Advertisement

ಗಿರಿ ಜನರಿಗೆ ಅಧಿಕಾರಿಗಳು ಸಹಕಾರ ನೀಡಲಿ

03:31 PM Apr 23, 2021 | Team Udayavani |

ಪಿರಿಯಾಪಟ್ಟಣ: ಕಾಡಂಚಿನ ಗ್ರಾಮಸ್ಥರಿಗೆಮತ್ತು ಗಿರಿಜನರಿಗೆ ಸೆಸ್ಕ್ ಮೂಲ ಸೌಕರ್ಯಒದಗಿಸುವ ಸಂದರ್ಭದಲ್ಲಿ ಅಧಿಕಾರಿಗಳು ಇವರಿಗೆ ಸಹಕಾರ ನೀಡಬೇಕು ಎಂದುಶಾಸಕ ಕೆ.ಮಹದೇವ್‌ ತಿಳಿಸಿದರು.ತಾಲೂಕಿನ ಹಬಟೂರು, ಗಾಂಧಿ ನಗರ,ಕೊಪ್ಪ ಹಾಗೂ ಹೊನ್ನಾಪುರ ಗ್ರಾಮಗಳಲ್ಲಿಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆನೆರವೇರಿಸಿ ಮಾತನಾಡಿದರು.

Advertisement

ಕಾಡಂಚಿನಲ್ಲಿವಾಸ ಮಾಡುತ್ತಿರುವ ಗಿರಿಜನರು, ರೈತರಿಗೆಸೆಸ್ಕ್ನವರು ವಿದ್ಯುತ್‌ ಸಂಪರ್ಕ ಪಡೆಯಲುಮತ್ತಿತರರ ಕೆಲಸಗಳಿಗೆ ತೊಂದರೆನೀಡುತ್ತಿದ್ದಾರೆ ಎಂಬ ದೂರುಗಳುಕೇಳಿಬರುತ್ತಿದೆ. ಮೂಲ ಸೌಕರ್ಯಕಲ್ಪಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಿದೆ.

ಇದಕ್ಕೆ ಎಲ್ಲಾ ಇಲಾಖೆಗಳುಸಹಕಾರ ನೀಡಬೇಕು ಎಂದು ಹೇಳಿದರು.ಸೆಸ್ಕ್ ಅಧಿಕಾರಿಗಳು ಗಿರಿಜನರಿಗೆ,ಕಾಡಂಚಿನ ಪ್ರದೇಶದ ರೈತರಿಗೆಅನುಕೂಲವಾಗುವ ರೀತಿಯಲ್ಲಿ ಸಹಕಾರನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆನೀಡಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಲ್ಲಿ ಕೋಟ್ಯಂತರ ರೂ.ದುರುಪಯೋಗವನ್ನು ಹಿಂದೆ ಅಧಿಕಾರನಡೆಸಿದ ಪರಿಣಾಮ ಇಂದು ಯೋಜನೆಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಇದುಮಹತ್ವದ ಯೋಜನೆಯಾಗಿದ್ದುಸದುಪಯೋಗ ಪಡಿಸಿಕೊಂಡರೆ ಗ್ರಾಮಗಳಅಭಿವೃದ್ಧಿ ಸಾಧ್ಯವಾಗಲಿದೆ ಎಂದುಹೇಳಿದರು.

ರೈತರು ನಮ್ಮ ಹೊಲ ನಮ್ಮ ರಸ್ತೆಯೋಜನೆ, ಕೃಷಿ ಹೊಂಡ, ಇಂಗು ಗುಂಡಿನಿರ್ಮಾಣ ಮುಂತಾದ ತಮ್ಮ ಸ್ವಂತಜಮೀನುಗಳ ಅಭಿವೃದ್ಧಿಗೆ ಬಳಸಿಕೊಂಡುಗ್ರಾಮ ಮತ್ತು ಸ್ವಂತ ಅಭಿವೃದ್ಧಿಯನ್ನುಮಾಡಬಹುದಾಗಿದೆ. ಎಲ್ಲಾ ಕೆಲಸಗಳಿಗೂಶಾಸಕರ ಅನುದಾನವನ್ನೇ ಕಾಯದೆಅಧಿಕಾರಿಗಳು ಮತ್ತು ಜನಪತ್ರಿನಿಧಿಗಳುಯೋಜನೆಯ ಸದುಪಯೋಗಕ್ಕೆಮುಂದಾಗಬೇಕು ಎಂದು ತಿಳಿಸಿದರು.

