Advertisement

ಕ್ಲಾಕ್‌ ಟವರ್‌ ಶೀಘ್ರದಲ್ಲೇ ನಿರ್ಮಾಣವಾಗಲಿ

11:25 PM Jun 15, 2019 | Team Udayavani |

ಕ್ಲಾಕ್‌ಟವರ್‌ ಎಂಬುದು ಹಿಂದಿನ ದಿನಗಳ ಪರಿಕಲ್ಪನೆ. ಮಂಗಳೂರಿನ ಪುರಾತನ ಗುರುತು.

Advertisement

ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನ ರಸ್ತೆಗಳು, ವೃತ್ತಗಳು ಅಭಿವೃದ್ಧಿಯಾಗುತ್ತಿವೆ. ಆದರೆ ಇಲ್ಲಿ ವೃತ್ತದ ನಡುವೆ ಯಾವುದೇ ಗುರುತು ಕಟ್ಟಡಗಳಿಲ್ಲದಿದ್ದರೆ ಸುಂದರವಾಗಿರುತ್ತದೆ. ಅಂದರೆ ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳು, ವೃತ್ತಗಳಲ್ಲಿ ಹಾದು ಹೋಗುವಾಗ ಚಾಲಕರಿಗೆ ಸರಿಯಾದ ನೋಟ ಸಿಗಬೇಕಾದರೆ ಯಾವುದೇ ತಡೆ ಇಲ್ಲದೇ ಇರುವುದು ಉತ್ತಮ. ನಗರದ ಸೌಂದರ್ಯ ವೃದ್ಧಿ ಹಾಗೂ ಪುರಾತನ ಪರಂಪರೆ ಉಳಿಸಲು ವೃತ್ತಗಳಲ್ಲಿ ಕೆಲವೊಂದು ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಲ್ಲಿ ಕ್ಲಾಕ್‌ ಟವರ್‌ ಕೂಡ ಒಂದು.

ಆದರೆ ಮಂಗಳೂರಿನಲ್ಲಿ ಕ್ಲಾಕ್‌ಟವರ್‌ ನಿರ್ಮಾಣ ಕಾರ್ಯ ಪ್ರಾರಂಭವಾಗಿ ಒಂದೂವರೆ ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಆ ವೃತ್ತ ಪ್ರದೇಶದಲ್ಲಿ ಸಾಗುವ ವಾಹನಗಳ ಚಾಲನೆಗೆ ಸಮಸ್ಯೆಯಾಗುತ್ತಿದೆ. ಕ್ಲಾಕ್‌ಟವರ್‌ ನಿರ್ಮಿಸಬೇಕು ಯೋಜನೆ ರೂಪುಗೊಂಡು ಒಂದೂವರೆ ವರ್ಷವಾಗಿದೆ. ಕಾಮಗಾರಿ ಅರ್ಧದಲ್ಲೇ ಇದೆ. ವಾಹನ ಸವಾರರು, ಪಾದಚಾರಿಗಳ ಹಿತದೃಷ್ಟಿಯಿಂದ ಕ್ಲಾಕ್‌ಟವರ್‌ನ ಕೆಲಸವನ್ನು ಕೂಡಲೇ ಸಂಪೂರ್ಣಗೊಳಿಸುವತ್ತ ಸಂಬಂಧಪಟ್ಟವರು ಗಮನಹರಿಸಬೇಕಿದೆ.

-ವಿಶ್ವನಾಥ್‌ ಕೋಟೆಕಾರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next