Advertisement
ರವಿವಾರ ಮೂರುಸಾವಿರ ಮಠದ ಜಗದ್ಗುರು ಮೂಜಗಂ ಸಭಾಭವನದಲ್ಲಿ ಬಿಜೆಪಿ ಬೂತ್ ಸಶಕ್ತೀಕರಣ, ಬೂತ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿದರು, ಮುಖಂಡರಾದ ಲಿಂಗರಾಜ ಪಾಟೀಲ, ನಾಗೇಶ ಕಲಬುರ್ಗಿ, ರಂಗಾ ಬದ್ದಿ, ಚಂದ್ರಶೇಖರ ಗೋಕಾಕ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಡಿ.ಕೆ. ಚವ್ಹಾಣ, ಬಸವರಾಜ ಅಮ್ಮಿನಬಾವಿ, ಡಾ| ಕ್ರಾಂತಿಕಿರಣ, ರಾಜು ಜರತಾಘರ, ಪ್ರತಿಭಾ ಪವಾರ, ರಾಧಾಬಾಯಿ ಸಫಾರೆ, ಪೂಜಾ ಶೇಜವಾಡಕರ, ಪ್ರೀತಿ ಲದ್ವಾ, ಶಾಂತಬಾಯಿ ಹಿರೇಮಠ ಇನ್ನಿತರರಿದ್ದರು.
‘ಸಮಾಜಘಾತುಕ ಶಕ್ತಿ ಅಡಗಿಸಲು ಅಧಿಕಾರಕ್ಕೆ ಬರಬೇಕು’: ಪೂರ್ವ ಕ್ಷೇತ್ರದ ಆಕಾಂಕ್ಷಿಗಳೆಲ್ಲರಿಗೂ ಕಾರ್ಯ ಹಂಚಿಕೆ ಮಾಡಬೇಕು. ಪ್ರತಿಯೊಬ್ಬರ ಪ್ರಗತಿ ಪರಿಶೀಲಿಸಿ ಹಿಂದೆ ಉಳಿದವರನ್ನು ಈಗಿನಿಂದಲೇ ಕೈಬಿಡುವ ಕೆಲಸ ಆಗಬೇಕು. ಮನೆಯಲ್ಲಿ ಕುಳಿತರೆ ಆಗುವುದಿಲ್ಲ. ಯಾವ ಯೋಜನೆಗಳ ಕುರಿತು ಎಷ್ಟು ಜನರಿಗೆ ಮಾಹಿತಿ ನೀಡಿದ್ದೀರಿ. 50 ಕ್ಕಿಂತ ಹೆಚ್ಚು ಹಾಗೂ ಕಡಿಮೆ ಬಂದಿರುವ ಬೂತ್ ಗುರುತಿಸಿ ಎರಡಕ್ಕೂ ಕಾರಣ ಹುಡುಕಿ ಕೆಲಸ ಮಾಡಬೇಕು. ಸಮಾಜಘಾತುಕ ಶಕ್ತಿ ಅಡಗಿಸಲು ಅಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಒಂದು ವರ್ಷದ ಮೊದಲು ಅಭ್ಯರ್ಥಿ ಘೋಷಿಸಿದರೆ ಅವನನ್ನು ಸೋಲಿಸಲು ಪ್ರಯತ್ನಗಳೇ ಹೆಚ್ಚಾಗುತ್ತವೆ ಎಂದು ಕಾರ್ಯಕರ್ತರಿಗೆ, ಮುಖಂಡರಿಗೆ ಸಚಿವ ಪ್ರಹ್ಲಾದ ಜೋಶಿ ಕ್ಲಾಸ್ ತೆಗೆದುಕೊಂಡರು.
ಪೂರ್ವ ವಿಧಾನಸಭಾ ಕ್ಷೇತ್ರದ 216 ಬೂತ್‌ಗಳ ಪೈಕಿ 169ರಲ್ಲಿ ಸದಸ್ಯತ್ವ ಅಭಿಯಾನ ಪೂರ್ಣಗೊಂಡಿದೆ. ಉಳಿದ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಹಿಂದೇಟು ಹಾಕುವ ಬದಲು ಪಕ್ಷದ ಅಲ್ಪಸಂಖ್ಯಾತ ಮೋರ್ಚಾ ಮುಂದಾಳತ್ವದಲ್ಲಿ ಸದಸ್ಯತ್ವ ಅಭಿಯಾನ ಪೂರ್ಣಗೊಳಿಸಬೇಕು. –ಸಂಜಯ ಕಪಟಕರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