Advertisement

ಸಾಹಿತಿಗಳು ಸಮಾಜಮುಖೀಯಾಗಲಿ

12:08 PM Oct 22, 2018 | Team Udayavani |

ಬೀದರ: ದಮನಿತರು, ಶೋಷಿತರು, ದಲಿತ, ನಿರ್ಗತಿಕರ ಹಾಗೂ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸಾಹಿತಿಗಳು ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಾಹಿತಿ ಶಶಿಕಲಾ ವಸ್ತ್ರದ ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಜಾನಪದ ಕಲಾವಿದರ ಬಳಗ ಮತ್ತು ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಬೀದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಾಟಕೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ನಾನು 45 ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಥೆ, ಕಾದಂಬರಿ, ಕಾವ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದೇನೆ. ಕಾವ್ಯ ಎಲ್ಲರಿಗೂ ಒಗ್ಗುವ ಸಾಹಿತ್ಯವಲ್ಲ. ಸತತ ಅಧ್ಯಯನ ಮಾಡಿ ಹೊಸ ಹೊಸ ಶಬ್ದಗಳ ಸಂಗ್ರಹ ಮಾಡಿದ ಬಳಿಕ ಕಾವ್ಯ ರಚನೆಗೆ ಪೂರಕ ಶಕ್ತಿ ದೊರೆಯುತ್ತದೆ. ತಮ್ಮದಷ್ಟೇ ಅಲ್ಲ, ಬೇರೆಯವರ ಸಾಹಿತ್ಯ ಓದಬೇಕು. ಇದರಿಂದ ಸಾಹಿತಿಗಳಿಗೆ ಹೊಸ ವಿಚಾರಗಳು ಮೂಡುತ್ತವೆ. ಆಗ ಮನಸ್ಸಿನಿಂದ ತನ್ನಿಂದ ತಾನೆ ಕಾವ್ಯ ಹೊರ ಹೊಮ್ಮುತ್ತದೆ ಎಂದರು. 

ಈ ಹಿಂದೆ ವಿರ್ಮಶಕರು ಮಹಿಳಾ ಸಾಹಿತಿಗಳ ಬಗ್ಗೆ ವೈಯಕ್ತಿಕ ವಿಚಾರಗಳನ್ನು ವಿರ್ಮಶೆಯಲ್ಲಿ ಅನಾವಶ್ಯಕವಾಗಿ ಎಳೆದು ತರುತ್ತಿದ್ದರು. ಆದರೆ, ಈಗ ಅದು ಇಲ್ಲ. ಈಗ ಎಲ್ಲ ಬದಲಾಗಿದೆ. ಮಹಿಳಾ ಸಾಹಿತಿಗಳು ಸಶಕ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಹಿತ್ಯದ ಪ್ರತಿಯೊಂದು ಪ್ರಕಾರಗಳಲ್ಲಿ ಬರೆಯುವ ಹುಮ್ಮಸ್ಸು, ಉತ್ಸಾಹ ಅವರಲ್ಲಿ ಮನೆ ಮಾಡಿದೆ ಎಂದರು.

ಸಾಹಿತಿ ದೇಶಾಂಶ ಹುಡಗಿ ಮಾತನಾಡಿ, ದೇವಿದಾಸ ಚಿಮಕೋಡೆಯವರು ದಲಿತರ ಮಧ್ಯೆ ಬಾಳಿ, ದಲಿತರ ಭಾವನೆಗಳಿಗೆ ಗಾಯನ ಸ್ವರೂಪ ಕೊಟ್ಟು ಹಾಡಿದ ಕಲಾವಿದರು. ಅವರು ಹೊಸ ಹೆಜ್ಜೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇವರ ಹೆಜ್ಜೆಗಳು ಹೀಗೇ ಅಭಿವೃದ್ಧಿ ಪಥದಲ್ಲಿ ಸಾಗಲ್ಲಿ ಎಂದರು.

Advertisement

ಕಾರ್ಯಕ್ರಮಕ್ಕೆ ಮುನ್ನ ಗದಗ ಜಿಲ್ಲೆಯ ಡಾ| ತೋಂಟದ ಸಿದ್ಧಲಿಂಗ ಸ್ವಾಮಿಜೀಯವರು ನಿಧನಕ್ಕೆ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ದೇವದಾಸ ಚಿಮಕೋಡೆಯವರ ಹೊಸ ಹೆಜ್ಜೆ (ಜನ ಜಾಗೃತಿ ಹಾಡುಗಳು) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಬಿ.ಸಂದೀಪ ಕಲಬುರಗಿ, ಆಶಾ ಚಿಮಕೊಡೆ, ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷ ಎಂ.ಪಿ. ಮುದಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಜಾನಪದ ಕಲಾವಿದರ ಬಳಗದ ಅಂಬರೀಶ ಮಲ್ಲೇಶಿ, ಭಾರತಿ ವಸ್ತ್ರದ, ಪಾರ್ವತಿ ಸೋನಾರೆ, ಫರ್ನಾಂಡೀಸ್‌ ಹಿಪ್ಪಳಗಾಂವ, ಶಂಭುಲಿಂಗ ವಾಲೊಡ್ಡಿ, ಎಂ.ಎಸ್‌. ಮನೋಹರ, ಚಂದ್ರಪ್ಪ ಹೆಬ್ಟಾಳಕರ, ಅರುಣ ಪಟೇಲ, ಮಹೇಶ ಗೋರನಾಳಕರ್‌, ರಾಜಕುಮಾರ ಶೇರಿಕಾರ ಗಾದಗಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next