Advertisement

ಮನಸ್ಸು ಅರಳಿಸುವ ಕಾವ್ಯ ರಚನೆಯಾಗಲಿ: ಹೆಬ್ಬಾಳಕರ್‌

06:19 PM Aug 25, 2021 | Team Udayavani |

ಬೀದರ: ಕಾವ್ಯಗಳು ಓದುಗರ ಮನ ಅರಳಿಸುವಂತಿರಬೇಕೇ ಹೊರತು ಮನಸ್ಸು ಕೇರಳಿಸುವಂತಿರಬಾರದು. ಅಂಥ ಕಾವ್ಯಗಳ ರಚನೆ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್‌ ಕರೆ ನೀಡಿದರು.

Advertisement

ನಗರದ ಮೈಲೂರ ಕ್ರಾಸ್‌ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಅಕ್ಷಯ ಪ್ರಕಾಶನ ಹಾಗೂ ರಂಗ ತರಂಗ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌ ಆಶ್ರಯದಲ್ಲಿ ಆಯೋಜಿಸಿದ್ದ ಬುದ್ಧಾದೇವಿ ಅಶೋಕ ಸಂಗಮ ವಿರಚಿತ “ಬುದ್ಧ ಬಸವ ಅಂಬೇಡ್ಕರ್‌’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದ್ದದ್ದು ಇದ್ದಂತೆ ಬರೆಯುವ ಛಾತಿ ಬರಹಗಾರರಲ್ಲಿ ಇರಬೇಕು. ಕಾವ್ಯಗಳು ಹೊಗಳಭಟ್ಟರಂತೆ ರಚನೆ ಮಾಡಬಾರದೆಂದರು.

ಅಣದೂರಿನ ಭಂತೆ ಸಂಘರಕ್ಖಿತ್‌ ಸಾನ್ನಿಧ್ಯ ವಹಿಸಿ ಮಾತನಾಡಿ, ಶಾಂತಿಯ ದೂತ ಗೌತಮ ಬುದ್ಧರ ಸಂದೇಶಗಳು ಹಾಗೂ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ನಡೆದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ರಚನೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಕರುನಾಡು ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿ, ಗಡಿ ಜಿಲ್ಲೆ ಬೀದರನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೊಸ ಪ್ರತಿಭೆಗಳು ಕನವ ಸಂಕಲನಗಳು ಹೊರತರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಸಾಹಿತಿ ಮಚ್ಚೇಂದ್ರ ಅಣಕರಲ್‌ ಅವರು ಕೃಷಿಯ ಪರಿಚಯ ನಡೆಸಿಕೊಟ್ಟರು. ಹಿರಿಯ ಕಲಾವಿದ ಶಂಭುಲಿಂಗ ವಾಲೊªಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗ ತರಂಗ ಸಾಮಾಜಿಕ ಟ್ರಸ್ಟ್‌ ಅಧ್ಯಕ್ಷ ಎಂ.ಪಿ. ಮುದಾಳೆ ಸ್ವಾಗತಿಸಿದರು. ಸುನೀತಾ ಬಿಕ್ಲೆ ನಿರೂಪಿಸಿದರು. ರವಿ ಕಾಂಬಳೆ ವಂದಿಸಿದರು. ಈ ವೇಳೆ ಕೃತಿ ವಿರಚಿತ ಬುದ್ಧಾದೇವಿ ಸಂಗಮ ದಂಪತಿಯನ್ನು ಎಸ್‌ಸಿ-ಎಸ್‌ಟಿ ಸಹ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಾಹಿತಿ ಎಂ.ಜಿ. ಗಂಗನಪಳ್ಳಿ, ರಂಗಕರ್ಮಿ ಮಹೇಶ ಪಾಟೀಲ, ಸುರೇಶ ಠಾಳೆ, ಪಾಂಡುರಂಗ ಬೆಲ್ದಾರೆ, ಗಣಪತಿ ಭಕ್ತ, ಸುನೀಲ ಗಾಯಕವಾಡ, ವಿಜಯಕುಮಾರ ಅಷ್ಟೂರೆ, ವಿಜಯಕುಮಾರ ಸೋನಾರೆ, ಶಾಮರಾವ ನೆಲವಾಡೆ, ಸುನೀಲ ಭಾವಿಕಟ್ಟಿ, ತಾನಾಜಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next