ಚಿಕ್ಕಬಳ್ಳಾಪುರ: ರೆಮ್‌ಡೆಸಿವಿಯರ್ ಸೇರಿಸೋಂಕಿತರಿಗೆ ನೀಡುವ ಇತರೆ ಔಷ ಧಿಗಳನ್ನು ಕನಿಷ್ಠ20 ದಿನಗಳಿಗೆ ಆಗುವಷ್ಟು ಖರೀದಿಸಿ, ದಾಸ್ತಾನುಇಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ,ತಾಲೂಕು ಆರೋಗ್ಯ ಹಾಗೂ ಕೋವಿಡ್ ನೋಡಲ್‌ಅ ಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿ, ಸೋಂಕಿತರಿಗೆ ನೀಡುವ ಅಗತ್ಯ ಔಷಧಿಗಳ ಖರೀದಿಗಾಗಿಯೇ ಪ್ರತಿ ತಾಲೂಕಿಗೆ ಹಣವನ್ನುಬಿಡುಗಡೆ ಮಾಡಲಾಗಿದೆ.
ತಾಲೂಕು ಆರೋಗ್ಯಾಧಿಕಾರಿಗಳು ಮುಂಚೆಯೇ ಖರೀದಿಸಿ ಹೋಂಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಸಕಾಲಕ್ಕೆವಿತರಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ವರದಿ ನೀಡಿ: ಆಯಾ ತಾಲೂಕು ನೋಡಲ್‌ಅ ಧಿಕಾರಿಗಳು ನಿತ್ಯ ತಮ್ಮ ತಾಲೂಕುಗಳಲ್ಲಿ ಆಕ್ಸಿಜನ್‌ಸಿಲಿಂಡರ್‌ಗಳ ಕೊರತೆ ಬಗ್ಗೆ ಗಮನ ಹರಿಸಬೇಕು.
ಆಯಾ ತಾಲೂಕು ನೋಡಲ್, ಆರೋಗ್ಯಅ ಧಿಕಾರಿಗಳು ಪ್ರತಿ ನಿತ್ಯವೂ ಟಾಸ್ಕ್ಫೋರ್ಸ್ ಸಮಿತಿಸದಸ್ಯರೊಂದಿಗೆ ಜೂಮ್ ಮೀಟಿಂಗ್ ಮಾಡಿ, ಈಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.
7 ದಿನ ಕ್ವಾರಂಟೈನ್‌ನಲ್ಲಿ ಇರಲಿ: ಬೆಂಗಳೂರು,ಇತರೆ ಜಿಲ್ಲೆಗಳಿಂದ ಬಂದಿರುವವರಿಗೆ ಕಡ್ಡಾಯವಾಗಿಕೋವಿಡ್ ಪರೀಕ್ಷೆ ಮಾಡಿಸಬೇಕು. ನೆಗೆಟಿವ್‌ಬಂದರೂ ಅವರನ್ನು ಕಡ್ಡಾಯವಾಗಿ ಕನಿಷ್ಠ 7ದಿನವಾದರೂ ಹೋಂಕ್ವಾರಂಟೈನ್‌ನಲ್ಲಿ ಇರುವಂತೆನೋಡಿಕೊಳ್ಳಬೇಕು. ಕೋವಿಡ್ ಕೇರ್ ಕೇಂದ್ರಗಳಲ್ಲಿಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕುಎಂದು ಹೇಳಿದರು.
ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ: ಹೋಬಳಿ ಗೊಂದುಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವತಾಲೂಕುಗಳಿಗೆ ಎಷ್ಟು ವಾಹನ ಅವಶ್ಯಕತೆ ಇದೆಎಂಬುದನ್ನು ತಿಳಿಸಿ ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಅ ಧಿಕಾರಿಗಳಿಗೆ ಸೂಚಿಸಿದರು.ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಸಿ ಎ.ಎನ್.ರಘುನಂದನ್, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಡಾ.ಇಂದಿರಾ ಆರ್.ಕಬಾಡೆ, ಡಾ.ಯಲ್ಲಾ ರಮೇಶ್‌ಬಾಬು, ಆರೋಗ್ಯ ಅಧಿ ಕಾರಿಗಳು ಉಪಸ್ಥಿತರಿದ್ದರು.