Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಅವರು ಈ ಸೂಚನೆ ನೀಡಿದರು. ಪಹಣಿಗಳ ತಿದ್ದುಪಡಿ ಕಾಲಕಾಲಕ್ಕೆ ನಡೆಯಬೇಕು. ಪಹಣಿಯಲ್ಲಿ ದಾಖಲಾದ ಹಿಡುವಳಿಯ ಹಕ್ಕುದಾರಿಕೆ ವಿಸ್ತೀರ್ಣ ಹಾಗೂ ವಾಸ್ತವದಲ್ಲಿ ಇರುವ ಹಿಡುವಳಿ ಕುರಿತಂತೆ ಪರಿಶೀಲನೆ ನಡೆಸಿ ದಾಖಲಿಸಬೇಕು.
Related Articles
Advertisement
ಇ- ಆಡಳಿತ: ಎಲ್ಲ ಇಲಾಖೆಗಳು ಇ ಆಡಳಿತವನ್ನು ಆರಂಭಿಸಬೇಕು. ಆನ್‌ಲೈನ್ ಮೂಲಕವೇ ಅರ್ಜಿ ವಿಲೇವಾರಿ ಕೈಗೊಳ್ಳಬೇಕು. ಸರ್ಕಾರ ಈ ಕುರಿತಂತೆ ಬಹಳ ಆಸಕ್ತಿ ಹೊಂದಿದೆ. ಮೊದಲ ಹಂತದಲ್ಲಿ ಕನಿಷ್ಠ ಜಿಲ್ಲಾಧಿಕಾರಿಗಳ ಕಚೇರಿ, ಜಿಪಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಅರಣ್ಯ ಇಲಾಖಾ ಕಚೇರಿ ಇ – ಆಡಳಿತವನ್ನು ಆರಂಭಿಸಬೇಕು ಎಂದು ಸೂಚಿಸಿದರು. ಭೂಮಿ ದರಗಳನ್ನು ಪರಿಷ್ಕರಿಸುವಾಗ ಮಾರುಕಟ್ಟೆಯ ದರಕ್ಕೆ ಹತ್ತಿರವಿರಲಿ. ಮಾರುಕಟ್ಟೆ ದರಕ್ಕೂ ನೋಂದಣಿಯ ದರಕ್ಕೂ ಬಹಳ ವ್ಯತ್ಯಾಸವಿದೆ. ಈ ವ್ಯತ್ಯಾಸದ ಅಂತರವನ್ನು ಕಡಿಮೆ ಮಾಡಿ ಭೂಮಿಯ ದರವನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ರೈತರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಿರಿ. ಇದರಿಂದ ರೈತರಿಗೂ ಅನುಕೂಲವಾಗಲಿದೆ. ಭೂಸ್ವಾಧೀನಗಳ ಸಂದರ್ಭದಲ್ಲಿ ರೈತರಿಂದ ಹೆಚ್ಚುವರಿ ದರ ನಿಗ ಮಾಡುವಂತೆ ಬೇಡಿಕೆಗಳು ಬರುತ್ತಿವೆ. ಸರ್ಕಾರಿ ನೋಂದಣಿ ದರಕ್ಕೂ ವಾಸ್ತವವಾಗಿ ಖಾಸಗಿಯಾಗಿ ಮಾರಾಟ ದರಕ್ಕೂ ಬಹಳಷ್ಟು ಅಂತವಿರುವುದನ್ನು ತಗ್ಗಿಸಬೇಕು.
ಈ ಕುರಿತಂತೆ ಉಪ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರಗಳು ಚರ್ಚಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಡಾ| ಎನ್.ತಿಪ್ಪೇಸ್ವಾಮಿ, ವಿವಿಧ ತಹಶೀಲ್ದಾರಗಳು, ಇತರ ಅಧಿಕಾರಿಗಳು ಇದ್ದರು.