Advertisement

Kushtagi; ಸಿಎಂ, ಸಚಿವರು ಒಂದು ದಿನವಾದರೂ ರೈತರಿಗೆ ಸಾಂತ್ವನ ಹೇಳಲಿ: ಈಶ್ವರಪ್ಪ

05:57 PM Nov 07, 2023 | Team Udayavani |

ಕುಷ್ಟಗಿ (ದೋಟಿಹಾಳ): ನಾನು ಹುಟ್ಟಿನಿಂದಲೂ ಕೂಡ ಇಂತಹ ಬರಗಾಲ ಎಂದು ಕಂಡಿಲ್ಲ. ರೈತರಿಗೆ ರಾಜ್ಯ ಸರ್ಕಾರದ ಮಂತ್ರಿಗಳು ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ. ಒಬ್ಬ ಶಾಸಕರು ಸಹಿತ ರೈತರ ಹೊಲಗಳಿಗೆ ಹೋಗಿ ಬಂದಿಲ್ಲ. ಕೇವಲ ಅಧಿಕಾರಿಗಳು ನೀಡಿದ ವರದಿಯನ್ನು ಕೇಂದ್ರಕ್ಕೆ ಕಳಿಸಿದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಶಾಸಕರು ಒಂದು ದಿನವಾದರೂ ಕೆಲಸ ಬಿಟ್ಟು ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದರು.

Advertisement

ಬರ ಅಧ್ಯಯನಕ್ಕೆ ಆಗಮಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿ ಹೋದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿದ್ದು ಪರಿಹಾರ ಕೊಡಬೇಕು ನಮ್ಮ ಕೇಂದ್ರದ ನಾಯಕರಿಗೆ ಮನವಿ ಮಾಡಿದೆ. ಅವರು ರಾಜ್ಯ ಸರ್ಕಾರದಿಂದ ಇನ್ನೂ ವರದಿ ಬಂದಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ ಇದುವರೆಗೆ ಒಂದು ರೂಪಾಯಿ ಬರಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಹಿಂದಿನ ವರ್ಷದ್ದವು 18 ಕೋಟಿ, ಈಗ 11 ಕೋಟಿ ಹಣ ಇದೆ.  ಒಬ್ಬ ರೈತರಿಗೂ ದುಡ್ಡು ಬಂದಿಲ್ಲ ಹಾಗೂ ಸರ್ವೇ ಸರಿಯಾಗಿ ಆಗಿಲ್ಲ. ಯಾವ ಬೆಳೆ ಎಷ್ಟು ನಷ್ಟ ಎಂದು ಸರಿಯಾದ ಮಾಹಿತಿ ಇಲ್ಲ ಎಂದರು.

ಉಸ್ತುವಾರಿಗಳು ಕಛೇರಿಯಲ್ಲಿ ಕುಳಿತುಕೊಂಡು ಕಂದಾಯ ಇಲಾಖೆ ವರದಿ ತರಿಸಿಕೊಂಡು ವರದಿ ಸಲಿಸಿದಾರೆ. ರಾಜ್ಯ ಸರ್ಕಾರ ಮೊದಲ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಬೇಕು ನಂತರ ಕೇಂದ್ರದಲ್ಲಿ ನೆರವು ಕೇಳಬೇಕು. ಜನರು ಗುಳೆ ಹೋಗುತ್ತಿದ್ದು, ನರೇಗಾ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಜೆಜೆಎಂ ಕರ್ನಾಟಕದಲ್ಲಿ ಟಾರ್ಗೆಟ್ ಮುಗಿದರು ಇನ್ನೂ ನೀರು ಸರಬರಾಜು ಇಲ್ಲ. ರಾಜ್ಯ ಸರ್ಕಾರ ಬಂದ ಮೇಲೆ ಇದುವರೆಗೆ ಯಾವುದೇ ಅನುದಾನ ಶಾಸಕರಿ ಕೊಟ್ಟಿಲ್ಲ. ರಾಜ್ಯದ ಜನರ ಋಣ ತೀರಿಸಲು ಪಕ್ಷದ ಶಾಸಕರು ರೈತರ ಕೆಲಸದ ಕಡೆ ಗಮನಕ್ಕೆ ಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next