ನಂಜನಗೂಡು: ಭವಿಷ್ಯದ ಪ್ರಜೆಗಳಿಗೆ ಅಂಕಕ್ಕಿಂತ ಹೃದಯವಂತಿಕೆ ಮುಖ್ಯವಾಗಲಿ ಎಂದು ಖ್ಯಾತ ಜಾನಪದ ವಿದ್ವಾಂಸ ಡಾ.ಕೆ.ಪಿ.ರಾಜಶೇಖರ ತಿಳಿಸಿದರು. ನಂಜನಗೂಡು ಲಯನ್ಸ್ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಗವಹಿಸಿ ಮಾತನಾಡಿದರು.
ನಾವು ನಮ್ಮ ಭವಿಷ್ಯದ ಪ್ರಜೆಗಳನ್ನು ರೂಪಿಸಲು ನೀಡುತ್ತಿರುವ ಶಿಕ್ಷಣ ಪದ್ಧತಿ ಸರಿಯಿಲ್ಲ ಎಂದ ಅವರು, ಇಂದು ನಾವು ನೀಡುತ್ತಿರುವ ಶಿಕ್ಷಣ ಕೇವಲ ಅಂಕಕ್ಕಾಗಿ ಮಾತ್ರ ಎಂಬಂತಾಗಿದೆ ಎಂದು ವಿಷಾದಿಸಿದರು.
ವಿದ್ಯಾರ್ಥಿಗಳಲ್ಲಿ ಹೃದಯವಂತಿಕೆ ಮೂಡಿಸುವ ಶಿಕ್ಷಣ ಜಾರಿಗೆ ಬಂದರೆ ಭವೀಷ್ಯದ ಭಾರತ ಸದೃಢವಾಗಲು ಸಾಧ್ಯ. ಶಿಕ್ಷರು ಹಾಗೂ ಆಡಳಿತ ಮಂಡಳಿ ಅವರಲ್ಲಿ ಅರ್ಪಣಾ ಮನೋಭಾವ ಕಂಡುಬಂದರೆ ಆ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಕಳಲೆ ಕೇಶವಮೂರ್ತಿ, ಹಲವು ವರ್ಷಗಳಿಂದ ನಂಜನಗೂಡಿನ ಶೈಕ್ಷಣಿಕ ಮಟ್ಟದ ಸುಧಾರಣೆಯಲ್ಲಿ ಪಾಲುದಾರರಾಗಿರುವ ಲಯನ್ಸ್ ಶಿಕ್ಷಣ ಸಂಸ್ಥೆ ಪದವಿ ಪೂರ್ವ ಕಾಲೇಜು ಸ್ಥಾಪಿಸುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಸಿದ್ದೇಗೌಡರು, ಲಯನ್ಸ್ ಎಂದೂ ಶಿಕ್ಷದ ವ್ಯಾಪಾರೀಕರಣ ಮಾಡದೆ ಸೇವಾ ಮನೋಭಾವದಿಂದಲೇ ನೋಡುತ್ತಿದೆ ಎಂದು ಹೇಳಿದರು. ಶಾಲಾ ವಾರ್ಷಿಕೋತ್ಸವದ ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಮಚಂದ್ರಯ್ಯ, ಖಜಾಂಚಿ ಎಂ.ಮಹದೇವ್, ಮುಖ್ಯೋಪಾಧ್ಯಾಯರಾದ ಮಹೇಶ, ತಾಯಮ್ಮ, ಸಿಆರ್‌ಪಿ ಮಹೇಶ ಇದ್ದರು.