Advertisement
2008ರಲ್ಲಿ ಅಂದಿನ ಸರಕಾರ ಮೊದಲ ಬಾರಿಗೆ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಳೀಯ ಹಾಲು ಉತ್ಪಾದಕ ಸಂಘಗಳಿಗೆ ಹೈನುಗಾರರು ಪೂರೈಸುವ ಪ್ರತೀ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. 5 ವರ್ಷಗಳ ಬಳಿಕ ಈ ಮೊತ್ತವನ್ನು 4 ರೂ.ಗೆ ಹೆಚ್ಚಿಸಲಾಗಿದ್ದು, 2016ರಿಂದ 5 ರೂ.ಗೆ ಹೆಚ್ಚಿಸಲಾಯಿತು. ಸರಕಾರದ ಈ ಯೋಜನೆಯಿಂದ ಹೈನುಗಾರರಿಗೆ ಒಂದಿಷ್ಟು ಪ್ರಯೋಜನ ಲಭಿಸಿತಲ್ಲದೆ, ಹೈನುಗಾರಿಕೆಯನ್ನು ಉಪವೃತ್ತಿಯನ್ನಾಗಿಸಿಕೊಳ್ಳಲು ರೈತರು ಆಸಕ್ತಿ ತೋರಿದರು. ಇದರ ಪರಿಣಾಮ ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಮುಂಚೂಣಿಯ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಲು ಸಾಧ್ಯವಾಯಿತು. ಆದರೆ ಕಳೆದ ಕೆಲವು ವರ್ಷಗಳಿಂದ ಸರಕಾರದ ನಿರ್ಲಕ್ಷ್ಯ, ದನಕರುಗಳನ್ನು ವಿವಿಧ ಕಾಯಿಲೆಗಳು ಬಾಧಿಸತೊಡಗಿರುವುದು, ಪಶು ಆಹಾರ, ಮೇವು ಧಾರಣೆಯಲ್ಲಿನ ಹೆಚ್ಚಳ ಮತ್ತು ಅಭಾವ, ಬರ ಮತ್ತಿತರ ಕಾರಣಗಳಿಂದಾಗಿ ರಾಜ್ಯದ ಒಟ್ಟಾರೆ ಹಾಲಿನ ಉತ್ಪಾದನೆ ಪ್ರಮಾಣ ಭಾರೀ ಇಳಿಕೆ ಕಾಣುವಂತಾಗಿದೆ. ಮಳೆಗಾಲದ ಅವಧಿಯನ್ನು ಹೊರತುಪಡಿಸಿದಂತೆ ಉಳಿದ ಅವಧಿಯಲ್ಲಂತೂ ಹಾಲು ಉತ್ಪಾದನೆ ಮತ್ತಷ್ಟು ಕುಸಿಯುತ್ತಲೇ ಸಾಗಿದೆ. ಇದರಿಂದಾಗಿ ರೈತರು ಭಾರೀ ಸಂಖ್ಯೆಯಲ್ಲಿ ಹೈನುಗಾರಿಕೆಯಿಂದ ವಿಮುಖರಾಗಿದ್ದಾರೆ.
Advertisement
Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್ಕ್ಷಣ ಸ್ಪಂದಿಸಲಿ
01:53 AM Dec 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.