Advertisement

ಹೊಸ ಮರಳು ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರಲಿ

12:07 AM Nov 09, 2021 | Team Udayavani |

ಹೊಸ ಮರಳು ನೀತಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಕೊರತೆಯನ್ನು ಸರಿದೂಗಿಸಲು ಮತ್ತು ಬಡ-ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೆಟಕುವ ದರದಲ್ಲಿ ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಹೊಸ ಮರಳು ನೀತಿ ಜಾರಿಗೆ ತಂದಿರುವ ಸರಕಾರದ ಕ್ರಮ ಶ್ಲಾಘನೀಯ ಮತ್ತು ಸ್ವಾಗತಾರ್ಹ. ಇದರ ಜತೆಗೆ ಹೊಸ ನೀತಿಯನ್ನು ಸುಗಮವಾಗಿ ಕಾರ್ಯರೂಪಕ್ಕೆ ತರುವ ಸವಾಲು ಸಹ ಸರ ಕಾರದ ಮುಂದಿದೆ.

Advertisement

ಹೊಸ ಮರಳು ನೀತಿ “ಬಹು ಆಯಾಮ ಸ್ನೇಹಿ’ ಆಗಿದೆ. ಅಕ್ರಮಗಳನ್ನು ತಡೆಯುವ, ಬೇಡಿಕೆಗೆ ತಕ್ಕಂತೆ ಮರಳು ಪೂರೈಸುವ, ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಬಡವರಿಗೆ ಕೈಗೆಟಕುವ ದರಗಳಲ್ಲಿ ಅವರ ಸಮೀಪದ ಸ್ಥಳಗಳಲ್ಲೇ ಮರಳು ಲಭ್ಯವಾಗಬೇಕು ಎಂಬ ವಿಚಾರಗಳು ಈ ಹೊಸ ನೀತಿಯಲ್ಲಿ ಅಡಕವಾಗಿವೆ. ಇದಲ್ಲದೇ ಹೂಡಿಕೆದಾರರ ಸ್ನೇಹಿ ನೀತಿಯಾಗಿದ್ದು, ನಿರ್ಮಾಣ ವಲಯದತ್ತ ಹೂಡಿಕೆದಾರರನ್ನು ಇದು ಆಕರ್ಷಿಸಲಿದೆ. ಮುಖ್ಯವಾಗಿ ಸರ ಕಾರಕ್ಕೆ “ರಾಯಧನ’ ರೂಪದಲ್ಲಿ ಆದಾಯ ತಂದುಕೊಡುವ ಮತ್ತು ಮರಳು ಗಣಿಗಾರಿಕೆಯಿಂದ ಪಂಚಾಯತ್‌ಗಳು ಹಾಗೂ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಹೊಸ ನೀತಿಯಲ್ಲಿ ವಿಪುಲ ಅವಕಾಶವಿದೆ.ದಕ್ಷಿಣ ಕನ್ನಡ,

