Advertisement

ಮಾತು ಮನಸ್ಸನ್ನು ಅರಳಿಸುವಂತಿರಲಿ

03:52 PM Apr 21, 2022 | Team Udayavani |

ಚಿತ್ರದುರ್ಗ: ನೂರು ಪುಸ್ತಕ ಓದುವುದು ಒಂದು ಒಳ್ಳೆಯ ಮಾತು ಕೇಳುವುದಕ್ಕೆ ಸಮ. ಇದರಿಂದ ಸಮಯ ಹಾಗೂ ಶ್ರಮ ಎರಡೂ ಉಳಿಯುತ್ತದೆ ಎಂದು ವಿಜಯಪುರದ ವನಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

Advertisement

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಪ್ರಥಮ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಮಾತು ಮತ್ತೂಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು. ಬದಲಾಗಿ ಮನಸ್ಸನ್ನು ಅರಳಿಸುವಂತಿರಬೇಕು. ನಾವು ಅಧ್ಯಯನ ಮಾಡುತ್ತಿರುವ ಕಲಾ ವಿಭಾಗ ಮನುಷ್ಯತ್ವವನ್ನು ಕಟ್ಟಿಕೊಡುತ್ತದೆ. ನಾವು ಯಾವ ಕ್ಷೇತ್ರದಲ್ಲಿದ್ದೇವೆ ಎನ್ನುವುದಕ್ಕಿಂತ ಎಷ್ಟು ಕ್ರಿಯಾಶೀಲವಾಗಿದ್ದೇವೆ ಎನ್ನುವುದು ಮುಖ್ಯ ಎಂದರು.

ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸ, ಅಭಿರುಚಿಯಲ್ಲಿ ತೊಡಗಿಸಿಕೊಳ್ಳಬೇಕು. ಕೃತಜ್ಞತೆಗಿಂತ ಮಧುರವಾದುದು ಜೀವನದಲ್ಲಿ ಬೇರೇನು ಇಲ್ಲ. ಸದೃಢ ದೇಶ ಕಟ್ಟುವ ಶಕ್ತಿ ಶಿಕ್ಷಕರಲ್ಲಿದೆ. ನೀವು ಯಾವುದೇ ರಂಗದಲ್ಲಿದ್ದರೂ ಸಂಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡಬೇಕು. ಪ್ರತಿಭಾವಂತರು, ಒಳ್ಳೆಯವರು, ಶ್ರಮಜೀವಿಗಳು ಸಾಕಷ್ಟು ಮಂದಿ ಇದ್ದಾರೆ. ಆದರೆ ಕಣ್ಣಿಗೆ ಕಾಣುವುದಿಲ್ಲ. ಸ್ವಾರ್ಥ ಪ್ರಪಂಚದಲ್ಲಿ ಯಾರೂ ಮುಳುಗಬಾರದು. ನಾಲ್ಕು ಜನರಿಗೆ ಕ್ರಿಯಾಶೀಲವಾಗಿರಬೇಕೆಂದು ಆಲೋಚನೆ ಮಾಡುವುದೇ ನಿಜವಾದ ಶಿಕ್ಷಣ. ಸಮ ಸಮಾಜ ನಿರ್ಮಿಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕಿಂತ ದೊಡ್ಡ ಸಾಧನೆ ಬೇರೆಯಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ವಿಶ್ವವಿದ್ಯಾನಿಲ ಯದ ಶಿಕ್ಷಣ ನಿಖಾಯ ಮುಖ್ಯಸ್ಥ ಡಾ| ಕೆ. ವೆಂಕಟೇಶ್‌ ಮಾತನಾಡಿ, ಗುರು ಪರಂಪರೆಯ ದೇಶ ಭಾರತದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನಮಾನವಿದೆ. ಬಿ.ಇಡಿ ಶಿಕ್ಷಣ ತರಬೇತಿ ಪಡೆದರೆ ಸ್ವಂತ ಕಾಲ ಮೇಲೆ ನಿಂತು ಸ್ವಾವಲಂಭಿಗಳಾಗಿ ಬದುಕಬಹುದು. ಬಿ.ಇಡಿಗೆ ತನ್ನದೇ ಆದ ಶಕ್ತಿಯಿದೆ. ಚಾಕಚಕ್ಯತೆ, ಕೌಶಲ್ಯತೆ, ಆತ್ಮವಿಶ್ವಾಸ ಮೂಡಿಸುವ ಕೋರ್ಸ್‌ ಇದಾಗಿರುವುದರಿಂದ ಸಕಾರಾತ್ಮಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಬಿ.ಇಡಿ ಎಂದರೆ ಸೈಕಾಲಜಿ ಎನ್ನುವುದು ನೆನಪಿಗೆ ಬರುತ್ತದೆ. ಸ್ಪರ್ಧಾತ್ಮಕ ಹಾಗೂ ಸಿ.ಇ.ಟಿ ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದರಿಂದ ಪ್ರೋತ್ಸಾಹಿಸುವವರು ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದರು.

Advertisement

ನಿವೃತ್ತ ಪ್ರಾಚಾರ್ಯ ಪ್ರೊ| ಕೆ. ಜಂಬುನಾಥ ಮಾತನಾಡಿ, ಬಿ.ಇಡಿ ಎಂದರೆ ಶಿಕ್ಷಣದ ತರಬೇತಿ. ಶಿಕ್ಷಣವನ್ನು ಹೇಗೆ ಯಾವ ರೀತಿ ಎಷ್ಟು ಕೊಡಬೇಕು ಎನ್ನುವುದೇ ಬಿ.ಇಡಿ. ಉದ್ದೇಶ. ತರಬೇತಿ ಯನ್ನು ಮುಗಿಸಿಕೊಂಡು ಹೋದ ಮೇಲೆ ಗಟ್ಟಿ, ದಿಟ್ಟ ವೃತ್ತಿಯನ್ನಾಗಿಸಿಕೊಂಡು ಪವಿತ್ರವಾದ ಶಿಕ್ಷಕ ವೃತ್ತಿಯ ಘನತೆಯನ್ನು ಕಾಪಾಡಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ. ವೀರೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ| ಎಂ.ಆರ್. ಜಯಲಕ್ಷ್ಮೀ, ಬಾಪೂಜಿ ದೂರಶಿಕ್ಷಣ ಸಂಯೋಜನಾ ಧಿಕಾರಿ ಪ್ರೊ| ಎ.ಎಂ. ರುದ್ರಪ್ಪ, ನಿವೃತ್ತ ಪ್ರಾಧ್ಯಾಪಕ ಡಾ| ಎಂ.ಕೆ. ಪ್ರಭುದೇವ್‌ ವೇದಿಕೆಯಲ್ಲಿದ್ದರು. 2019-2021 ಸಾಲಿನ ಬಿ.ಇಡಿಯಲ್ಲಿ ಹೆಚ್ಚು ಅಂಕ ಗಳಿಸಿದ ತಸ್ಮಿಯಭಾನು, ರಮ್ಯ, ಸುಷ್ಮಾ, ತನ್‌ಹಾಜ್‌ ಅವರನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next