Advertisement
ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವೇ ಇದೆ. ಹೀಗಾಗಿ ಮಹದಾಯಿ ವಿವಾದದ ಚೆಂಡು ಇದೀಗ ಬಿಜೆಪಿ ಅಂಗಳಕ್ಕೆ ಬಿದ್ದಿದೆ. ಭೀಕರ ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ದೊರಕಿಸುವ ಕೆಲಸ ಆಗಬೇಕಿದ್ದು, ಈ ಎರಡೂ ವಿಷಯಗಳ ಕುರಿತು ಅಮಿತ್ ಶಾ ರಾಜ್ಯದ ರೈತರಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
Related Articles
Advertisement
ಚುನಾವಣೆ ಬಹಿಷ್ಕರಿಸಿ: ಮಹದಾಯಿ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ, ಕಾಂಗ್ರೆಸ್ ವಿಫಲವಾಗಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಗಳ 11 ತಾಲೂಕಿನ ರೈತರು ಚುನಾವಣೆ ಬಹಿಷ್ಕರಿಸಬೇಕು. ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಈವರೆಗೂ ಜನಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಹೀಗಾಗಿ ಜನರು ತಕ್ಕ ಪಾಠ ಕಲಿಸಬೇಕು ಎಂದರು.
ಅನ್ಸಾರಿ ಕ್ಷಮೆ ಯಾಚಿಸಲಿ: ಉಪರಾಷ್ಟ್ರಪತಿ ಹುದ್ದೆಯಿಂದ ಇತ್ತೀಚೆಗೆ ನಿವೃತ್ತಿ ಹೊಂದಿದ ಹಮೀದ್ ಅನ್ಸಾರಿಯವರು ದೇಶದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ದೇಶದ ಕ್ಷಮೆ ಯಾಚಿಸಬೇಕು. ಎರಡು ಅವಧಿ ಉನ್ನತ ಹುದ್ದೆ ಅಧಿಕಾರ ಅನುಭವಿಸಿದವರು ದೇಶದ ಬಗ್ಗೆ ಕಾಳಜಿ, ಗೌರವ ಇದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲ್ಲ.
ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹಿಂದುಗಳೇ ಸುರಕ್ಷಿತವಾಗಿಲ್ಲ. ಕೇರಳದಲ್ಲಿ ಹತ್ತು ವರ್ಷದಲ್ಲಿ ಅಂದಾಜು 800, ಕರ್ನಾಟಕದಲ್ಲಿ ಎರಡು ವರ್ಷದಲ್ಲಿ 21 ಹಿಂದೂಗಳ ಹತ್ಯೆಯಾಗಿರುವುದೇ ಸಾಕ್ಷಿ. ಈ ಅಂಶಗಳನ್ನು ಅನ್ಸಾರಿ ಅವರು ಗಮನಿಸಿಲ್ಲವೇ ಎಂದು ಪ್ರಶ್ನಿಸಿದರು.
ಜಮ್ಮು-ಕಾಶ್ಮೀರದಲ್ಲಿ ಏಳು ಲಕ್ಷ ಹಿಂದೂಗಳನ್ನು ಹೊರಹಾಕಿದರು. ಮುಸ್ಲಿಂ ರಾಷ್ಟ್ರಗಳಲ್ಲಿ ಸಿಗದ ಅಧಿಕಾರ, ಅವಕಾಶಗಳನ್ನು ಭಾರತದಲ್ಲಿ ಮುಸ್ಲಿಮರಿಗೆ ನೀಡಲಾಗಿದೆ. ಆದರೂ ಇಂತಹ ಮೂರ್ಖತನದ ಹೇಳಿಕೆ ನೀಡುವುದು ಸರಿಯಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಈಶ್ವರಗೌಡ ಪಾಟೀಲ, ಮಂಜುನಾಥ ಕವಳಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.