Advertisement
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದಿವೆ. ಈವರೆಗೆ ಭಾರತ ಅನೇಕ ಸಾಧನೆ ಮಾಡಿದೆ. ಮಂಗಳ ಗ್ರಹಕ್ಕೂ ಕಾಲಿಟ್ಟು ಬಂದಿದೆ. ಆದರೆ ಎಲ್ಲರ ಬದುಕಿಗೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಆಹಾರ ಧಾನ್ಯಗಳನ್ನು ಉತ್ಪಾಸುವ ತಂತ್ರಜ್ಞಾನ ಕಂಡು ಹಿಡಿಯುವುದು ಸಾಧ್ಯವಾಗಿಲ್ಲ.
ರೈತ ಇದ್ದಾನೆ. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯನ್ನು ಬಿಡಬೇಕಾಗಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಆಹಾರ ಧಾನ್ಯಗಳನ್ನು ಕೃಷಿ ಹೊರತುಪಡಿಸಿ ಬೇರೆ ಯಾವ ಮೂಲಗಳಿಂದಲೂ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಇತರೆ ಎಲ್ಲಾ ವಸ್ತುಗಳಿಗೂ ಉತ್ಪಾದನೆ ಮಾಡಿದವರೇ ನಿ ರ್ದಿಷ್ಟ ದರ ನಿಗದಿ ಮಾಡುತ್ತಾರೆ. ಆದರೆ ಕೃಷಿ ಉತ್ಪನ್ನಗಳನ್ನು ಮಾತ್ರ ಬೀದಿಯಲ್ಲಿಟ್ಟು ಹರಾಜು ಹಾಕುವ ಸ್ಥಿತಿ ಶೋಚನೀಯವಾಗಿದೆ. ರೈತ ಬೆಳೆದ ಬೆಳೆಗೆ ಬೆಲೆಯನ್ನು ರೈತ ನಿಗದಿ ಮಾಡದೇ ಮಧ್ಯವರ್ತಿಗಳು ನಿಗಮಾಡುವುದರಿಂದ ರೈತ ಬಡವನಾಗುತ್ತಿದ್ದಾನೆ.
Related Articles
Advertisement
ಪ್ರಮುಖ ಬೇಡಿಕೆಗಳು;ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ ಖರೀದಿ ಗ್ಯಾರಂಟಿ ನೀಡಿ ಘೋಷಿತ ಬೆಲೆಗಿಂತ ಕಡಿಮೆಗೆ ಖರೀದಿಯಾಗದಂತೆ ನೋಡಿಕೊಳ್ಳಬೇಕು. ಪ್ರತಿ ವರ್ಷ ಬೆಲೆ ಘೋಷಣೆಯು ಹಣದುಬ್ಬರದ ದರಕ್ಕೆ ಅನುಗುಣವಾಗಿರಬೇಕು. ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿ ಮಾಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.