Advertisement
ಮಂಗಳೂರು ನಗರವು ಹೃದಯ ವೈಶಾಲ್ಯತೆಯಿಂದ ಕೂಡಿದ ತಾಣವಾಗಿ ಬೆಳೆಯಲಿ. ಇದೇ ಮಂಗಳೂರಿನ ಘೋಷ ವಾಕ್ಯವಾಗಲಿ ಎಂದು ಆಶಿಸಿದರು. ಬಾಲ್ಯದಲ್ಲಿ ನಾನು ಕೇಳಿದ ಕನ್ನಡ ಹಾಡು ದೇವರ ಮಕ್ಕಳು ನಾವೆಲ್ಲ. ಇದನ್ನು ಕೇಳಿದಾಕ್ಷಣ ಒಬ್ಬರು ಮತ್ತೊಬ್ಬರನ್ನು ಪ್ರೀತಿ, ಮಾನವೀಯತೆಯ ದೃಷ್ಟಿಕೋನದಿಂದ ಕಾಣಬೇಕು ಎನ್ನುವ ಸಾರಾಂಶವನ್ನು ಸಾರುತ್ತದೆ. ನಾವೆಲ್ಲರೂ ದೇವರ ಮಕ್ಕಳು ಎನ್ನುವ ದೃಷ್ಟಿಯಿಂದಲೇ ಬಡವ-ಬಲ್ಲಿದ ಎನ್ನುವ ಭೇದ ಭಾವ ಮಾಡದೆ ಎಲ್ಲರ ಜತೆಯಲ್ಲೂ ಪ್ರೀತಿ, ಸಾಮರಸ್ಯದಿಂದ ಬದುಕ ಬೇಕು ಎಂದರು.
ದೇವರ ಮೇಲಿನ ಪ್ರೀತಿ, ಸಹಾನುಭೂತಿ ಮತ್ತು ಸತ್ಯ ಬರೀ ಕ್ರೈಸ್ತಧರ್ಮದಲ್ಲಿ ಮಾತ್ರವಲ್ಲ ಹಿಂದೂ, ಇಸ್ಲಾಂ ಧರ್ಮಗಳೂ ಹೇಳುತ್ತವೆ. ದೇವರ ಪ್ರತಿರೂಪದಂತಿರುವ ನಾವು ಪ್ರೀತಿ, ಸಹಾನುಭೂತಿ ಮತ್ತು ಸತ್ಯದಿಂದ ನಡೆಯಲು ಪ್ರಯತ್ನಿಸ ಬೇಕೆಂದರು. ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ, ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಶಿಕ್ಷಣ ತಜ್ಞ ಡಾ| ಎಂ. ಮೋಹನ್ ಆಳ್ವ, ದ.ಕ.ಜಿ.ಪಂ. ಸಿಇಒ ಸೆಲ್ವಮಣಿ ಆರ್., ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಡಾ| ವೈ. ಭರತ್ ಶೆಟ್ಟಿ, ಸಂಜೀವ ಮಠಂದೂರು, ರಾಜೇಶ್ ನಾೖಕ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮೇಯರ್ ಭಾಸ್ಕರ್ ಕೆ., ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕರಾದ ಬಿ.ಎ. ಮೊದಿನ್ ಬಾವಾ, ಶಕುಂತಳಾ ಶೆಟ್ಟಿ, ಅಮರನಾಥ ಶೆಟ್ಟಿ, ಅಭಯಚಂದ್ರ, ವಿನಯಕುಮಾರ್ ಸೊರಕೆ ಮತ್ತು ಮಾಜಿ ಎಂಎಲ್‌ಸಿ ಕ್ಯಾ| ಗಣೇಶ್ ಕಾರ್ಣಿಕ್, ಬಸ್ತಿ ವಾಮನ ಶೆಣೈ, ರೋಯ್ ಕ್ಯಾಸ್ತೆಲಿನೊ, ಲುವಿ ಜೆ. ಪಿಂಟೋ, ಎನ್. ವಿನಯ್ ಹೆಗ್ಡೆ ಉಪಸ್ಥಿತರಿದ್ದರು. ಮಾಜಿ ಶಾಸಕ ಜೆ. ಆರ್. ಲೋಬೋ ಕಾರ್ಯಕ್ರಮದ ಸಂಚಾಲಕರಾಗಿದ್ದರು. ಎಂ.ಪಿ. ನೊರೊನ್ಹಾ ಮತ್ತು ಜಾನ್ ಡಿ’ಸಿಲ್ವ ನಿರ್ವಹಿಸಿದರು.