Advertisement

ಸಂಶೋಧನೆಗಳು ಭವಿಷ್ಯದ ಚಿಂತನೆಗೆ ದಾರಿದೀಪವಾಗಲಿ

09:26 PM Jun 15, 2019 | Lakshmi GovindaRaj |

ಮೈಸೂರು: ಸಂಶೋಧನೆಗಳು ಪೂರ್ವಗ್ರಹ ಪೀಡತವಾಗಿರದೇ ಭವಿಷ್ಯದ ಚಿಂತನೆಗಳಿಗೆ ದಾರಿದೀಪವಾಗಬೇಕು ಎಂದು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್‌.ಶೇಖರ್‌ ಹೇಳಿದರು.

Advertisement

ನಗರದ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಭಾಷಾ ಪ್ರಯೋಗಾಲಯದಲ್ಲಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಂಶೋಧನ ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಪ್ರಬಂಧ ಮಂಡನೆ-ಸಂವಾದದಲ್ಲಿ ಮಾತನಾಡಿದರು.

ಜ್ಞಾನದ ವಿಸ್ತಾರ ಹಾಗೂ ಶೋಧಕ್ಕೆ ಭಿನ್ನಾಭಿಪ್ರಾಯಗಳು ಅಗತ್ಯವಾಗಿವೆ. ಆರೋಗ್ಯಕರ ಸಮಾಜ ಕಟ್ಟಲು ಇದು ಸಹಕಾರಿ ಎಂದರು. ಸಾಂಸ್ಕೃತಿಕ ಮೌಲಿಕ ಕಥನಗಳಲ್ಲೂ ಭಿನ್ನಾಭಿಪ್ರಾಯಗಳಿವೆ. ಸಂಶೋಧನೆಗಳು ಜೀವ ಸಂಕುಲಕ್ಕೆ ಪೂರಕವಾಗಿರಬೇಕು.

ಹೊಸತನ ಮತ್ತು ಸೃಜನಶೀಲತೆ ಕಟ್ಟಿಕೊಡುವ ಶೋಧಗಳು ಅನಿವಾರ್ಯ. ಭವಿಷ್ಯದ ಚಿಂತನೆಗಳಿಗೆ ದಾರಿದೀಪವಾಗಬೇಕು ಎಂದು ಹೇಳಿದರು. ಇತ್ತೀಚಿನ ಕಾವ್ಯದ ಒಲವುಗಳು ಕುರಿತು ಪ್ರಬಂಧ ಮಂಡನೆ ಮಾಡಿದ ಎಸ್‌.ಕೆ.ಮಂಜುನಾಥ್‌, ಇಂದಿನ ಕವಿತೆಗಳು ಮತ್ತೆ ಮತ್ತೆ ಗಾಯಗೊಳ್ಳುತ್ತಿವೆ ಅವುಗಳಿಗೆ ಮುಲಾಮು ಹಚ್ಚುವ ಕೆಲಸಗಳಾಗಬೇಕು.

ಇಂದಿನ ಕವಿಗಳು ಪ್ರಶಸ್ತಿ ಅವಸರಕ್ಕೆ ಬಿದ್ದು, ಬರವಣಿಗೆ ಸವಾಲಾಗಿ ನಿಂತಿವೆ. ಕಾವ್ಯದ ಹೊಸ ಸಾಧ್ಯತೆ ಕಟ್ಟುವ ಕೆಲಸವಾಗಬೇಕೆಂದರು. ಸಂಶೋಧಕರಾದ ಮೀನಾಕ್ಷಿ ಸ್ತ್ರೀಶಿಕ್ಷಣ ಕುರಿತು ಪ್ರಬಂಧ ಮಂಡಿಸಿದರು.

Advertisement

ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್‌.ಎಂ.ತಳವಾರ, ಡಾ.ಬಿ.ಕೆ.ರವೀಂದ್ರನಾಥ್‌, ಡಾ.ವಿಜಯಕುಮಾರಿ, ಸಂಶೋಧಕರಾದ ಜೆ.ರಾಜೇಂದ್ರ, ಬ್ಯಾಡಮೂಡ್ಲು ಚಿನ್ನಸ್ವಾಮಿ, ಮಹದೇವಮೂರ್ತಿ, ಎಂ.ಶ್ವೇತಾ, ಅಶೋಕ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next