ಮಹಾನಗರ: ಮಾಧ್ಯಮಗಳು ಜನತೆಯ ಭಾವನೆಗಳಿಗೆ ಧ್ವನಿಯಾಗಬೇಕೆಂದು ಲೇಖಕಿ ಡಾ| ಚಂದ್ರಕಲಾ ನಂದಾವರ ಅವರು ಹೇಳಿದ್ದಾರೆ.
ಸಂದೇಶ ಕಲಾ ಮತ್ತು ಶಿಕ್ಷಣ ಪ್ರತಿಷ್ಠಾನವು ಕೆನರಾ ಕಮ್ಯುನಿಕೇಶನ್ ಸೆಂಟರ್, ದಾಯಿjವರ್ಲ್ಡ್ ವೀಕ್ಲಿಯ ಸಹಯೋಗದಲ್ಲಿ ಏರ್ಪಡಿಸಿರುವ ಪತ್ರಿಕೋದ್ಯಮ ಶಿಬಿರವನ್ನು ಅವರು ಸೋಮವಾರ ಉದ್ಘಾಟಿಸಿದರು.
ಪತ್ರಕರ್ತರು ಪರಿಪೂರ್ಣ ವೃತ್ತಿಪರತೆಯನ್ನು ಹೊಂದಿರಬೇಕು. ಈ ಕಾರಣ ದಿಂದ ಪತ್ರಿಕಾರಂಗವನ್ನು ಪ್ರಜಾತಂತ್ರದ ನಾಲ್ಕನೆಯ ಆಯಾಮವೆಂದು ಗೌರವಿಸಲಾಗುತ್ತಿದೆ. ಪತ್ರಿಕೋದ್ಯಮದ ಕುರಿತಾದ ಜಾಗೃತಿಯನ್ನು ಮೂಡಿಸುವ ಇಂತಹ ಶಿಬಿರಗಳು ಸ್ವಾಗತಾರ್ಹ ಎಂದು ಸಂಘಟಕರನ್ನು ಅಭಿನಂದಿಸಿದರು.
ಸಂದೇಶದ ನಿರ್ದೇಶಕ ಫಾ| ವಿಕ್ಟರ್ ವಿಜಯ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಆಗಸ್ಟ್ 5ರವರೆಗೆ ಶಿಬಿರ ನಡೆಯಲಿದೆ. 53 ಶಿಬಿರಾರ್ಥಿಗಳನ್ನು ಆರಿಸಲಾಗಿದೆ. ಮಾಧ್ಯಮ ಕ್ಷೇತ್ರದ ತಜ್ಞರು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ ಎಂದು ತಿಳಿಸಿದರು. ಸ್ಟಾನಿ ಬೇಳ ಉಪಸ್ಥಿತರಿದ್ದರು.
ಸಿಸಿಸಿಯ ನಿರ್ದೇಶಕ ಫಾ| ರಿಚರ್ಡ್ ಡಿ’ ಸೋಜಾ ಸ್ವಾಗತಿಸಿದರು. ಪ್ರಾಯೋಗಿಕ ಪತ್ರಿಕೆಗಳ ರಚನೆ ಸಹಿತ ಮುದ್ರಣ- ವಿದ್ಯುನ್ಮಾನ ಮಾಧ್ಯಮಗಳ ಬಗ್ಗೆ ಸಮಗ್ರ ತರಬೇತಿ ಶಿಬಿರದಲ್ಲಿ ನೀಡಲಾಗುವುದೆಂದು ವಿವರಿಸಿದರು. ಸಂದೇಶದ ಸಹಾಯಕ ನಿರ್ದೇಶಕ ವಿಕ್ಟರ್ ಕ್ರಾಸ್ತಾ ವಂದಿಸಿದರು.