Advertisement
ಬಿತ್ತನೆ ಹೊತ್ತಿನಲ್ಲಿ ರಸಗೊಬ್ಬರ ಸಿಗದೇ ರೈತರು ಕಂಗಾಲಾಗಿದ್ದು, ಈ ಸಮಯದಲ್ಲಿ ಆಡಳಿತ ಚುರುಕಾಗಿರಬೇಕೆಂದು ರೈತಪರ ಹೋರಾಟಗಾರ ರಮೇಶ ಲೋಹಾರ ಆಗ್ರಹಿಸಿದ್ದಾರೆ.
Related Articles
Advertisement
ಕೃಷಿ ಇಲಾಖೆಗೆ ಸ್ಪಿಂಕ್ಲರ್ ಗಾಗಿ ಅರ್ಜಿ ಸಲ್ಲಿಸಿ ಎಡತಾಕಿದರೂ ಸೌಲಭ್ಯ ದೊರೆಯುತ್ತಿಲ್ಲ. ಅರ್ಜಿ ಸಲ್ಲಿಸಿ ವರ್ಷವಾದರೂ ಪೈಪ್-ಇನ್ನಿತರೆ ವಸ್ತುಗಳು ದೊರಕುತ್ತಿಲ್ಲ ಎಂದು ಸಾಲೇಗಾಂವ, ಖಜೂರಿ, ತೀರ್ಥ ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ. ಗ್ರಾಪಂಗಳಿಗೆ ಅಭಿವೃದ್ಧಿ ಅಧಿಕಾರಿಗಳು ಬರುತ್ತಿಲ್ಲ. ಕೆಲವರಿಗೆ ಎರಡ್ಮೂರು ಗ್ರಾಮಗಳ ಅಧಿಕಾರ ವಹಿಸಿದ್ದರಿಂದ ಅವರು ಪಟ್ಟಣದಲ್ಲೇ ಕುಳಿತು ಆಡಳಿತ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಗ್ರಾಪಂ ಆಡಳಿತ ಹಾಗೂ ಹಲವು ಇಲಾಖೆ ನಿಯಂತ್ರಣ ಕೈಗೊಳ್ಳುವ ತಾಪಂ ಕಾರ್ಯ ನಿರ್ವಹಣಾ ಅಧಿಕಾರಿ ವಿಲಾಸ್‌ರಾಜ್ ಆಡಳಿತ ಪರಿಸ್ಥಿತಿ ಕುರಿತು ಮಾಹಿತಿಗಾಗಿ ಹಲವು ಬಾರಿ ಮೊಬೈಲ್‌ನಿಂದ ಸಂಪರ್ಕಿಸಿದಾಗ, “ಸಭೆಯಲಿದ್ದೇನೆ’ ಎನ್ನುವ ಸಂದೇಶ ಬಂದಿದೆ.
ಆಡಳಿತ ಚುರುಕುಗೊಳಿಸಲು ತುರ್ತಾಗಿ ಸಭೆ ಕರೆದು ನೂನ್ಯತೆ ಸರಿಪಡಿಸುತ್ತೇನೆ. ಹಿಂದೆಯೂ ಸಭೆ ಕರೆದು ಜನರಿಗೆ ಸಕಾಲಕ್ಕೆ ಸರ್ಕಾರಿ ಸೌಲಭ್ಯ ಒದಗಿಸಬೇಕು. ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ ಮೇಲೆ ಸಾರ್ವಜನಿಕರನ್ನು ಓಡಾಡಿಸಬಾರದು ಎಂದು ತಾಕೀತು ಮಾಡಿದ್ದೇನೆ. ಯೋಜನೆಗಳ ಅನುಷ್ಠಾನಕ್ಕೆ ಹಿಂದೇಟು ಹಾಕಿ ಜನರಿಗೆ ಸ್ಪಂದಿಸದೇ ಕಚೇರಿಗೆ ಚಕ್ಕರ್ ಹಾಕಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. -ಸುಭಾಷ ಗುತ್ತೇದಾರ, ಶಾಸಕ
ಸದ್ಯ ನಾವಂತೂ ಕಚೇರಿಯಲ್ಲಿಯೇ ಇರುತ್ತೇವೆ. ಸಾರ್ವಜನಿಕರು ಅರ್ಜಿ ಸಲ್ಲಿಸಿದ 21ದಿನಗಳಲ್ಲಿ ಕಾರ್ಯ ಮಾಡಬೇಕಿದ್ದರೂ ಏಳು ದಿನಗಳಲ್ಲೇ ಮಾಡುತ್ತಿದ್ದೇವೆ. ರೈತರ ಭೂ ಸರ್ವೇ ವಿಳಂಬವಾಗುತ್ತಿರುವುದಕ್ಕೆ ಸರದಿ ಕಾರಣ. ಇದಕ್ಕೆ ಏನೂ ಮಾಡಲಾಗದು. ನಮ್ಮ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆ ಗಮನಕ್ಕೆ ಬಂದರೆ ಸರಿಪಡಿಸಲಾಗುವುದು. -ಯಲ್ಲಪ್ಪ ಸುಬೇದಾರ, ತಹಶೀಲ್ದಾರ್.