Advertisement

“ಮಕ್ಕಳು ಹೆತ್ತವರಿಗೂ ಸಮಾಜಕ್ಕೂ ಹೆಸರು ತರಲಿ’ : ಐಕಳ ಹರೀಶ್‌ ಶೆಟ್ಟಿ

03:04 PM Jan 19, 2021 | Team Udayavani |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಕುಂದಾಪುರ ಬಂಟರ ಸಂಘದ ಸಭಾಭವನದಲ್ಲಿ ನಡೆದ
ಕಾರ್ಯಕ್ರಮದಲ್ಲಿ ಸಹಾಯಧನವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ವಿತರಿಸಿದರು.

Advertisement

ಇದೇ ಸಂದರ್ಭ ಐಕಳ ಹರೀಶ್‌ ಶೆಟ್ಟಿ ಅವರು ಮಾತನಾಡಿ, ನಮ್ಮ ದಾನಿಗಳು ನೀಡಿದ ಸಹಕಾರ ನಮಗೆ ನಮ್ಮ ಸಮಾಜದ ನೊಂದವರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಯಿತು. ನಾವು ಸಮಾಜದಲ್ಲಿ ಒಳ್ಳೆ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ. ನಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಹೆತ್ತವರಿಗೂ ಸಮಾಜಕ್ಕೂ ಹೆಸರು ತರಬೇಕು. ಸಮಾಜ ಕಲ್ಯಾಣ ಯೋಜನೆಯ ಹೊಸ ಮನೆ ನಿರ್ಮಾಣ ಯೋಜನೆಯ ಅಡಿಯಲ್ಲಿ ಶೇ. 80ರಷ್ಟು ಮನೆಗಳು ಸಂಪೂರ್ಣ ಗೊಂಡಿದ್ದು,
ಇನ್ನುಳಿದ ಮನೆಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಕಷ್ಟದಲ್ಲಿರು ವವರು ಚಿಂತಿಸುವ ಅಗತ್ಯವಿಲ್ಲ.

ನಿಮೆಲ್ಲರ ಕಷ್ಟದಲ್ಲಿ ನಿಮ್ಮ ಜತೆ ಒಕ್ಕೂಟ ಇದೆ ಎಂದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ  ಶೆಟ್ಟಿ ಮಾತನಾಡಿ, ಒಕ್ಕೂಟ ಈ ವರೆಗೆ 6 ಕೋ. ರೂ.ಗಳ ಸಹಾಯಧನ ವಿತರಣೆ ಮಾಡಿದೆ. ಮಕ್ಕಳು ಒಳ್ಳೆಯ ಗುಣ ನಡತೆಯಿಂದ ಉತ್ತಮ ಅಂಕ ಪಡೆದು ಕೀರ್ತಿ ತನ್ನಿ, ಒಕ್ಕೂಟದಿಂದ ನಿಮಗೆ ಸಹಕಾರ ನೀಡುತ್ತೇವೆ. ಮನೆ ಇಲ್ಲದವರಿಗೆ ಮನೆ ಕೊಡುವ ಕೆಲಸ ಒಕ್ಕೂಟದಿಂದ ನಡೆಯುತ್ತಿದೆ ಎಂದರು. ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಅವರು ಒಕ್ಕೂಟದ ಕಾರ್ಯಕ್ರಮಗಳ ವಿವರ ನೀಡಿ ಪ್ರಸ್ತಾವಿಸಿದರು.

ಇದನ್ನೂ ಓದಿ:ಭಾಯಂದರ್‌ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ : 15ನೇ ವಾರ್ಷಿಕ ಮಹಾಪೂಜೆ ಸಂಪನ್ನ

ಕುಂದಾಪುರ ಬಂಟರ ಸಂಘದ ಸಂಚಾಲಕ ಸುಧಾಕರ ಶೆಟ್ಟಿ ಅವರ್ಸೆ ಯುವ ಬಂಟರ ಸಂಘದ ಅಧ್ಯಕ್ಷ ಸುನಿಲ್‌ ಶೆಟ್ಟಿ ಅವರ
ಉಪಸ್ಥಿತಿಯಲ್ಲಿ ಸಹಾಯಧನವನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜದ ನೂರಾರು ಮಂದಿಗೆ ಆರ್ಥಿಕ ನೆರವು ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next