Advertisement
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ತಾಲೂಕಿನಲ್ಲಿ 4 ಜಲಾಶಯಗಳಿದ್ದು, ಅಪಾರ ವನಸಂಪತ್ತಿರುವ ತಾಲೂಕನ್ನು ಹಿಂದುಳಿದ ಪಟ್ಟಿ ಹೆಸರು ತೆಗೆಯಬೇಕು. ತಾಲೂಕಿನಲ್ಲಿ ಕಾಡಿಂಚಿನ ಗ್ರಾಮಗಳು ಮತ್ತು ಆದಿವಾಸಿಗರೇ ಬಹುಸಂಖ್ಯೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ತಾಲೂಕಿನಲ್ಲಿ 3ನೇ ಗ್ರಾಮವಾಸ್ತವ್ಯ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.
Related Articles
Advertisement
ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ ಮಾತನಾಡಿ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಷ್ಟೇ ಅಲ್ಲದೆ ಬುಡಕಟ್ಟು ಉತ್ಸವ ಆಚರಣೆಗೆ ಶಾಸಕ ಅನಿಲ್ ಚಿಕ್ಕಮಾದು ಪರಿಶ್ರಮ ಕಾರಣವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಶಾಸಕರೊಡಗೂಡಿ ಸಹಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ದೊಡ್ಡಮಣಿ, ಜಿಪಂ ಸದಸ್ಯ ವೆಂಕಟಸ್ವಾಮಿ, ತಾಪ ಸದಸ್ಯೆ ಸರೋಜಿನಿ ಬಲರಾಮ, ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಮಧು, ರಾಜು, ಆದಿವಾಸಿ ಮುಖಂಡ ಕಾವೇರ, ಎಂ.ಡಿ.ಮಂಚಯ್ಯ, ಪ್ರದೀಪ್, ಬಸಪ್ಪ, ನಾಗರಾಜು, ತಹಶೀಲ್ದಾರ್ ಆರ್.ಮಂಜುನಾಥ್, ಇಒ ರಾಮಲಿಂಗಯ್ಯ, ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ, ಬಿಇಒ ರೇವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಚನ್ನಪ್ಪ ಮೊದಲಾದವರಿದ್ದರು.
ಬುಡಕಟ್ಟು ಉತ್ಸವ ಅದ್ಧೂರಿ: ತಾಲೂಕಿನ ಆದಿವಾಸಿಗರ ಬುಡಕಟ್ಟು ಉತ್ಸವ ಮತ್ತು ಗ್ರಾಮವಾಸ್ತವ್ಯ ಎರಡು ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ನಡೆದವು. ಆದಿವಾಸಿಗರು ಆರಂಭದಲ್ಲಿ ಕಾರಾಪುರ ವೃತ್ತದಿಂದ ಕಂಸಾಳೆ, ಕೋಲಾಟ, ನೃತ್ಯ, ಕರಡಿ ಕುಣಿತ, ಡೊಳ್ಳುಕುಣಿತ, ಎರವ ಕುಣಿತ ಸೇರಿದಂತೆ ಇನ್ನಿತರ ಆದಿವಾಸಿ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ನೃತ್ಯ ಮತ್ತು ಕಲಾತಂಡಗಳ ಮೆರವಣಿಗೆಗೆ ಶಾಸಕ ಅನಿಲ್ ಡೊಳ್ಳು ಬಾರಿಸಿ ಚಾಲನೆ ನೀಡಿದರು.
ಆದಿವಾಸಿಗರ ಕಾರ್ಯಕ್ರಮ ಕುರಿತು ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಬುಡಕಟ್ಟು ಉತ್ಸವ ಪ್ರತಿ ಸಾಲಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ತಾಲೂಕಿನ ಎನ್.ಬೆಳತ್ತೂರು ಗ್ರಾಮದಲ್ಲಿ ಆಚರಿಸಿ, ಆದಿವಾಸಿಗರ ಸಾಂಪ್ರದಾಯಿಕ ಕಲೆ ಸಂಸ್ಕೃತಿ ಗ್ರಾಮೀಣ ಪ್ರದೇಶಗಳ ಜನತೆ ತಿಳಿಸುವುದರ ಜೊತೆಯಲ್ಲಿ ಕಲೆ ಸಂಸ್ಕೃತಿ ಉಳಿಸುವ ಉದ್ದೇಶವಿದಾಗಿದೆ ಎಂದು, ಆದಿವಾಸಿಗರ ಬುಡಕಟ್ಟು ಉತ್ಸವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.