Advertisement

ಚಿತ್ರಕಲೆ ಪಠ್ಯ ವಿಷಯಗಳಿಗೂ ಪೂರಕವಾಗಿರಲಿ

09:30 PM Jan 27, 2020 | Lakshmi GovindaRaj |

ಹಾಸನ: ಚಿತ್ರಕಲೆ ಮಕ್ಕಳ ಪಠ್ಯವಿಷಯಗಳ ಕಲಿಕೆಗೂ ಪೂರಕವಾಗಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್‌. ಪ್ರಕಾಶ್‌ ಚಿತ್ರಕಲಾ ಶಿಕ್ಷಕರಿಗೆ ಸಲಹೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಸಾಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 8ನೇ ವರ್ಷದ ಶೈಕ್ಷಣಿಕ ಸಮ್ಮೇಳನ – ಬಣ್ಣ ಬೆಳಕು ಹಾಗೂ ಮಕ್ಕಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ಚಿತ್ರಕಲಾ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಜಿಲ್ಲೆಯ ಎಲ್ಲಾ ಶಿಕ್ಷಕರು ಚಿತ್ರಕಲಾ ಸಮ್ಮೇಳನದಲ್ಲಿ ಭಾಗವಹಿಸಿದರೆ ಸಮ್ಮೇಳನಕ್ಕೆ ಅರ್ಥವಿರುತ್ತದೆ.ಸಮ್ಮೇಳನದ ಉಪಯೋಗವೂ ಆಗುತ್ತದೆ ಎಂದರು.

ಚಿತ್ರ ಕಲಾ ಶಿಕ್ಷಕರ ಸಂಘಟನೆ: ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವೈ.ಬಿ. ರವಿ ಅವರು, ಚಿತ್ರಕಲಾ ಶಿಕ್ಷಕರ ಸಂಘವು ಕಳೆದ ಹತ್ತಾರು ವರ್ಷಗಳಿಂದ ಸಂಘಟನೆಯಾಗುತ್ತಾ ಬಂದಿದ್ದು, ಈಗ ಸಂಘದ ಮೂಲಕ ಚಿತ್ರಕಲಾವಿದರಿಗೆ ಚೈತನ್ಯ ತುಂಬಲಾಗುತ್ತಿದೆ ಎಂದರು.

ಶಾಲೆಯಲ್ಲಿ ಚಿತ್ರ ಕಲೆ ಕಲಿಸಿ: ಮಕ್ಕಳು ಅಂಕಗಳಿಸಿದರೆ ಎಲ್ಲ ಕಲಿಂತಾಗುವುದಿಲ್ಲ. ಪಠ್ಯವಿಷಯಗಳಿಗೆ ಎಷ್ಟು ಮಹತ್ವ ಕೊಡಲಾಗುತ್ತದೆಯೋ ಅಷ್ಟೆ ಪ್ರಾಮುಖ್ಯತೆಯನ್ನು ಚಿತ್ರಕಲೆ ಸೇರಿ ಪಠ್ಯೇತರ ಚಟುವಟಿಕೆಗಳಿಗೂ ಕೊಡಬೇಕು. ಮನೆಯಲ್ಲಿ ಒಂದು ಹೆಣ್ಣು ಮಗು ಇರುವಂತೆ ಶಾಲೆಗಳಲ್ಲಿ ಚಿತ್ರಕಲೆಯೂ ಇರಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಮಕ್ಕಳು ರಚಿಸಿದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರತಿಭಾನ್ವಿತ ಮಕ್ಕಳ ಸನ್ಮಾನವೂ ನಡೆಯಿತು.

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್‌. ಕೇಶವೇಶ್‌, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಡಿ.ಟಿ. ಪುಟ್ಟರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಚಿತ್ರಕಲಾ ಶಿಕ್ಷಕ‌ ರಮೇಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರಕಲಾ ಶಿಕ್ಷಕಿ ಮಮತ ಪ್ರಾರ್ಥಿಸಿದರು. ಚಿತ್ರಕಲಾವಿದ ಬಿ.ಎಸ್‌.ದೇಸಾಯಿ ಸ್ವಾಗತಿಸಿದರು.

Advertisement

ಮಕ್ಕಳಲ್ಲಿ ಚಿತ್ರಕಲೆ ಆಸಕ್ತಿ ಮೂಡಿಸಿ: ಒಂದು ಶಾಲೆಯಲ್ಲಿ ಒಬ್ಬ ಚಿತ್ರಕಲಾ ಶಿಕ್ಷರಿದ್ದರೆ ಆ ಶಾಲೆಯಲ್ಲಿ ಚಿತ್ರಕಲೆಗೆ ಮಹತ್ವ ಇದೆ ಎಂದರ್ಥ. ಶಿಕ್ಷಕರು ಮಕ್ಕಳಿಗೆ ಕಲಿಸುವ ಚಿತ್ರಕಲೆ ಇತರ ಪಠ್ಯ ವಿಷಯಗಳಿಗೂ ಕಲಿಕೆಗೂ ಪೂರಕವಾಗಿರಬೇಕು ಈ ನಿಟ್ಟಿನಲ್ಲಿ ಚಿತ್ರಕಲಾ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಆಗ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ಡಿಡಿಪಿಐ ಪ್ರಕಾಶ್‌ ಹೇಳಿದರು. ಇಂತಹ ಚಿತ್ರಕಲಾ ಸಮ್ಮೇಳನಗಳು ಶಿಕ್ಷಕರ ವೃತ್ತಿ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next