Advertisement

ಚಿಟ್ಟಾಣಿ ಪರಂಪರೆ ಮುಂದುವರಿಯಲಿ

03:15 PM Oct 29, 2017 | Team Udayavani |

ಉಡುಪಿ, ಅ. 28: ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಯಕ್ಷಗಾನಕ್ಕೆ ಜೀವಮಾನವಿಡೀ
ಸೇವೆ ಸಲ್ಲಿಸಿರುವುದು ಮಾತ್ರವಲ್ಲ, ಹಲವಾರು ಮೇರು ಕಲಾವಿದರನ್ನು ಬೆಳೆಸಿ ಅವರ ಪರಂಪರೆ ಮುಂದುವರಿಯುವಂತೆ ಮಾಡಿದ್ದಾರೆ.

Advertisement

ಯಕ್ಷಗಾನ ಅಳಿಯುವುದಿಲ್ಲ ಎಂಬ ಮಾತನ್ನು ಇಂತಹ ಕಲಾವಿದರು ನಿಜಗೊಳಿಸಲಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು. ಅವರು ಶನಿವಾರ ರಾಜಾಂಗಣದಲ್ಲಿ ಜರಗಿದ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಚಿಟ್ಟಾಣಿ ಶೈಲಿಯಂತೆಯೇ ಇತರ ಕಲಾವಿದರೂ ಪ್ರದರ್ಶನ ನೀಡಿದಾಗ ಚಿಟ್ಟಾಣಿ ಅಮರರಾಗುತ್ತಿದ್ದಾರೆ. ಹೃದಯದಲ್ಲಿ ಸದಾ ಕುಣಿಯುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಶ್ರೀಕೃಷ್ಣನಿಗೆ ಕಾರ್ತಿಕ ಮಾಸದವರೆಗೆ ಉತ್ಸವ ಇಲ್ಲ. ಆದರೆ ರಾಜಾಂಗಣದಲ್ಲಿ ಜರಗಿದ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹದಿಂದಾಗಿ ಯಕ್ಷಗಾನ ಕಲೆಯ ಸಪೊ¤àತ್ಸವ ನಡೆದಂತಾಗಿದೆ ಎಂದರು. ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಪ್ರಶಸ್ತಿ ಪ್ರದಾನ  ಹಿರಿಯ ಸ್ತ್ರೀ ವೇಷಧಾರಿ ಶಿರಳಗಿ
ಭಾಸ್ಕರ ಜೋಶಿ ಅವರಿಗೆ “ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ’ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಕೃಷ್ಣ ಕುಮಾರ್‌ ರಾವ್‌ ಮಟ್ಟು ಅವರಿಗೆ “ಟಿ.ವಿ. ರಾವ್‌ ಪ್ರಶಸ್ತಿ’ಯನ್ನು ಪೇಜಾವರ ಶ್ರೀಗಳು ಪ್ರದಾನ ಮಾಡಿದರು. 

ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಣೇಶ್‌ ರಾವ್‌, ಡಾ| ಟಿ.ಎಸ್‌. ರಾವ್‌, ಉದ್ಯಮಿ ಗೋಪಾಲ ಬಂಗೇರ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಗಂಗಾಧರ ರಾವ್‌ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next