Advertisement

ನಗದು ರಹಿತ ವ್ಯವಸ್ಥೆ ಜಾರಿಯಾಗಲಿ

11:18 AM Dec 26, 2017 | Team Udayavani |

ಹುಮನಾಬಾದ: ದೇಶದಲ್ಲಿ ಡಿಜಿಟಲ್‌ ಯುಗ ಪ್ರಾರಂಭಗೊಂಡಿದ್ದು, ಪ್ರತಿಯೊಂದಕ್ಕೂ ಆನ್‌ಲೈನ್‌ನಲ್ಲೆ ವ್ಯವಹಾರ ನಡೆದಿದ್ದರು ಕೂಡ ಪೊಲೀಸ್‌ ಇಲಾಖೆ ಮಾತ್ರ ಡಿಜಿಟಲ್‌ ವ್ಯವಹಾರಕ್ಕೆ ಹೊಂದಿಕೊಂಡಿಲ್ಲ. ಈ ಮಧ್ಯೆ ಪ್ರಧಾನಿ ಮೋದಿ ಅವರು ಹಳೇ 500 ಮತ್ತು 1000 ರೂ. ನೋಟುಗಳನ್ನು ರದ್ದು ಮಾಡಿ, ನಗದು ರಹಿತ ಡಿಜಿಟಲ್‌ ವ್ಯವಹಾರಕ್ಕೆ ಕರೆ ನೀಡಿ, ಪ್ರತಿಯೊಬ್ಬರು ನಗದು ರಹಿತ ವ್ಯವಹಾರಕ್ಕೆ ಮುಂದಾಗುವಂತೆ ತಿಳಿಸಿದರು.

Advertisement

ಆದರೆ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಇಂದಿಗೂ ನಗದು ರೂಪದಲ್ಲಿಯೇ ಹಣ ಪಾವತಿಸುವ ವ್ಯವಸ್ಥೆ ಇದೆ. ಮೂರು ದಿನಗಳಿಂದ ಬ್ಯಾಂಕ್‌ಗಳು ಮುಚ್ಚಿದ್ದು, ಎಟಿಎಂಗಳಲ್ಲಿ ಹಣವಿಲ್ಲದ ಕಾರಣ ಸಂಚಾರ ನಿಯಮ ಉಲ್ಲಂಘಿಸಿದ ಅನೇಕ ಜನರು ಡಿಜಿಟಲ್‌ ವ್ಯವಹಾರಕ್ಕೆ ಪೊಲೀಸ್‌ ಇಲಾಖೆ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನೆ ಕೇಳತೊಡಗಿದ್ದಾರೆ. 

ಜೇಬಿನಲ್ಲಿ ಹಣ ಇಲ್ಲದ ಅನೇಕರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಬೇರೆಯವರ ಕಡೆಯಿಂದ ಹಣಪಡೆದು ಪೊಲೀಸರಿಗೆ ದಂಡ ಪಾವತಿಸಬೇಕಾಗಿದೆ. ಕೆಲ ವರ್ಷಗಳಿಂದ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಬ್ಲಾಕ್‌ಬೇರಿ ಮೂಬೈಲ್‌ ಮೂಲಕ ಕ್ಷಣದಲ್ಲಿ ದಂಡದ ಪಾವತಿ ನೀಡುತ್ತಿದ್ದರು. ಆದರೆ ಸುಮಾರು ಒಂದು ವರ್ಷಗಳಿಂದ ಬ್ಲಾಕ್‌ಬೇರಿ ಮೂಬೈಲ್‌ ಬಳಕೆ ನಿಂತಿದ್ದು, ಸಂಚಾರ ಠಾಣೆಗಳ ಸಿಬ್ಬಂದಿ ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಹೆಸರು, ವಾಹನ ಸಂಖ್ಯೆ, ದಂಡದ ಮೊತ್ತ ಇತರೆ ಮಾಹಿತಿ ಬರೆಯಲು ಸುಮಾರು ಐದು ನಿಮಿಷಕ್ಕೂ ಹೆಚ್ಚಿನ ಸಮಯ ಕಳೆಯುತ್ತಿದೆ. ಕಾರಣ ಅನೇಕ ವಾಹನ ಸವಾರರು ಸಮಯ ವ್ಯರ್ಥ ಮಾಡಿಕೊಂಡು ನಿಲ್ಲುವ ಸ್ಥಿತಿ ನಿರ್ಮಾಣಗೊಂಡಿದೆ.

ಸಧ್ಯ ಪೊಲೀಸ್‌ ಇಲಾಖೆ ಪ್ರತಿನಿತ್ಯ ಸಾವಿರಾರೂ ರೂ. ದಂಡದ ಹಣ ಸಂಗ್ರಹಿಸುತ್ತಿದ್ದು, ಆಧುನಿಕ ಯುಗದೊಂದಿಗೆ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಕಾಳಜಿ ತೊರಬೇಕು ಎಂಬುದು ಅನೇಕರ ಅಭಿಪ್ರಾಯವಾಗಿದೆ. ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ ಕೂಡಲೆ ಮೊಬೈಲ್‌ ಮೂಲಕ ಹಣ ಪಾವತಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬಹುತೇಕ ಸಣ್ಣ ಅಂಗಡಿಗಳು ಕೂಡ ಇಂದಿನ ದಿನಗಳಲ್ಲಿ ಪೇಟಿಎಂ ಬಾರ್‌ಕೋಡ್‌ ಬಳಸಿ ನಗದು ರಹಿತ ವ್ಯವಹಾರ ಮಾಡುತ್ತಿವೆ. ಅಲ್ಲದೇ ಡೆಬಿಟ್‌ ಮತ್ತು ಕ್ರೆಡಿಟ್‌ಗಳ ಮೂಲಕವೂ ವ್ಯವಹಾರ ನಡೆಸುತ್ತಿದ್ದಾರೆ. ಜೇಬಿನಲ್ಲಿ ಹಣವಿಲ್ಲ ಎಂಬ ಸಬೂಬು ನೀಡುವ ಜನರಿಗೆ ಪೊಲೀಸ್‌ ಇಲಾಖೆಯಲ್ಲಿ ಕೂಡ ಈ ಡಿಜಿಟಲ್‌ ವ್ಯವಸ್ಥೆಗಳಿಗೆ ಮುಂದಾಗಬೇಕಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ ಅವರನ್ನು ಸಂಪರ್ಕಿಸಿದಾಗ, ಆನ್‌ಲೈಲ್‌ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಅಲ್ಲಿ ಪಿಡಿಎ ಸಾಧನಗಳನ್ನು ಬಳಸಲಾಗುತ್ತಿದೆ. ಈ ಭಾಗದ ಜಿಲ್ಲೆಗಳಲ್ಲಿ ಆ ವ್ಯವಸ್ಥೆಗಳು ಇನ್ನೂ ಬಂದಿಲ್ಲ. ಈ ಹಿಂದೆ ಬ್ಲಾಕ್‌ಬೇರಿ ಬಳಸಲಾಗುತ್ತಿತ್ತು. ಆದರೆ ಸರಿಯಾಗಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ ಎಂದು ವಿವರಿಸಿದರು

Advertisement

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next