Advertisement

ಕಸಾಪದಿಂದ ಕನ್ನಡ ಕಟ್ಟುವ ಕೆಲಸವಾಗಲಿ

04:19 PM Apr 12, 2022 | Team Udayavani |

ಬಾಗಲಕೋಟೆ: ಕನ್ನಡ ಕಟ್ಟುವ ಕೆಲಸ ನಿಂತ ನೀರಾಗದೇ ನಿರಂತರ ಚಲಿಸುವ ಹಡಗಿನಂತಾಗಬೇಕು. ಸಾಹಿತ್ಯದ ಪರಂಪರೆ ಮುಂದಿನ ಜನಾಂಗಕ್ಕೂ ಜೀವಂತಿಕೆ ಪಡೆದುಕೊಂಡು ಹೋಗಬೇಕು ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.

Advertisement

ನವನಗರದ ಕನ್ನಡ ಸಾಹಿತ್ಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ 5 ವರ್ಷಗಳ ಅವಧಿಯ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ನಿದ್ರಾವಸ್ಥೆಯಲ್ಲಿ ಕಾಲಹರಣ ಮಾಡುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಮುಂಬರುವ ದಿನಗಳಲ್ಲಿ ಕನ್ನಡ ಕಟ್ಟುವ ಕೆಲಸ ಜಿಲ್ಲಾ ಕೇಂದ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಎಲ್ಲರೂ ಸಹಕಾರ ಮನೋಭಾವದಿಂದ ಮುನ್ನುಗ್ಗಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಮಾತನಾಡಿ, ಸಾಹಿತ್ಯ ಪರಂಪರೆ ಈ ನಾಡಿನ ಅವಿಭಾಜ್ಯ ಅಂಗ. ಸಾಹಿತ್ಯ ಪರಂಪರೆಯಲ್ಲಿ ಅನೇಕ ಮಹನಿಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಾಹಿತ್ಯವನ್ನು ಮುಂದಿನ ಜನಾಂಗಕ್ಕೆ ಪ್ರೇರಣೆ ನೀಡುವ ಅಗತ್ಯತೆ ಇದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕನ್ನಡ ನಾಡು-ನುಡಿ ಉಳಿವಿಗಾಗಿ ಪರಿಶ್ರಮದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಾಹಿತ್ಯ ಪರಂಪರೆಯನ್ನು ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಜಾರಿ ತರುತ್ತೇನೆ ಎಂದು ಹೇಳಿದರು.

Advertisement

ನಿಕಟಪೂರ್ವ ಅಧ್ಯಕ್ಷ ವಿನೋದ ಯಡಹಳ್ಳಿ, ಜೆ.ಕೆ. ತಳವಾರ, ಸಾಹಿತಿ ಪ್ರಕಾಶ ಖಾಡೆ, ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಸಿದ್ದರಾಮ ಶಿರೋಳ, ಡಾ| ಚಂದ್ರಶೇಖರ ಕಾಳನ್ನವರ, ಸಿ.ಎಂ. ಜೋಶಿ, ಗೀತಾ ದಾನಶೆಟ್ಟಿ, ಸಂಗಮೇಶ ಬಡಗೇರ ಉಪಸ್ಥಿತರಿದ್ದರು.

ನೂತನ ತಾಲೂಕು ಪದಾಧಿಕಾರಿಗಳು ತಾಲೂಕು ಕಸಾಪ ಅಧ್ಯಕ್ಷರಾಗಿ ಪಾಂಡುರಂಗ ಸಣ್ಣಪ್ಪನವರ ಆಯ್ಕೆಯಾಗಿದ್ದು, ಗೌರವ ಕಾರ್ಯದರ್ಶಿಯಾಗಿ ಸಂಗಮೇಶ ಸಣ್ಣತಂಗಿ, ಶಂಕರ ಹೂಗಾರ, ಗೌರವ ಕೋಶಾಧ್ಯಕ್ಷರಾಗಿ ಬಸಲಿಂಗಯ್ಯ ಮಠಪತಿ ಆಯ್ಕೆಯಾಗಿದ್ದಾರೆ.  ಸಂಘಟನಾ ಕಾರ್ಯದರ್ಶಿಯಾಗಿ ಮುತ್ತು ಬುಳ್ಳಾ, ಬೀರಪ್ಪ ಹಳಮನಿ, ಪ್ರಿಯಾ ಕಟ್ಟಿ, ಸಾಮಾಜಿಕ ಜಾಲತಾಣದ ಕಾರ್ಯದರ್ಶಿಯಾಗಿ ಅಮರೇಶ ಕೊಳ್ಳಿ, ಮಾಧ್ಯಮ ಕಾರ್ಯದರ್ಶಿಯಾಗಿ ಬಸವರಾಜ ಜುಮನಾಳ, ಪ.ಜಾ ಪ್ರತಿನಿಧಿಯಾಗಿ ಬಸವರಾಜ ಲಮಾಣಿ, ಶಣರಪ್ಪ ಬೇವೂರ, ರಾಮಪ್ಪ ದಳವಾಯಿ, ಮಹಿಳಾ ಪ್ರತಿನಿಧಿಯಾಗಿ ಡಾ|ಉಮಾ ಅಕ್ಕಿ, ಡಾ|ಮಹೇಶ್ವರಿ ಕೋಟಿ, ಸಂಘ ಸಂಸ್ಥೆಯ ಪ್ರತಿನಿಧಿಯಾಗಿ ಮಹಾಬಳೇಶ್ವರ ಗುಡಗುಂಟಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪಿ.ಬಿ. ಹಿರೇಮಠ, ನಿಕಟಪೂರ್ವ ಅಧ್ಯಕ್ಷರಾಗಿ ವಿನೋದ ಯಡಹಳ್ಳಿ, ಸದಸ್ಯರಾಗಿ ಎ.ಎಂ. ಮೋಮಿನ್‌, ರಾಜೇಂದ್ರ ಕುಲಕರ್ಣಿ, ಡಾ| ಮಾರುತಿ ಪಾಟೋಳಿ, ಕುಮಾರೇಶ ದೇಸಾಯಿ, ಸಹಜಾನಂದ ಕೆಂಗಲಗುತ್ತಿ, ಸುಶೀಲಾ ಅಣ್ಣಿಗೇರಿ, ವೈ.ಆರ್‌. ಭೂತಾಳಿ, ಎ.ಎಸ್‌. ಕೆಳಗಿನ ಗೌಡರ, ಸಿದ್ದಪ್ಪ ಹಳ್ಳೂರ, ನೀಲಪ್ಪ ಗಾಣಿಗೇರ, ಸುನೀಲ ಪಾಟೀಲ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next