Advertisement

ಶಬರಿಮಲೆ ವಿಚಾರವಾಗಿ ಕೇಂದ್ರ ಸುಗ್ರೀವಾಜ್ಞೆ ಜಾರಿಗೊಳಿಸಲಿ

06:05 AM Oct 08, 2018 | Team Udayavani |

ದಾವಣಗೆರೆ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಂಪ್ರದಾಯ, ಧಾರ್ಮಿಕ-ವಿಧಿ ವಿಧಾನಗಳ ಆಚರಣೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರಬೇಕೆಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 1,400 ವರ್ಷಗಳ ಹಿಂದಿನ ಸಂಪ್ರದಾಯ, ಧಾರ್ಮಿಕ ವಿಧಿ-ವಿಧಾನಕ್ಕೆ ಧಕ್ಕೆ ಆಗಿದೆ. ಹಾಗಾಗಿ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಸಂಸತ್‌ನಲ್ಲಿ ಚರ್ಚಿಸಿ, ಅಯ್ಯಪ್ಪಸ್ವಾಮಿ ದೇವಸ್ಥಾನದ ಸಂಪ್ರದಾಯ, ಧಾರ್ಮಿಕ-ವಿಧಿ ವಿಧಾನಗಳ ಆಚರಣೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸುಗೀÅವಾಜ್ಞೆ ತರಬೇಕು ಎಂದರು.

ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಒಪ್ಪತಕ್ಕದ್ದಲ್ಲ. ಸುಪ್ರೀಂಕೋರ್ಟ್‌ ತನ್ನ ಆದೇಶವನ್ನು ಪುನರ್‌ ಪರಿಶೀಲನೆ ನಡೆಸಬೇಕು ಎಂಬುದು ಅಸಂಖ್ಯಾತರ ಅಭಿಪ್ರಾಯವಾಗಿದೆ. ಬಾಬಾ ಬುಡನ್‌ಗಿರಿ ದತ್ತ ಪೀಠಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನಂತೆ ಧರ್ಮಾಚಾರಿಗಳು, ಪಂಡಿತರೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ತೀರ್ಪು ನೀಡಬಹುದಿತ್ತು. ಧಾರ್ಮಿಕ ವಿಧಿ-ವಿಧಾನ ವಿಚಾರದಲ್ಲಿ ಸಮಾನತೆಯನ್ನು ಬಯಸುವ ನ್ಯಾಯಾಲಯಕ್ಕೆ ಎಲ್ಲಾ ರೀತಿಯ ಅಧಿಕಾರ ಇರುವಾಗ, ಸಮಾನ ನಾಗರಿಕ ಹಕ್ಕು ಕಾನೂನು ಜಾರಿಗೆ ತರುವುದಿಲ್ಲವೇಕೆ. ಒಂದೇ ಸಂವಿಧಾನದಲ್ಲಿ ಹಿಂದೂ, ಇತರ ಧರ್ಮಗಳ ವಿಚಾರ ಬೇರೆ, ಬೇರೆ ಏಕೆ ಎಂದು ಪ್ರಶ್ನಿಸಿದರು.

ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಸಮಾನತೆ ನೀಡಲಾಗಿದೆ. ಅನೇಕ ಕಡೆ ಮಹಿಳಾ ಅರ್ಚಕರಿದ್ದಾರೆ. ಪೀಠಾಧಿಪತಿಗಳು ಸಹ ಇದ್ದಾರೆ. ಹಿಂದೂ ಧರ್ಮದಂತೆ ಜಗತ್ತಿನ ಯಾವ ಧರ್ಮವೂ ಮಹಿಳೆಯರಿಗೆ ಸಮಾನತೆ, ಸ್ಥಾನಮಾನ ನೀಡಿದ ಉದಾಹರಣೆಯೇ ಇಲ್ಲ. ಕೇರಳದಲ್ಲೇ ಮೂರು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವೇ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next