Advertisement
ಜಿಲ್ಲಾ ಕುರುಬರ ಸಂಘದಿಂದ ಜಿಲ್ಲಾ ಪಂಚಾಯತ್ ಮುಂಭಾಗ ನಿರ್ಮಿಸಿರುವ ಕನಕ ಸಮುದಾಯ ಭವನವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
Related Articles
Advertisement
ಉದ್ಘಾಟನೆಗೆ ಮುನ್ನವೇ 8 ಮದುವೆ ಬುಕ್ ಆಗಿವೆ ಎಂದು ಕೇಳಿದೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ವಿಶಾಲ ಜಾಗವಿದೆ. ಹಾಗಾಗಿ ಇಲ್ಲಿಗೆ ಬಹಳ ಬೇಡಿಕೆಯೂ ಬರಲಿದೆ ಎಂದರು. ಕುರುಬ ಸಮುದಾಯದ ಬಡವರಿಗೆ ಆದಷ್ಟು ಕಡಿಮೆ ಬಾಡಿಗೆ ಪಡೆದು ಭವನ ಕೊಡಬೇಕು. ಇಲ್ಲದಿದ್ದರೆ ವ್ಯಾಪಾರ ಆಗಿಬಿಡುತ್ತದೆ. ಸರ್ಕಾರ ಅನುದಾನ ನೀಡಿರುವುದು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು. ಆ ಉದ್ದೇಶ ಈಡೇರಿದರೆ ಸಾರ್ಥಕತೆ ಹೆಚ್ಚಾಗುತ್ತದೆ ಎಂದರು.
ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಏರುತ್ತಿದ್ದಂತೆ ಜಯಕಾರದ ಘೋಷಣೆ ಮಾರ್ಧನಿಸಿತು. ಕಾರ್ಯಕ್ರಮದುದ್ದಕ್ಕೂ ಸಂಘ, ಸಂಸ್ಥೆ ಹಾಗೂ ಅಭಿಮಾನಿಗಳಿಂದ ಹಾರ ತುರಾಯಿ ಹಾಕಿ ಅಭಿನಂದಿಸಿದರು. ಹೆಲಿಕಾಪ್ಟರ್ ಸಮಯಕ್ಕೆ ಸರಿಯಾಗಿ ಟೇಕಾಫ್ ಆಗಬೇಕಿದ್ದ ಕಾರಣ ಸ್ವತಃ ಸಿದ್ದರಾಮಯ್ಯ ನಾನೇ ಭಾಷಣ ಆರಂಭಿಸುವುದಾಗಿ ಮೈಕ್ ಮುಂದೆ ನಿಂತರು. ಆದರೂ ಹಾರ ಹಾಕುವವರ ಸಂಖ್ಯೆ ಹೆಚ್ಚಾದಾಗ ಒಂದು ಹಂತದಲ್ಲಿ ತುಸು ಕೋಪದಿಂದ ಅಭಿಮಾನಿಗಳನ್ನು ಗದರಿಸಿ ಸುಮ್ಮನಿರಿಸಿದ ಸಿದ್ದರಾಮಯ್ಯ ಮಾತು ಆರಂಭಿಸಿದರು. ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಭಾಗವಹಿಸಿದ್ದರು.
ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿಎಂಎಲ್ಸಿ ಗಾಯತ್ರಿ ಶಾಂತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಣ್ಯ ಸಚಿವ ಆರ್.ಶಂಕರ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕರಾದ ಸಿ.ಟಿ.ರವಿ, ಟಿ.ಡಿ. ರಾಜೇಗೌಡ, ಎಂ.ಪಿ. ಕುಮಾರಸ್ವಾಮಿ, ಎಸ್.ಎಲ್. ಧರ್ಮೇಗೌಡ, ಎಸ್.ಎಲ್. ಭೋಜೇಗೌಡ ಮಾತನಾಡಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಭಾ ಸದಸ್ಯ ಜೈರಾಂ ರಮೇಶ್, ಎಂ ಎಲ್ ಸಿ ಪ್ರಾಣೇಶ್, ಮಾಜಿವರಾದ ಡಾ| ಮೋಟಮ್ಮ, ಬಿ.ಬಿ. ನಿಂಗಯ್ಯ, ಮಾಜಿ ಶಾಸಕರಾದ ಶ್ರೀನಿವಾಸ್, ಟಿ.ವಿ. ಶಿವಶಂಕರಪ್ಪ, ಕುರುಬರ ಸಂಘದ ಕಾರ್ಯದರ್ಶಿ ಶಾಂತೇಗೌಡ, ಕೆ.ಎಂ. ಕೆಂಪರಾಜು, ರೇಖಾಹುಲಿಯಪ್ಪಗೌಡ, ಬಿ.ಎಲ್.ಶಂಕರ್, ಕಾಂಗ್ರೆಸ್ ಅಧ್ಯಕ್ಷ ಡಾ| ಡಿ.ಎಲ್.ವಿಜಯ್‌ಕುಮಾರ್ ಮತ್ತಿತರರು ಹಾಜರಿದ್ದರು.