Advertisement

ಜನತೆ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಿ: ಶಾಮನೂರು

03:51 PM Oct 08, 2018 | Team Udayavani |

ದಾವಣಗೆರೆ: ಸಾರ್ವಜನಿಕರು ಶೌಚಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳುವುದಲ್ಲದೇ ಸ್ವತ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ
ನೀಡಿದ್ದಾರೆ.

Advertisement

ಮಂಡಕ್ಕಿ ಭಟ್ಟಿ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವತಿಯಿಂದ ನಿರ್ಮಿಸಿರುವ ಎರಡು ಹೊಸ ಶೌಚಾಲಯ ಹಾಗೂ ಸ್ನಾನದ ಗೃಹಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಮಂಡಕ್ಕಿ ಭಟ್ಟಿಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು, ಪುರುಷರು ಹಾಗೂ ಸಾರ್ವಜನಿಕರು ಆತ್ಯಾಧುನಿಕವಾಗಿ ನಿರ್ಮಿಸಿರುವ ನೂತನ ಶೌಚಾಲಯ ಹಾಗೂ ಸ್ನಾನದ ಗೃಹಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹಿಂದುಳಿದ ಪ್ರದೇಶ ಆಗಿರುವ ಮಂಡಕ್ಕಿಭಟ್ಟಿಯಲ್ಲಿ ಇಂತಹ ಉತ್ತಮ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಇದರಿಂದ ಮಂಡಕ್ಕಿ ಭಟ್ಟಿ ಕೆಲಸಕ್ಕೆ ಹೊರಗಡೆಯಿಂದ ಬರುವವರಿಗೆ ಅನುಕೂಲ ಆಗಿದೆ. ಹಾಗಾಗಿ ಸದ್ಬಳಕೆ ಮಾಡಿಕೊಳ್ಳುವ
ಮೂಲಕ ಸ್ವತ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಸಲಹೆ ನೀಡಿದರು. 

ಸ್ಮಾರ್ಟ್‌ಸಿಟಿ ಯೋಜನೆಯಡಿ 32.36 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಶೌಚಾಲಯಗಳಲ್ಲಿ 2 ಬ್ಲಾಕ್‌ ನಿರ್ಮಿಸಿ 1 ಪುರುಷರು, ಮತ್ತೂಂದು ಮಹಿಳೆಯರಿಗೆ ಮೀಸಲಿಡಲಾಗಿದೆ. ಎರಡು ಬ್ಲಾಕ್‌ನಲ್ಲಿ 5 ಸ್ನಾನದ ಕೋಣೆಗಳು ಹಾಗೂ 4 ಶೌಚಾಲಯ ಕೋಣೆಗಳು ಇವೆ. ಶೌಚಾಲಯಗಳ ನಿರ್ವಹಣೆಗಾಗಿ ಗುತ್ತಿಗೆ ನೀಡಲಾಗಿದೆ. ಜತೆಗೆ ಶೌಚಾಲಯಕ್ಕೆ ನೀರಿನ ಬಳಕೆಗಾಗಿ 7800 ಲೀಟರ್‌ ನೀರು ಸಾಮರ್ಥ್ಯದ ಕೆಳತೊಟ್ಟಿ ಹಾಗೂ 2000 ಲೀಟರ್‌ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ಅಳವಡಿಸಲಾಗಿದ್ದು, ನೀರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

ಎರಡು ಶೌಚಾಲಯಗಳನ್ನು 8 ತಿಂಗಳಲ್ಲಿ ಅಚ್ಚುಕಟ್ಟಾಗಿ ಮಲೇಬೆನ್ನೂರಿನ ಜಿ.ಎನ್‌. ವಿಜಯ್‌ ಕುಮಾರ್‌ ಎಂಬುವವರು
ನಿರ್ಮಿಸಿದ್ದು, ಅವರಿಗೆ ಗುತ್ತಿಗೆ ನಿರ್ವಹಣೆಯನ್ನು 8 ವರ್ಷಗಳಿಗೆ ನೀಡಲಾಗಿದೆ. ಸಾರ್ವಜನಿಕರು ನಿಗದಿಪಡಿಸಿದ ಒಂದು ಅಥವಾ ಎರಡು ರೂ. ಶುಲ್ಕ ಪಾವತಿಸುವ ಮೂಲಕ ಉಪಯೋಗ ಮಾಡಿಕೊಳ್ಳಬೇಕು ಎಂದರು.

Advertisement

ಕಾರ್ಯಪಾಲಕ ಅಭಿಯಂತರ ಗುರುಪಾದಯ್ಯ ಮಾತನಾಡಿ, ಮಂಡಕ್ಕಿ ಭಟ್ಟಿಯ ಸ್ಥಳೀಯ ನಿವಾಸಿಗಳು ಸಾಕಷ್ಟು
ಸಂಖ್ಯೆಯಲ್ಲಿ ಬಯಲು ಶೌಚಕ್ಕೆ ತೆರಳುತ್ತಿದ್ದರು.  ಇದನ್ನು ತಪ್ಪಿಸಲು ಎರಡು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳ ನಿರ್ವಹಣೆ ಇಲ್ಲಿನ ಪ್ರತಿಯೊಬ್ಬ ಸ್ಥಳೀಯರ ಜವಾಬ್ದಾರಿ ಕೂಡ ಎಂದು ಹೇಳಿದರು. ಡೆಕ್‌ ಸಂಸ್ಥೆಯ ಶ್ರೀನಾಥ್‌ರೆಡ್ಡಿ ಮಾತನಾಡಿ, ಪ್ರಥಮ ಬಾರಿಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಶೌಚಾಲಯ ನಿರ್ಮಿಸಿದ್ದು, ಸಾರ್ವಜನಿಕರ ಸದ್ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನೂ ಮುಂದಿನ ದಿನಗಳಲ್ಲಿ ಹಿಂದುಳಿದ ಪ್ರದೇಶವಾದ ಮಂಡಕ್ಕಿ ಭಟ್ಟಿ ಲೇಔಟ್‌ನಲ್ಲಿ ರಸ್ತೆ, ಚರಂಡಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಆಗಲಿವೆ ಎಂದು ತಿಳಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ಸಾಬ್‌, ಸದಸ್ಯರಾದ ಎ.ಬಿ. ರಹೀಂ ಸಾಬ್‌, ಅಲ್ತಾಫ್‌ ಹುಸೇನ್‌, ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್‌, ಮಂಡಕ್ಕಿ ಭಟ್ಟಿ ಸಂಘದ ಕಾರ್ಯದರ್ಶಿ ಎಂ.ಆರ್‌. ಸಿದ್ದಿಕ್‌, ಮುಖಂಡರಾದ ಜಾಕೀರ್‌, ದಾದಾಪೀರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next