Advertisement

ರೈಲ್ವೇ ಬೇಡಿಕೆಗೆ ಸರಕಾರ ಸ್ಪಂದಿಸಲಿ

11:35 PM Dec 01, 2020 | mahesh |

ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರ್ಪಡೆಗೊಳಿಸುವ ಜತೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿನ ರೈಲ್ವೇ ಜಾಲವನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಆಶಯದೊಂದಿಗೆ ಉದಯವಾಣಿ ಯು ಆರಂಭಿಸಿರುವ “ಬಲಗೊಳ್ಳಲಿ ಕರಾವಳಿ ರೈಲು ಜಾಲ’ ಅಭಿಯಾನಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೇ ಸೇವೆಗಳಿಗೆ ಸಂಬಂಧಿಸಿದಂತೆ ಕರಾವಳಿಗರ ಬೇಡಿಕೆಗಳು ಈಡೇರಲು ಈ ಭಾಗದ ಜನಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಅಲ್ಲದೆ ಈ ದಿಸೆಯಲ್ಲಿ ರಾಜ್ಯ ಸರಕಾರವೂ ಜನತೆಯ ಬೇಡಿಕೆಗಳಿಗೆ ಸ್ಪಂದಿಸಿ ರೈಲ್ವೇ ಇಲಾಖೆಗೆ ಸಂಬಂಧಿತ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂಬುದು ಎಲ್ಲರ ಆಗ್ರಹ.

Advertisement

ಸಮಸ್ಯೆ ಬಗೆಹರಿಯಲಿ ಕರಾವಳಿ ಭಾಗದ
ರೈಲ್ವೇ ಬೇಡಿಕೆ ಗಳಿಗೆ ಸಂಬಂಧಿಸಿ ದಂತೆ ಹಲವಾರು ಬಾರಿ ಇಲಾಖೆ ಮತ್ತು ಜನಪ್ರತಿ ನಿಧಿಗಳಿಗೆ ಹಲ ವಾರು ಬಾರಿ ಅಹವಾಲುಗಳನ್ನು ಸಲ್ಲಿಸಿದ್ದೇವೆ. ಅದರೂ ಸಮಸ್ಯೆ ಬಗೆಹರಿದಿಲ್ಲ. ಈಗಲಾದರೂ ಪ್ರತ್ಯೇಕ ಮಂಗಳೂರು ರೈಲ್ವೇ ವಿಭಾಗ ನಿರ್ಮಾಣ ವಾಗಲಿ ಎಂಬುದು ನಮ್ಮ ಹಾರೈಕೆ.
– ಹೊಸಬೆಟ್ಟು ಶ್ರೀರಂಗ ಸುರತ್ಕಲ್‌

ಕಾರ್ಯಗತವಾಗಲಿ
ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇಯೊಂದಿಗೆ ಸೇರಿಸುವ ಪ್ರಸ್ತಾವನೆ ಹಲವಾರು ವರ್ಷದಿಂದ ನನೆಗುದಿಗೆ ಬಿದ್ದಿದೆ. ನಮ್ಮ ರಾಜ್ಯದ ಸಂಸದರೇ ರೈಲ್ವೇ ಸಚಿವರಾಗಿದ್ದರು. ಅದರೂ ಇದು ಇಷ್ಟು ವರ್ಷಗಳಿಂದ ವಿಳಂಬವಾಗಿದೆ ಎಂದರೆ ನಾಚಿಕೆಪಡುವಂತಹ ವಿಷಯ. ಇದನ್ನು ತತ್‌ಕ್ಷಣ ಸರಿಪಡಿಸಿ ಜನರ ಭಾವನೆ ಹಾಗೂ ಕ್ಷೇತ್ರದ ಅಭಿ ವೃದ್ಧಿಗೆ ಪೂರಕವಾಗಿ ಜನಪ್ರತಿನಿಧಿಗಳು ಸ್ಪಂದಿಸಬೇಕಾಗಿದೆ.
– ಸುಂದರ್‌ ಜಿ .ಕೆ. ಮಂಗಳೂರು