Advertisement

ಬಂಧಿಸುವ ಭರವಸೆ: ತಾಲೂಕಿನಲ್ಲಿಜಾನುವಾರುಗಳ ಕಳ್ಳತನ ಮತ್ತು ಅವುಗಳನ್ನುಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾಗಿದ್ದು,ಈ ಬಗ್ಗೆ ಪೊಲೀಸ್‌ ಇಲಾಖೆಕ್ರಮವಹಿಸುವಂತೆ ಬೈಲುಕೊಪ್ಪೆ ಎಸ್‌ಐಪುಟ್ಟರಾಜುಗೆ ತಿಳಿಸಿದರು. ಪ್ರಕರಣ ಒಂದಕ್ಕೆಸಂಬಂಧಿಸಿದಂತೆ ಮೊಬೈಲ್‌ ಟವರಲ್‌ಲೊಕೇಶ್‌ ಹುಡುಕಾಟದಲ್ಲಿ ಇದ್ದು, ಈ ಬಗ್ಗೆಖಚಿತ ವರ್ತಮಾನ ದೊರೆತರೆಆರೋಪಿಗಳನ್ನು ಬಂಧಿಸುವುದಾಗಿ ಎಸ್‌ಐಭರವಸೆ ನೀಡಿದರು.

ವಿಧಾನಸಭೆಯಲ್ಲಿ ಕಾಡಂಚಿನ ಗ್ರಾಮದರೈತರ ಬೆಳೆನಾಶ ಸಮಸ್ಯೆಗಳು ಮತ್ತುಕಾಡುಪ್ರಾಣಿಗಳ ದಾಳಿಗೆ ಒಳಗಾದಸಾಕುಪ್ರಾಣಿಗಳ ಪರಿಹಾರ ಹೆಚ್ಚಿಸುವಂತೆಒತ್ತಾಯಿಸಿದ್ದು ಇದಕ್ಕೆ ಸರಕಾರ ಪೂರಕವಾಗಿಸ್ಪಂದಿಸಿದ್ದು ಕುರಿ,ಎಮ್ಮೆ, ಎತ್ತು ಇವುಗಳಪರಿಹಾರವನ್ನು ಹೆಚ್ಚಿಸಿದೆ ಎಂದುತಿಳಿಸಿದರು.ಈ ಸಂದರ್ಭದಲ್ಲಿ ತಾಪಂ ಸ್ಥಾಯಿ ಸಮಿತಿಅಧ್ಯಕ್ಷ ಎ.ಟಿ.ರಂಗಸ್ವಾಮಿ, ಇಒ ಸಿ.ಆರ್‌.ಕೃಷ್ಣಕುಮಾರ್‌, ಕೊಪ್ಪ ಗ್ರಾ.ಪಂ. ಅಧ್ಯಕ್ಷರೇಣುಕಾಸ್ವಾಮಿ, ಉಪಾಧ್ಯಕ್ಷೆ ಸಿಂಧು, ಪಿಡಿಒಸತೀಶ್‌, ಆರ್‌ಐ ಪ್ರದೀಪ್‌ ಎನ್‌.ಕೆ.,ಗ್ರಾಮಲೆಕ್ಕಿಗ ನವೀನ್‌ ಎಂ.ಎಸ್‌., ತಾ.ಪಂ.ಮಾಜಿ ಸದಸ್ಯ ರಘುನಾಥ್‌, ಪಶುಸಂಗೋಪನಾ ಇಲಾಖೆ ಸಹಾಯಕನಿರ್ದೇಶಕ ಡಾ.ಸೋಮಯ್ಯ, ಎಂಜಿನಿಯರ್‌ ಕುಮಾರ್‌, ಪಾಷಾ, ಮುಖಂಡರಾದ ಅಶೋಕ್‌, ಸತೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next