಜೆ.ಎಂ. ಕೊರಬು, ರಾಜು ಪಾಟೀಲ, ಸಿಪಿಐ ಜಗದೇವಪ್ಪ ಪಾಳಾ, ಅಧಿಕಾರಿಗಳಾದ ಡಾ| ಸುಶೀಲ ಅಂಬೂರೆ, ವೈಜಣ್ಣ ಫುಲೆ, ಎಸ್‌.ಎಚ್‌. ಗಡಗಿಮನಿ, ಚಿತ್ರಶೇಖರ ದೆಗಲಮಡಿ ಇದ್ದರು. ರಾಜು ಆರೇಕರ್‌ ಪ್ರಾಸ್ತಾವಿಕ ಮಾತನಾಡಿದರು. ರವಿ ಗೌರ ಕಾರ್ಯಕ್ರಮ ನಿರೂಪಿಸಿದರು, ನಿಂಗು ಛಲವಾದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next