ಉದ್ಯೋಗ ಸೃಷ್ಟಿ
ಕರಾವಳಿ ಭಾಗದ ಯುವ ಜನತೆಗೆ ರೈಲ್ವೇ ಇಲಾಖೆ ಯಲ್ಲಿ ಹೊಸ ಉದ್ಯೋಗಾವ ಕಾಶಗಳು ಸೃಷ್ಟಿಯಾದಾಗ ಆರ್ಥಿಕತೆ ಸುಧಾರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾವಳಿ ಪ್ರದೇಶವು ಇನ್ನು ಹೆಚ್ಚಿನ ಮನ್ನಣೆಯನ್ನು ಪಡೆಯಲು ಸಹಕಾರಿಯಾಗುತ್ತದೆ. ಹಾಗಾಗಿ ಇದಕ್ಕೆ ಪೂರಕವಾಗಿ ಈ ಭಾಗದ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಕರಾವಳಿ ಭಾಗದ ರೈಲ್ವೇಯನ್ನು ನೈಋತ್ಯ ರೈಲ್ವೇಗೆ ಸೇರಿಸಲೇಬೇಕು.
– ರಾಜಶೇಖರ ಉಡುಪಿ

ಉದ್ಯೋಗ ಸೃಷ್ಟಿ
ಕರಾವಳಿ ಭಾಗದ ಯುವ ಜನತೆಗೆ ರೈಲ್ವೇ ಇಲಾಖೆ ಯಲ್ಲಿ ಹೊಸ ಉದ್ಯೋಗಾವ ಕಾಶಗಳು ಸೃಷ್ಟಿಯಾದಾಗ ಆರ್ಥಿಕತೆ ಸುಧಾರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾವಳಿ ಪ್ರದೇಶವು ಇನ್ನು ಹೆಚ್ಚಿನ ಮನ್ನಣೆಯನ್ನು ಪಡೆಯಲು ಸಹಕಾರಿಯಾಗುತ್ತದೆ. ಹಾಗಾಗಿ ಇದಕ್ಕೆ ಪೂರಕವಾಗಿ ಈ ಭಾಗದ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಕರಾವಳಿ ಭಾಗದ ರೈಲ್ವೇಯನ್ನು ನೈಋತ್ಯ ರೈಲ್ವೇಗೆ ಸೇರಿಸಲೇಬೇಕು.
– ರಾಜಶೇಖರ ಉಡುಪಿ

Advertisement

ಮನವರಿಕೆ ಮಾಡಬೇಕು
ಕರಾವಳಿ ಭಾಗದಿಂದ ಇಲಾಖೆಗೆ ಬಹಳಷ್ಟು ಆದಾಯ ಇದ್ದರೂ ರೈಲ್ವೇ ಇಲಾಖೆ ಮಾತ್ರ ಅಭಿವೃದ್ಧಿಯ ವಿಷಯದಲ್ಲಿ ಕರಾವಳಿಯನ್ನು ಅವಗಣಿಸಿದೆ. ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗವನ್ನು ರಚಿಸಬೇಕು ಈ ನಿಟ್ಟಿನಲ್ಲಿ ಸಂಸದರು, ಸಚಿವರು, ಶಾಸಕರು ರೈಲ್ವೇ ಸಚಿವರಿಗೆ ಮನವರಿಕೆ ಮಾಡಿ ಆದಷ್ಟು ಬೇಗ ಅನುಷ್ಠಾನಕ್ಕೆ ಬರುವಂತೆ ಒತ್ತಡ ಹೇರಬೇಕು.
– ಸಂದೀಪ್‌ ಪೂಜಾರಿ ಕುರಾಡಿ ಉಡುಪಿ

ಒಂದೇ ವಲಯಕ್ಕೆ ಸೇರಲಿ
ಚಂದ್ರಗಿರಿ ನದಿಯ ಉತ್ತರದ ರೈಲು ನಿಲ್ದಾಣಗ ಳಾದ ಕಾಸರ ಗೋಡು, ಕುಂಬಳೆ, ಉಪ್ಪಳ, ಮಂಜೇಶ್ವರಗಳನ್ನು ಮಂಗಳೂ ರಿನ ಜತೆ ನೈಋತ್ಯ ರೈಲ್ವೇ ವಲಯದಲ್ಲಿ ವಿಲೀನಗೊಳಿಸಿ ದರೆ ಗಡಿನಾಡಿನ ಜನರ ನೋವು ಸ್ವಲ್ಪವಾದರೂ ಶಮನವಾಗಲು ಸಾಧ್ಯ. ತುಳುನಾಡಿನ ರೈಲು ನಿಲ್ದಾಣ ಗಳು ಒಂದೇ ವಲಯಕ್ಕೆ ಸೇರಿ ಅಭಿವೃದ್ಧಿ ಸಾಧ್ಯವಾಗಬಹುದು.
– ಡಾ| ನಾರಾಯಣ ಪ್ರದೀಪ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next