ಬೀದರ: ತಮ್ಮ ನ್ಯಾಯಯುತ ಹಕ್ಕು ಗಳನ್ನು ಪಡೆಯಲು ರಾಜ್ಯದ ಮರಾಠಾ ಸಮಾಜದವರು ಸಂಘಟಿತರಾಗಬೇಕು ಎಂದು ಬೆಂಗಳೂರಿನ ಮರಾಠಾ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಮಹಾರಾಜ್ ಸಲಹೆ ಮಾಡಿದರು.
ಜಿಲ್ಲೆಯ ಸಮಸ್ತ ಮರಾಠಾ ಸಮಾಜದ ವತಿಯಿಂದ ನಗರದ ರಂಗ ಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮರಾಠಾ ಸಮಾಜದವರ ಜನಸಂಖ್ಯೆ ಸುಮಾರು 60 ಲಕ್ಷದಿಂದ 70 ಲಕ್ಷ ಇದೆ. ಆದರೂ, ಸಮಾಜದವರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಉಸ್ಮಾನಾಬಾದ್ ಜನತಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತರಾವ್ ನಾಗದೆ, ಜಿಲ್ಲೆಯ ಮರಾಠಾ ಸಮಾಜದ ಅಧಿಕಾರಿಗಳು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು. ಮುಖಂಡ ವೆಂಕಟೇಶರಾವ್ ಮಾಯಿಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಸಮಾಜದ ಮುಖಂಡರಾದ ದಿಗಂಬರರಾವ್ ಮಾನಕಾರಿ, ಬಾಬುರಾವ್ ಕಾರಬಾರಿ, ಪದ್ಮಾಕರ್ ಪಾಟೀಲ, ಮಾಧವರಾವ್ ಬಿರಾದಾರ, ರಘುನಾಥರಾವ್ ಜಾಧವ್, ವಿದ್ಯಾವಾನ್ ಪಾಟೀಲ, ಸತೀಶ್ ಮುಳೆ, ಶಿವಾಜಿ ಭೋಸ್ಲೆ, ಸಂತೋಷ ಜಗದಾಳೆ, ರಮೇಶ ಸಿಂಧೆ, ಗುಣವಂತ ಸಿಂಧೆ, ಕಿಶನರಾವ್ ಪಾಟೀಲ ಇಂಚೂರ, ದಾಮೋಧರ ನೆಲವಾಡೆ, ಶಾಹುರಾಜ್ ಪವಾರ್, ಶಂಕರರಾವ್ ಬಿರಾದಾರ, ಅಶೋಕ ಪಾಟೀಲ ಇದ್ದರು. ನಾರಾಯಣ ಪಾಟೀಲ ಕೋರೆಕಲ್ ನಿರೂಪಿಸಿದರು.