Advertisement

ಕನ್ನಡ ಕಟ್ಟುವ ಕಾರ್ಯ ನಿರಂತರವಾಗಿರಲಿ

05:40 PM Jan 06, 2022 | Shwetha M |

ದೇವರಹಿಪ್ಪರಗಿ: ಪ್ರಾಂಜಲ ಮನಸ್ಸಿನಿಂದ ಕನ್ನಡ ಕಟ್ಟುವ ಕಾಯಕ ನಿರಂತರವಾಗಿ ನಡೆಯುವುದರ ಜೊತೆಗೆ ಪ್ರತಿಯೊಬ್ಬರನ್ನು ಗೌರವಿಸುವ ಕಾರ್ಯ ಮುಂದುವರಿಯಲಿ. ಇದಕ್ಕೆ ನಾಡಿನ ಸಂತರ ಸೂಫಿಗಳ ಆಶೀರ್ವಾದ ಸದಾ ಇರುತ್ತದೆ ಎಂದು ಸದಯ್ಯನ ಮಠದ ವೀರಗಂಗಾಧರ ಶಿವಾಚಾರ್ಯರು ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನ ಗೌರವ ಸ್ವೀಕರಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದೆ. ಸಾಕಷ್ಟು ಕವಿ, ಸಾಹಿತಿಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೂ ಬೆಳೆಯುವ ಹಂತದಲ್ಲಿನ ಸಾಹಿತಿಗಳಿಗೆ ಪೂರಕವಾಗಿ ಸಹಕಾರ ನೀಡಿ ಅವರ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಡಲು ಕಸಾಪ ಮುಂದಾಗಬೇಕು. ಆದಷ್ಟು ಬೇಗನೆ ನಿಮ್ಮ ಅಧಿಕಾರವಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಲಿ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಸಿಂಪೀರ್‌ ವಾಲೀಕಾರ ಮಾತನಾಡಿ, ಜಿಲ್ಲೆಯ ಶ್ರೀಗಳ ನೇತೃತ್ವದಲ್ಲಿ ಕನ್ನಡ ಕಟ್ಟುವ ಕಾಯಕ ನಿರಂತರವಾಗಿ ನಡೆಸುತ್ತೇನೆ. ಉತ್ಕೃಷ್ಟ ಕಾರ್ಯಕ್ರಮಗಳ ಮೂಲಕ ಜನಮನದಲ್ಲಿ ಅಚ್ಚಳಿಯದೇ ಉಳಿಯುವ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದರು.

ಕಸಾಪ ಗೌರವ ಸದಸ್ಯರಾದ ಸಂಗನಗೌಡ ಬಿರಾದಾರ (ಮುಳಸಾವಳಗಿ), ವಿಶ್ರಾಂತ ಶಿಕ್ಷಕರಾದ ಎಸ್‌.ಜಿ. ತಾವರಖೇಡ, ನೌಕರರ ಸಂಘದ ಜಿ.ಪಿ. ಬಿರಾದಾರ ಮಾತನಾಡಿದರು.

ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಪಿ.ಸಿ. ತಳಕೇರಿ, ಆರ್‌.ಎಂ. ಕುಲಕರ್ಣಿ, ವಕೀಲ ಮಹಮ್ಮದಗೌಸ ಹವಾಲ್ದಾರ, ಶಿಕ್ಷಕ ಕಬೂಲ್‌ ಕೊಕಟನೂರ, ಶಿವಾನಂದ ಕೋಟೀನ, ಅಮರನಾಥ ಹಿರೇಮಠ, ಶಿವಾನಂದ ಕುಂಬಾರ, ಬಿ.ಆರ್‌. ಕಟೆ, ಗೊಲ್ಲಾಳಪ್ಪ ಬಿರಾದಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next