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ನಡೆಯುವ ನದಿ ಬದಿಯ ಸಾಂಪ್ರದಾಯಿಕ ಮಾನವಾಧಾರಿತ “ಮುಳುಗು ಮರಳು ತೆಗೆಯುವ ಪದ್ದತಿ’ಗೆ ರಿಯಾಯಿತಿ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಮರಳು ತೆಗೆಯಲು ಅಲ್ಲಿನ ಬೇಡಿಕೆಗೆ ಅನುಗುಣವಾಗಿ ರಿಯಾಯಿತಿ ನೀಡಲಾಗಿದೆ. ಆದರೆ ಯಾವುದೇ ಯಂತ್ರೋಪಕರಣ ಬಳಸದೆ ಸಾಂಪ್ರದಾಯಿಕ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸದ್ಯ ರಾಜ್ಯದಲ್ಲಿ ವಾರ್ಷಿಕ 45 ದಶಲಕ್ಷ ಟನ್‌ ಮರಳು ಬೇಡಿಕೆ ಇದೆ. ಇದರಲ್ಲಿ 30 ದಶಲಕ್ಷ ಟನ್‌ ಎಂ- ಸ್ಯಾಂಡ್‌, 4.5 ದಶಲಕ್ಷ ಟನ್‌ ನದಿ ಮೂಲಗಳಿಂದ, 2 ದಶಲಕ್ಷ ಟನ್‌ ಇತರ ರಾಜ್ಯಗಳಿಂದ ಪೂರೈಕೆ ಆಗುತ್ತಿದೆ. ಒಟ್ಟು 9 ದಶಲಕ್ಷ ಟನ್‌ ಕೊರತೆ ಇದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ಏರಿಳಿತ ಆಗಬಹುದು. ಆದರೆ ಸದ್ಯ ಇರುವ 9 ದಶಲಕ್ಷ ಟನ್‌ ಕೊರತೆ ನೀಗಿಸುವುದು ಸುಲಭ ಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ
ಹೊಸ ಮರಳು ನೀತಿ ಪರಿಹಾರ ದೊರಕಿಸಿಕೊಡಬಹುದು. ಮರಳು ಗಣಿಗಾರಿಕೆಗೆ ರಾಜ್ಯದಲ್ಲಿ ಒಂದಿಷ್ಟು ಕರಾಳ ಇತಿಹಾಸವಿದೆ.

ಇದನ್ನೂ ಓದಿ:ಮರೀನಾ ಬೀಚ್‌ನಲ್ಲಿ ಕರುಣಾ ಸ್ಮಾರಕ

Advertisement

ಮರಳು ಗಣಿಗಾರಿಕೆ ಹಾಗೂ ಅಕ್ರಮಗಳು ಜತೆ ಜತೆಯಾಗಿ ಸಾಗಿವೆ. ಕಾಲ ಕಾಲಕ್ಕೆ ರಾಜಕೀಯ ಪಕ್ಷಗಳು, ಘಟಾನುಘಟಿ ರಾಜಕಾರಣಿಗಳಿಗೆ ಅಕ್ರಮ ಮರಳು ಗಣಿಗಾರಿಕೆಯ “ಧೂಳು’ ಮೆತ್ತಿಕೊಂಡಿದೆ. ರದ ಈ ಸದಾಶಯ ಸಾಕಾರಗೊಳ್ಳಬೇಕಾದರೆ ಆಡಳಿತ ಯಂತ್ರವನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಬೇಕಾಗಿದೆ. ನೀತಿಯ ಅನುಷ್ಠಾನಕ್ಕೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಗ್ರಾ.ಪಂ.ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಈ ಆಡಳಿತಾತ್ಮಕ ಹಂತಗಳು ಸರಳೀಕರಣದ ಬದಲಿಗೆ ಬಿಕ್ಕಟ್ಟು ಮತ್ತು ತೊಡಕುಗಳನ್ನು ತರುವಂತಾಗಬಾರದು. ಪರಿಸರ ಪರವಾನಿಗೆ ಮತ್ತಿತರರ ಕಾನೂನು ವಿಚಾರಗಳಿಗೆ ಸರಕಾರ ಸೂಕ್ಷ್ಮಮತಿಯಾಗಬೇಕು. ಪ್ರತಿ ಸರಕಾರ ಬಂದಾಗ ಅಥವಾ ಸಚಿವರುಬದಲಾದಾಗ ಹೊಸ ಮರಳು ನೀತಿ ಪ್ರಚಲಿತಕ್ಕೆ ಬರುತ್ತದೆ. ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳುವ,ತೆಲಂಗಾಣ ಮಾದರಿ ಮರಳು ನೀತಿ ಮುಂತಾದ ಮಾತುಗಳು ಹಿಂದೆ ಕೇಳಿ ಬಂದಿವೆ. ಹಾಗಾಗಿ, ಹೊಸ ನೀತಿಯಲ್ಲಿ ಪ್ರಯೋಗಗಳ ಬದಲಿಗೆ ಸ್ಥಿರತೆ ಇರಲಿ.

Advertisement

Udayavani is now on Telegram. Click here to join our channel and stay updated with the latest news.

Next