Advertisement

ಸರ್ಕಾರದ ಅವ್ಯವಹಾರ ತನಿಖೆಯಾಗಲಿ

09:37 AM Aug 01, 2020 | Suhan S |

ಮದ್ದೂರು/ಮಂಡ್ಯ: ಕೋವಿಡ್‌ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫ‌ಲವಾಗಿದೆ. ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಆಗಿರುವ ಅವ್ಯವಹಾರ ಸಂಬಂಧ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಯಾಗಲಿ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಪ್ರಥಮ ಬಾರಿಗೆ ಕೇರಳ ರಾಜ್ಯದಲ್ಲಿ ಜ. 30ರಂದು ಕೋವಿಡ್ ಕಾಣಿಸಿಕೊಂಡಿತ್ತು. ಮಾ. 9ರಂದು ಕರ್ನಾಟಕದಲ್ಲಿ ಕಾಣಿಸಿಕೊಂಡಿತು. ಪ್ರಧಾನಿ ಮೋದಿಯವರು ಮಾ.24ರಂದು ಲಾಕ್‌ಡೌನ್‌ ಮಾಡಿದಾಗ ದೇಶದಲ್ಲಿ 564, ಕರ್ನಾಟಕದಲ್ಲಿ ಒಂದೇ ಒಂದು ಕೋವಿಡ್‌ ಪ್ರಕರಣ ದಾಖಲಾಗಿತ್ತು. ಆದರೆ, ಇಂದು ದೇಶದಲ್ಲಿ 16.39 ಲಕ್ಷ ಸೋಂಕಿತರಿದ್ದು, 35,786 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ 1,18,632 ಸೋಂಕಿತರಿದ್ದು, 2230 ಮಂದಿ ಸಾವನ್ನಪ್ಪಿದ್ದಾರೆ. 4000 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳುವ ರಾಜ್ಯ ಸರ್ಕಾರ, ಕೋವಿಡ್‌ ತಡೆಗೆ ವಿಫ‌ಲವಾಗಿದೆ. ಇದಕ್ಕೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಕೋವಿಡ್‌ ಕೇಂದ್ರಗಳಲ್ಲಿ ಸೌಲಭ್ಯವಿಲ್ಲ: ಇಂದಿಗೂ ಕೋವಿಡ್‌ ಕೇಂದ್ರಗಳಲ್ಲಿ ಹಾಸಿಗೆ ಸರಿಯಿಲ್ಲ, ಶೌಚಾಲಯ ಚಿಕಿತ್ಸೆ ಸರಿಯಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಕಸ ಸುರಿಯುವಂತೆ ಕೋವಿಡ್‌ನಿಂದ ಮೃತಪಟ್ಟವರನ್ನು ಎಸೆಯಲಾಗುತ್ತಿದೆ. ಒಂದೂವರೆ ತಿಂಗಳು ಲಾಕ್‌ಡೌನ್‌ ಆಗಿದ್ದಾಗ ಏಕೆ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಹರಿಹಾಯ್ದರು. ಲಾಕ್‌ಡೌನ್‌ ವೇಳೆಯಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು, ಚಾಲಕರು, ಸವಿತಾ ಸಮಾಜ, ಮಡಿವಾಳ ಸೇರಿದಂತೆ ಇತರೆ ಹಿಂದುಳಿದ ವರ್ಗದವರಿಗೆ 10 ಸಾವಿರ ರೂ. ನೀಡುವಂತೆ ಸರ್ಕಾರವನ್ನು ಆಗ್ರಹಿಸಿದೆ. ಆದರೆ, ನೀಡಲು ತಡಮಾಡಿದಾಗ ವಿಪಕ್ಷದವರು ಗಲಾಟೆ ಮಾಡಲಾಗಿ ಕೇವಲ 5 ಸಾವಿರ ರೂ. ನೀಡಲು ಒಪ್ಪಿದರು. ಇಂದಿಗೂ ಸಮರ್ಪಕವಾಗಿ ಹಂಚಿಕೆ ಆಗಿಲ್ಲ. ನಾನೇನಾದರೂ ಮುಖ್ಯ ಮಂತ್ರಿಯಾಗಿದ್ದರೆ ತಲಾ 10 ಸಾವಿರ ರೂ. ಕೊಡುತ್ತಿದ್ದೆ. ರೈತರು ಬೆಳೆದ ಹೂವು, ತರಕಾರಿ ಲಾಕ್‌ಡೌನ್‌ ವೇಳೆ ನಷ್ಟವಾಯಿತು. ಅವರಿಗೆ ಏನೂ ಕೊಟ್ಟಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಹಣ ಇತ್ತು. ಅದನ್ನು ಮಾತ್ರ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವರಾದ ಎನ್‌.ಚಲುವರಾಯ ಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ, ಮಾಜಿ ಶಾಸಕ ಎಚ್‌.ಬಿ.ರಾಮು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್‌, ಗಣಿಗ ರವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next