ಕಲಬುರಗಿ: ಸಮಾಜದ ಬಡ ಜನರಿಗೆ ಸಹಾಯ ಮಾಡುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು ಎಂದು ಉತ್ತರಾದಿ ಮಠದ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ಸಹೋದರ ಪಂ. ವಿದ್ಯಾ ಧೀಶಾಚಾರ್ಯ ಗುತ್ತಲ ಹೇಳಿದರು.
ನ್ಯೂ ಜಯತೀರ್ಥ ಕಲ್ಯಾಣ ಮಂಟಪ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿಪ್ರ ಸಮಾಜದ ಬಡ ಜನರನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ. ಸಮಾಜದ ಬಡ ವಿದ್ಯಾರ್ಥಿಗಳ ಓದಿಗೆ ನೆರವಾಗಬೇಕು. ಶಿಕ್ಷಣದಲ್ಲಿ ಪ್ರಗತಿ ಹೊಂದಿದಾಗ ಮಾತ್ರ ವಿಪ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಉತ್ತರಾದಿ ಮಠದಿಂದಲೂ ವಿದ್ಯಾರ್ಜನೆಗೆ ಸಹಾಯ ಮಾಡಲಾಗುತ್ತಿದೆ ಎಂದರು.
ವಿಶ್ವ ಮಧ್ವ ಮಹಾ ಪರಿಷತ್ ಮೂಲಕ ಶ್ರೀಪಾದಂಗಳವರು ಬಡ ವಿದ್ಯಾರ್ಥಿಗಳ ನೆರವಿಗೆ ಬರುವ ಉದ್ದೇಶದಿಂದ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ನಮ್ಮಿಂದ ಭಗವಂತನನು ಏನನ್ನು ಅಪೇಕ್ಷಿಸುವುದಿಲ್ಲ. ನಿಶ್ಚಲವಾದಭಕ್ತಿ ಒಂದಿದ್ದರೆ ಸಾಕು ಎಂದರು.
ಲಾತೂರಕರ ಕುಟುಂಬ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು ಶ್ಲಾಘನೀಯ. ಸ್ಥಿತಿವಂತರು ಬಡವರನ್ನು ಮೇಲೆತ್ತುವ ಕೆಲಸ ಮಾಡಬೇಕು. ನಮ್ಮ ಸಂಸ್ಕಾರ ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪ.ಗೋಪಾಲಾಚಾರ್ಯ ಅಕಮಂಚಿ ನೇತೃತ್ವದಲ್ಲಿ ಶ್ರೀನಿವಾಸ ಪದ್ಮಾವತಿ ವಿವಾಹಮಹೋತ್ಸವ ಜರುಗಿತು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಶಶೀಲ್ ನಮೋಶಿ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕುಡಾ ಅಧ್ಯಕ್ಷ ದಯಾಘನ್ ಧಾರವಾಡಕರ್, ಪ್ರಮುಖರಾದ ರಾಮಾಚಾರ್ಯ ಅವಧಾನಿ, ಹಣಮಂತಾಚಾರ್ಯ ಸರಡಗಿ, ಪ್ರಸನ್ನಾಚಾರ್ಯ ಜೋಶಿ, ಗಿರೀಶಾಚಾರ್ಯ ಅವಧಾನಿ, ಶ್ರೀನಿವಾಸಾಚಾರ್ಯ ಸರಡಗಿ, ಬಿಷ್ಣುದಾಸಾಚಾರ್ಯ ಖಜೂರಿ, ಭೀಮಸೇನಾಚಾರ್ಯ, ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ವಿಶ್ವ ನಧ್ವ ಮಹಾ ಪರಿಷತ್ ಅಧ್ಯಕ್ಷ ರಾಮಾಚಾರ್ಯ ಮೋಘರೆ, ವ್ಯಾಸ ರಾಜ ಸಂತೆ ಕೆಲ್ಲೂರ, ಕೃಷ್ಣ ಕಾಕಲವಾರ, ವಿದ್ಯಾಸಾಗರ ಕುಲಕರ್ಣಿ, ರಾಘವೇಂದ್ರ ಕೋಗನೂರ, ಶಾಮಚಾರ್ಯ ಬೈಚಬಾಳ, ಡಾ| ಪ್ರಹ್ಲಾದ ಬುರ್ಲಿ, ಜಯರಾವ್ ದೇಶಪಾಂಡೆ, ಬಾಲಕೃಷ್ಣ ಲಾತೂರಕರ್, ಉಷಾ ಲಾತೂರ, ರವಿ ಲಾತೂರಕರ್, ಜ್ಯೋತಿ ಲಾತೂರಕರ್, ಛಾಯಾ ಮುಳೂರು, ಅರುಣ ಮುಳೂರು, ಪ್ರಹ್ಲಾದ ಪೂಜಾರಿ, ಶ್ರೀನಿವಾಸ ದೇಸಾಯಿ, ಗುಂಡಾಚಾರ್ಯ ನರಬೋಳಿ, ಶ್ರೀನಿವಾಸ ನೆಲೋಗಿ, ದೀಪಾ ಸಾವಳಗಿ ಹಾಗೂ ಹಂಸನಾಮಕ, ಶ್ರೀ ಲಕ್ಷ್ಮೀನಾರಾಯಣ ಪಾರಾಯಣ ಸಂಘದ ಸದಸ್ಯರು ಪಾಲ್ಗೊಂಡಿದ್ದರು.